ಹೆಚ್‌ಡಿಎಫ್‌ಸಿ ಬ್ಯಾಂಕ್ ಹೊಸ ಸಿಇಒ ಆಗಿ ಶಶಿಧರ್ ಜಗದೀಶನ್ ನೇಮಕ: ಷೇರು ಶೇ. 6ರಷ್ಟು ಏರಿಕೆ
ಮುಂಬೈ, ಆಗಸ್ಟ್ 04: ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕಿನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ(ಸಿಇಒ) ಶಶಿಧರ್ ಜಗದೀಶನ್ ಅವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಅನುಮೋದಿಸಿದ. ಈ ವರದಿ ಹೊರಬಿದ್ದ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್‌ನ ಷೇರುಗಳು ಮಂಗಳವಾರ ಸುಮಾರು ಶೇ.6ರಷ್ಟು ಏರಿಕೆ ಕಂಡವು.
ಇಲ್ಲಿಯವರೆಗೆ, ಈ ಷೇರು ಬಿಎಸ್‌ಇಯಲ್ಲಿ 1,059.90 ರ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಮಧ್ಯಾಹ್ನ 11.15 ಕ್ಕೆ, ಷೇರುಗಳು ಪ್ರತಿ 1,045.40 ಕ್ಕೆ ವಹಿವಾಟು ನಡೆಸಿದ್ದು, ಹಿಂದಿನ ಅವಧಿಯ ಮುಕ್ತಾಯಕ್ಕಿಂತ ಶೇ. 4 ಕ್ಕಿಂತ ಹೆಚ್ಚಾಗಿದೆ.
ಅಕ್ಟೋಬರ್‌ನಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿಯಲಿರುವ ಆದಿತ್ಯ ಪುರಿಯಿಂದ ಜಗದೀಶನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ 70 ನೇ ವರ್ಷಕ್ಕೆ ಕಾಲಿಡುತ್ತಿರುವ ಪುರಿ, 1994 ರಲ್ಲಿ ಪ್ರಾರಂಭವಾದಾಗಿನಿಂದ ಬ್ಯಾಂಕ್‌ನೊಂದಿಗಿದ್ದಾರೆ.

ಅವರು ಇತ್ತೀಚೆಗೆ ಜುಲೈ 21 ರಿಂದ ಜುಲೈ 23 ರವರೆಗೆ 7.42 ಮಿಲಿಯನ್ ಷೇರುಗಳನ್ನು ಅಥವಾ 842.87 ಕೋಟಿ ಮೌಲ್ಯದ ಶೇ. 0.13 ಷೇರುಗಳನ್ನು ಮಾರಾಟ ಮಾಡಿದರು. ಇಂದಿನಂತೆ, ಖಾಸಗಿ ವಲಯದ ಬ್ಯಾಂಕಿನ ಮಾರುಕಟ್ಟೆ ಬಂಡವಾಳೀಕರಣವು(ಮಾರ್ಕೆಟ್ ಕ್ಯಾಪ್) 5.74 ಟ್ರಿಲಿಯನ್ ಆಗಿದೆ.












Click it and Unblock the Notifications