ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಗೂಗಲ್ ಆಪ್ ಬಳಸಿ, ಹಣ ಗಳಿಸುವುದು ಹೇಗೆ?

ಗೂಗಲ್ ಒಪಿನಿಯನ್ ರಿವಾರ್ಡ್ ಅಪ್ಲಿಕೇಷನ್ ಈಗ ಭಾರತದಲ್ಲೂ ಲಭ್ಯವಿದೆ. ಈ ಅಪ್ಲಿಕೇಷನ್ ಬಳಸಿಕೊಂಡು ಅಲ್ಲಿ ಕೇಳಲಾಗುವ ಸಮೀಕ್ಷೆಯ ಕೆಲ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಹಣ ಗಳಿಸಬಹುದಾಗಿದೆ

By Mahesh
|
Google Oneindia Kannada News

ಬೆಂಗಳೂರು, ಮೇ 29: ಗೂಗಲ್ ಒಪಿನಿಯನ್ ರಿವಾರ್ಡ್ ಅಪ್ಲಿಕೇಷನ್ ಈಗ ಭಾರತದಲ್ಲೂ ಲಭ್ಯವಿದೆ. ಈ ಅಪ್ಲಿಕೇಷನ್ ಬಳಸಿಕೊಂಡು ಅಲ್ಲಿ ಕೇಳಲಾಗುವ ಸಮೀಕ್ಷೆಯ ಕೆಲ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಹಣ ಗಳಿಸಬಹುದಾಗಿದೆ.

ಟರ್ಕಿ, ಸಿಂಗಪುರದಲ್ಲಿ ಹೆಚ್ಚು ಪ್ರಚಲಿತವಿದ್ದ ಈ ಆಂಡ್ರಾಯ್ಡ್ ಅಪ್ಲಿಕೇಷನ್ ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.ಗೂಗಲ್ ಒಪಿನಿಯನ್ ರಿವಾರ್ಡ್ ಅಪ್ಲಿಕೇಷನ್ ಈಗ ಭಾರತದಲ್ಲೂ ಲಭ್ಯವಿದೆ.

ಈ ಅಪ್ಲಿಕೇಷನ್ ಬಳಸಿಕೊಂಡು ಅಲ್ಲಿ ಕೇಳಲಾಗುವ ಸಮೀಕ್ಷೆಯ ಕೆಲ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಹಣ ಗಳಿಸಬಹುದಾಗಿದೆ. ಟರ್ಕಿ, ಸಿಂಗಪುರದಲ್ಲಿ ಹೆಚ್ಚು ಪ್ರಚಲಿತವಿದ್ದ ಈ ಆಂಡ್ರಾಯ್ಡ್ ಅಪ್ಲಿಕೇಷನ್ ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.['ಗೂಗಲ್ ಟ್ರಿಪ್ಸ್'ನಿಂದ ಬಸ್, ರೈಲ್ವೇ ಟಿಕೆಟ್ ಬುಕ್ಕಿಂಗ್ ಸೇವೆ]

ಗೂಗಲ್ ಆಪ್ ನಲ್ಲಿ ಕೇಳಲಾದ ಸಮೀಕ್ಷೆಯಲ್ಲಿ ಪ್ರಶ್ನೆ ಹಾಗೂ ಉತ್ತರಗಳ ಆಯ್ಕೆ ನೀಡಲಾಗಿರುತ್ತದೆ. ಒಂದು ಉತ್ತರವನ್ನು ಆಯ್ಕೆ ಮಾಡಿ ಸೂಚಿಸಿದರೆ ಸಾಕು, ಕ್ರೆಡಿಟ್ ಪಡೆಯಬಹುದಾಗಿದೆ. [ಬಾಲಕಿಗೆ ಗೂಗಲ್ ಸಿಇಒ ಪಿಚ್ಚೈ ಬರೆದ 'ಸುಂದರ' ಪತ್ರ]

ನೀವು ಉತ್ತರ ನೀಡಿದ ತಕ್ಷಣ ಅಂಕ ಸಿಗುವುದಿಲ್ಲ. ಪರಿಶೀಲನೆ ನಂತರ ಹಣ ಕ್ರೆಡಿಟ್ ಆಗಲಿದೆ.ಗೂಗಲ್ ಒಂದು ಸರ್ವೆಗೆ 10 ರೂಪಾಯಿ ನೀಡಲಿದೆ. ಗೂಗಲ್ ಒಪಿನಿಯನ್ ರಿವಾರ್ಡ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ

ರಿವಾರ್ಡ್ ಆಪ್ ಡೌನ್ ಲೋಡ್ ಆಯ್ತು ಮುಂದೆ?

ರಿವಾರ್ಡ್ ಆಪ್ ಡೌನ್ ಲೋಡ್ ಆಯ್ತು ಮುಂದೆ?

ಗೂಗಲ್ ಒಪಿನಿಯನ್ ರಿವಾರ್ಡ್ ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ವೈಯಕ್ತಿಕ ವಿವರಗಳನ್ನು ಕುರಿತಂತೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉದಾ: ಹೆಸರು, ವಿಳಾಸ, ಭಾಷೆ, ದೇಶ, ಪಿನ್ ಕೋಡ್ ಹೀಗೆ ಎಲ್ಲ ವಿವರ ನೀಡಬೇಕು.

ಪ್ರತಿ ವಾರ ಗೂಗಲ್ ಬಳಕೆದಾರರಿಗೆ ಸಮೀಕ್ಷೆಗಳನ್ನು ಕಳಿಸಲಿದೆ. ಇದಕ್ಕೆ ಸರಿಯಾದ ಉತ್ತರ ಉತ್ತರ ನೀಡಲು 24 ಗಂಟೆ ಮಾತ್ರ ಅವಕಾಶವಿರುತ್ತದೆ.

ನೀವು ನೀಡಿದ ಉತ್ತರ ಗೌಪ್ಯವಾಗಿರಲಿದೆ.

ನೀವು ನೀಡಿದ ಉತ್ತರ ಗೌಪ್ಯವಾಗಿರಲಿದೆ.

ಸಮೀಕ್ಷೆ ಸಮಯ(24 ಗಂಟೆ) ಸಮಯ ಮುಗಿದ ನಂತರ ಉತ್ತರ ನೀಡುವಂತಿಲ್ಲ. ಹೊಸ ಸಮೀಕ್ಷೆ ಬಂದ ತಕ್ಷಣ ಮೊಬೈಲ್ ನೋಟಿಫಿಕೇಷನ್ ನಲ್ಲಿ ಕಾಣಿಸಿಕೊಳ್ಳಲಿದೆ. ನಿಮ್ಮ ಉತ್ತರ ಗೌಪ್ಯವಾಗಿರಲಿದೆ. ಯಾವ ವ್ಯಕ್ತಿಗೂ ನಿಮ್ಮ ಉತ್ತರ ತಿಳಿಯುವುದಿಲ್ಲ. ನೀವು ಯಾವ ಸಮೀಕ್ಷೆ ತೆಗೆದುಕೊಂಡು ಉತ್ತರಿಸಿದ್ದೀರಿ ಎಂಬುದನ್ನು ಗೂಗಲ್ ಪ್ರಕಟಿಸುವುದಿಲ್ಲ.

ಸಂಗ್ರಹವಾದ ಕ್ರೆಡಿಟ್ ಎಲ್ಲಿರುತ್ತೆ

ಸಂಗ್ರಹವಾದ ಕ್ರೆಡಿಟ್ ಎಲ್ಲಿರುತ್ತೆ

ನೀವು ಯಾವ ಜೀಮೇಲ್ ಐಡಿ ಬಳಸಿ ಆಪ್ ಸಮೀಕ್ಷೆಯನ್ನು ಉತ್ತರಿಸಿರುತ್ತೀರೋ ಅದೇ ಇಮೇಲ್ ಐಡಿಯಿಂದ ಗೂಗಲ್ ಪ್ಲೇ ಸ್ಟೋರ್ ಓಪನ್ ಮಾಡಿದರೆ ನಿಮ್ಮ ಕ್ರೆಡಿಟ್ ಬಗ್ಗೆ ತಿಳಿಯಲಿದೆ ಈ ಗೂಗಲ್ ಪ್ಲೇ ಕ್ರೆಡಿಟ್ ಬಳಸಿ ಪ್ಲೇ ಸ್ಟೋರಿನಿಂದ ಆಪ್, ಪುಸ್ತಕ, ಸಿನಿಮಾ, ಹಾಡು ಹೀಗೆ ನಿಮ್ಮ ಕ್ರೆಡಿಟ್ ಮಿತಿಗೆ ಲಭ್ಯವಾಗಿರುವುದನ್ನು ಖರೀದಿಸಬಹುದು.

ಆಪ್ ಇದ್ದ ತಕ್ಷಣ ಸರ್ವೆ ಸಿಗಲ್ಲ

ಆಪ್ ಇದ್ದ ತಕ್ಷಣ ಸರ್ವೆ ಸಿಗಲ್ಲ

ನೀವು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡ ತಕ್ಷಣ ನಿಮಗೆ ಸರ್ವೆ ಮಾಡಲು ಸಿಗುವುದಿಲ್ಲ. ನಿಮ್ಮ ಐಡಿ ಸರ್ವೆಗೆ ಲಭ್ಯವಾಗಿದೆ ಎಂಬುದರ ಬಗ್ಗೆ ಗೂಗಲ್ ನೋಟಿಫಿಕೇಷನ್ ಕಳಿಸಲಿದೆ. ನಂತರವಷ್ಟೇ ನೀವು ಉತ್ತರಿಸಲು ಆರಂಭಿಸಬಹುದು. ಸರ್ವೆಗೆ ನೀಡಿದ ಉತ್ತರಗಳನ್ನು ಪರಿಶೀಲಿಸಿ, ಕ್ರೆಡಿಟ್ ನೀಡುವ ಅಥವಾ ತಿರಸ್ಕರಿಸುವ ಹಕ್ಕು ಗೂಗಲ್ ಹೊಂದಿದೆ.

English summary
Google Opinion Rewards app now available in India. Google had extended the app’s availability to India, Singapore, and Turkey, according to the description on the Play Store for the app. Know how to use Google Opinion Rewards app and earn credits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X