ಬಾಲಕಿಗೆ ಗೂಗಲ್ ಸಿಇಒ ಪಿಚ್ಚೈ ಬರೆದ 'ಸುಂದರ' ಪತ್ರ

Posted By:
Subscribe to Oneindia Kannada

ಲಂಡನ್, ಫೆಬ್ರವರಿ 16: ಆಕೆಗಿನ್ನು ಏಳರ ಹರೆಯ, ಆಗಲೇ ಉದ್ಯೋಗದ ಬಗ್ಗೆ ಚಿಂತೆ, ಉದ್ಯೋಗ ಮಾಡಲು ಒಳ್ಳೆ ಸಂಸ್ಥೆ ಯಾವುದು ಎಂದು ತನ್ನಪ್ಪನನ್ನು ಕೇಳಿದ್ದಾಳೆ. ಅದಕ್ಕೆ ಅವರು ಗೂಗಲ್ ಎಂದು ಹೇಳಿದ್ದಾರೆ. ತಕ್ಷಣವೇ ಗೂಗಲ್ ಬಾಸ್ ಗೆ ಉದ್ಯೋಗ ನೀಡಿ ಎಂದು ಪತ್ರ ಬರೆದಿದ್ದಾಳೆ. ಮುಂದೇನಾಯ್ತು ಓದಿ..

ಕೋಲ್ ಬ್ರಿಡ್ಜ್ ವಾಟರ್ ಎಂಬ ಹೆಸರಿನ ಬಾಲಕಿ ಬರೆದ ಪತ್ರ ಗೂಗಲ್ ಸಿಇಒ ಸುಂದರ್ ಪಿಚೈ ಕೈ ಸೇರಿದ್ದಲ್ಲದೆ ಆತ್ಮೀಯ ಉತ್ತರವೂ ಸಿಕ್ಕಿದೆ. ಸ್ಪೂರ್ತಿದಾಯಕ ಹಾಗೂ ಪ್ರೋತ್ಸಾಹದಾಯಕ ಮಾತುಗಳಿದ್ದ ಪತ್ರ ಕಂಡು ಬಾಲಕಿ ಹಾಗೂ ಆಕೆಯ ಪೋಷಕರಿಗೆ ಅಚ್ಚರಿಯಾಗಿದೆ.

Google CEO Sundar Pichai replies to 7-Year-Old Girl Applied for a Job at Google

ಗೂಗಲ್ ಸಂಸ್ಥೆಯಲ್ಲಿ ಉದ್ಯೋಗಿ ಸ್ನೇಹಿ ವಾತಾವರಣ ಇದೆ. ಕಚೇರಿಯಲ್ಲಿ ಬೀನ್ ಬ್ಯಾಗ್ ಚೇರ್ ಗಳಿವೆ, ಗೋ ಕಾರ್ಟಿಂಗ್, ಸ್ಲೈಡ್ಸ್, ಆಟದ ಮೈದಾನ, ಬೇಕಾದ ತಿಂದಿ ತಿನಿಸು ಹೀಗೆ ಅಪ್ಪ ವಿವರಣೆ ನೀಡಿದ್ದು, ಕೋಲ್ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿತ್ತು.

ಒಂದು ದಿನ ಗೂಗಲ್ ಸೇರಬೇಕಾದರೆ ಏನು ಮಾಡಬೇಕು ಎಂದು ಕೇಳಿದ್ದಾಳೆ. ಅದಕ್ಕೆ ಪತ್ರ ಬರೆದು ಅರ್ಜಿ ಹಾಕಬೇಕು ಎಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕೋಲ್, ತನ್ನ ಕಲ್ಪನೆಗೆ ತೋರಿದಂತೆ ಉದ್ಯೋಗಾರ್ಥಿಯಾಗಿ ಪತ್ರ ಬರೆದಿದ್ದಾಳೆ.

ಪತ್ರದಲ್ಲಿ ನನಗೆ ಕಂಪ್ಯೂಟರ್, ರೊಬೋಟ್ಸ್, ಟ್ಯಾಬ್ಲೆಟ್ಸ್ ಇಷ್ಟ, ನಾನು ಶಾಲೆಯಲ್ಲಿ ಒಳ್ಳೆ ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದಾಳೆ. ಗೂಗಲ್ ಅಷ್ಟೇ ಅಲ್ಲ ಚಾಕಲೋಟ್ ಕಾರ್ಖಾನೆಯೊಂದರಲ್ಲಿ ಕಾರ್ಯ ನಿರ್ವಹಿಸಬೇಕು, ಒಲಿಂಪಿಕ್ಸ್ ಈಜು ಸ್ಪರ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆಯಿದೆಯಂತೆ. ಈ ಮುನ್ನ ಫಾದರ್ ಕ್ರಿಸ್ಮಸ್ ಗೆ ಪತ್ರ ಬರೆದಿದ್ದು ಬಿಟ್ಟರೆ ಗೂಗಲ್ ಬಾಸ್ ಗೆ ಮಾತ್ರ ಈಕೆ ಪತ್ರ ಬರೆದಿರುವುದು ವಿಶೇಷ.

Google CEO Sundar Pichai replies to 7-Year-Old Girl Applied for a Job at Google

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chloe Bridgewater(7 Year old) wrote an adorable job application letter to Google CEO Sundar Pichai without any expectations of a reply. However, she was in for a pleasant surprise when the CEO himself replied to the girl with words of encouragement and motivation
Please Wait while comments are loading...