ಹೋಂಡಾ ವರ್ಷಾಂತ್ಯದ ಆಫರ್: ಕಾರುಗಳ ಮೇಲೆ 2.5 ಲಕ್ಷ ರೂ. ತನಕ ಡಿಸ್ಕೌಂಟ್
ನವದೆಹಲಿ, ಡಿಸೆಂಬರ್ 03: ಹೋಂಡಾ ಕಾರ್ಸ್ ಇಂಡಿಯಾ ವರ್ಷಾಂತ್ಯದ ಆಫರ್ ಪ್ರಕಟಿಸಿದ್ದು, ಆಕರ್ಷಕ ಬೆಲೆಯಲ್ಲಿ ತನ್ನ ಬಿಎಸ್6 ಮಾದರಿಯ ಕಾರುಗಳನ್ನು ಮಾರಾಟ ಮಾಡಲಿದೆ. ಕಾರುಗಳ ಮೇಲೆ ವರ್ಷಾಂತ್ಯದ ಆಫರ್ 2.5 ಲಕ್ಷ ರೂ.ಗಳವರೆಗೆ ನೀಡಲಿದೆ.
ಕಾರು ಖರೀದಿಯ ಜೊತೆಗೆ ಹೊಸ ಆಫರ್‌ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಡಿಸ್ಕೌಂಟ್, ಎಕ್ಸೆಂಡ್ ವಾರಂಟಿ ಮತ್ತು ಆಯ್ದ ಕಾರು ಮಾದರಿಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ.
ಎಕ್ಸ್‌ಚೇಂಜ್ ಡಿಸ್ಕೌಂಟ್ ಕ್ರಮವಾಗಿ 6,000 ಮತ್ತು 10,000 ರೂ. ಪ್ರಯೋಜನಗಳನ್ನು ಪಡೆಯಬಹುದು. ಜಾಜ್, ಅಮೇಜ್, ಸಿಟಿ, ವಿಆರ್-ವೊ, ಡಬ್ಲ್ಯುಆರ್-ವಿ, ಮತ್ತು ಸಿವಿಕ್, ಅಮೇಜ್ ವಿಶೇಷ ಆವೃತ್ತಿಯ ಕಾರುಗಳ ಮೇಲೂ ರಿಯಾಯಿತಿ ನೀಡಲಾಗಿದೆ. ಈ ಕೊಡುಗೆಗಳು ಡಿಸೆಂಬರ್ 31ರವರೆಗೆ ಲಭ್ಯವಿದೆ.

ಹೋಂಡಾ ಅಮೇಜ್
ಜಪಾನ್ ಮೂಲದ ಕಾರು ತಯಾರಕ ಹೋಂಡಾ ಅಮೇಜ್ ಕಾರುಗಳ 37,000 ರೂ.ವರೆಗೆ ಆಫರ್ ನೀಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಯ ವಾಹನದ ಮೇಲೆ 15,000 ರೂ.ಗಳವರೆಗೆ ಕ್ಯಾಶ್ ಡಿಸ್ಕೌಂಟ್ ನೀಡಿದೆ. ಜೊತೆಗೆ ಎಕ್ಸ್‌ಚೇಂಜ್ ಮಾಡುವವರಿಗೆ 10,000 ರೂ.ಗಳವರೆಗೆ ಹೆಚ್ಚುವರಿ ಡಿಸ್ಕೌಂಟ್ ನೀಡುತ್ತದೆ.
ಹೋಂಡಾ ಅಮೇಜ್ ಕಾರುಗಳ ಖರೀದಿ ಜೊತೆಗೆ ನಾಲ್ಕು ಮತ್ತು ಐದನೇ ವರ್ಷಕ್ಕೆ ಸುಮಾರು 12,000 ಮೌಲ್ಯದ ವಾರೆಂಟಿಯನ್ನು ವಿಸ್ತರಿಸಲಾಗುವುದು. ಹೊಸ ಆಫರ್ ಅಮೆಜ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳ ಮೇಲೂ ಅನ್ವಯವಾಗಲಿದೆ.
ಹೋಂಡಾ ಅಮೇಜ್ ಕಾರಿನ ಎಕ್ಸ್‌ಕ್ಲೂಸಿವ್ ಎಡಿಷನ್ ಕಾರು ಖರೀದಿಯ ಮೇಲೆ 27 ಸಾವಿರ ರೂ. ಡಿಸ್ಕೌಂಟ್ ನೀಡಲಾಗುತ್ತಿದ್ದು, 27 ಸಾವಿರದಲ್ಲಿ ರೂ.ನಲ್ಲಿ 12 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು 15 ಸಾವಿರ ರೂ. ಎಕ್ಸ್‌ಚೆಂಜ್ ಆಫರ್ ಲಭ್ಯವಿದೆ.

ಹೋಂಡಾ ಜಾಜ್
ಹೋಂಡಾ ಜಾಜ್ 2020ರ ಮಾಡೆಲ್ ಕಾರುಗಳ ಮೇಲೆ ಒಟ್ಟಾರೆ 40,000 ರೂಪಾಯಿವರೆಗೆ ಡಿಸ್ಕೌಂಟ್ ಇದೆ. ಇದರಲ್ಲಿ 25,000 ಕ್ಯಾಶ್ ಡಿಸ್ಕೌಂಟ್ ಆಗಿದ್ದು, 15,000 ರೂಪಾಯಿ ಎಕ್ಸ್‌ಚೆಂಜ್ ಡಿಸ್ಕೌಂಟ್ ಸಿಗಲಿದೆ.

ಹೋಂಡಾ ಸಿಟಿ
ಇನ್ನು 5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಖರೀದಿಯ ಮೇಲೆ ರೂ.30 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಸಿವಿಕ್ ಸೆಡಾನ್ ಕಾರು ಖರೀದಿಯ ಮೇಲೆ ಗರಿಷ್ಠ ರೂ.2.50 ಲಕ್ಷ ಆಫರ್ ಪಡೆಯಬಹುದಾಗಿದೆ. ಸಿವಿಕ್ ಕಾರು ಖರೀದಿಸುವ ಗ್ರಾಹಕರಿಗೆ ಪೆಟ್ರೋಲ್ ಮಾದರಿಯ ಮೇಲೆ 1 ಲಕ್ಷ ರೂ. ಕ್ಯಾಶ್ ಡಿಸ್ಕೌಂಟ್ ಪಡೆಯಬಹುದಾಗಿದ್ದು, ಡೀಸೆಲ್ ಆವೃತ್ತಿಯ ಮೇಲೆ ರೂ.2.50 ಲಕ್ಷ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ.

ಹೋಂಡಾ WR-V
ಡಬ್ಲ್ಯುಆರ್-ವಿ ಸ್ಟ್ಯಾಂಡರ್ಡ್ ಮಾಡೆಲ್ ಕಾರುಗಳ ಖರೀದಿ ಮೇಲೆ 40,000 ರೂ.ಗಳವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯು ನೀಡುವ 40,000 ಆಫರ್‌ನಲ್ಲಿ 25,000 ರೂ. ಕ್ಯಾಶ್‌ಬ್ಯಾಕ್ ಮತ್ತು 15,000 ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.












Click it and Unblock the Notifications