ಜಿಎಸ್ಟಿ ಸಭೆ: ಯಾವ ಯಾವ ವಸ್ತು ಮೇಲಿನ ತೆರಿಗೆ ಇಳಿಕೆ?
ಗುವಾಹತಿ, ನವೆಂಬರ್ 10: ಹಣಕಾಸು ಸಚಿವ ಅರುಣ್ ಜೈಟ್ಲಿ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿಯ ಸಭೆ ನಡೆಯಲಿದ್ದು, ಸರಿ ಸುಮಾರು 200ಕ್ಕೂ ಅಧಿಕ ವಸ್ತಗಳ ಮೇಲಿನ ಜಿಎಸ್ಟಿ ತೆರಿಗೆ ಹೊರೆ ಇಳಿಕೆಯಾಗುವ ಸಾಧ್ಯತೆಯಿದೆ.
ಸಣ್ಣ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು 200ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರ ಶೇ.28ರಿಂದ 18ಕ್ಕೆ ಕಡಿತಗೊಳಿಸಲಾಗುವುದು ಎಂದು ಬಿಹಾರದ ಡಿಸಿಎಂ ಹಾಗೂ ಜಿಎಸ್‌ಟಿಎನ್ (Goods and Services Tax Network ) ಸಮಿತಿಯ ಮುಖ್ಯಸ್ಥ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.

ದಿನ ಬಳಕೆಯ ನೈರ್ಮಲ್ಯ ಸಾಧನಗಳು, ಸಲಕರಣೆಗಳು, ಸೂಟ್‌ಕೇಸ್, ವಾಲ್‌ಪೇಪರ್, ಪ್ಲೈವುಡ್, ಸ್ಟೇಶನರಿ ವಸ್ತುಗಳು, ಸಂಗೀತ ವಾದ್ಯಗಳು ಸೇರಿದಂತೆ ಮತ್ತಿತರ 200ಕ್ಕೂ ಹೆಚ್ಚು ವಸ್ತುಗಳ ಜಿಎಸ್‌ಟಿ ತೆರಿಗೆ ದರ ಇಳಿಕೆಯಾಗುವ ಸಂಭವ ಇದೆ












Click it and Unblock the Notifications