ಹಿಮಾಚ್ಛಾದಿತ ಕಾಶ್ಮೀರದಲ್ಲಿ ಸಾಹಸ ಕ್ರೀಡೆ ಕನಸು ನನಸು

Subscribe to Oneindia Kannada

ಬೆಂಗಳೂರು, ಜನವರಿ, 19: ಕಾಶ್ಮೀರಕ್ಕೆ ತೆರಳಿ ಅಲ್ಲಿನ ಹಿಮ ಪ್ರದೇಶದಲ್ಲಿ ಆಡುವ ಕನಸು ಯಾರಿಗೆ ತಾನೆ ಇರುವುದಿಲ್ಲ? ನಿಮಗೂ ಒಂದೆಲ್ಲಾ ಒಂದು ಬಾರಿ ಸ್ವಚ್ಛಂದವಾಗಿ ಕಾಶ್ಮೀರದಲ್ಲಿ ಪ್ರವಾಸ ಮಾಡುತ್ತ ಜೀವನದ ಕ್ಷಣಗಳನ್ನು ಸುಂದರವಾಗಿಸಿಕೊಳ್ಳಬೇಕು ಎಂದು ಅನಿಸಿಯೇ ಇರುತ್ತದೆ. ಆದರೆ ಇದೆಲ್ಲವೂ ನಾವಂದುಕೊಂಡಷ್ಟು ಹಣದಲ್ಲಿ ಸಾಧ್ಯವೇ?

ಹೌದು ಸಾಧ್ಯ... ಹೇಗೆ ಬಲ್ಲೀರಾ? ಇಟ್ಸ್ ಟೈಮ್ ಟು ಸ್ಕೈ .. ಕಾಶ್ಮೀರದ ಗುಲ್ ಮಾರ್ಗ್ ಸ್ನೋ ಸ್ಕೂಲ್ ನಿಮ್ಮ ಕನಸನ್ನು ನನಸು ಮಾಡುತ್ತಿದೆ. ಕಾಶ್ಮೀರದಲ್ಲಿ ನೀವು ಪ್ರವಾಸ ಮಾಡಿ ಖುಷಿ ಅನುಭವಿಸುವುದು ಮಾತ್ರವಲ್ಲದೇ ಸ್ಕೀಯಿಂಗ್ ತರಬೇತಿಯನ್ನು ಪಡೆದುಕೊಳ್ಳಬಹುದು.

ಸಾಹಸ ಕ್ರೀಡೆಯಲ್ಲಿಯೂ ಭಾಗವಹಿಸಿ ನಿಮ್ಮ ಜೀವನದ ನಿಜ ಆನಂದ ಸವಿಯಬಹುದು. ಬೇಸಿಕ್ ,ಇಂಟರ್ ಮಿಡಿಯಟ್ ಮತ್ತು ಅಡ್ವಾನ್ಸ್ ಎಂಬ ಮೂರು ವಿಧದ ತರಬೇತಿಯನ್ನು ಹೊಂದಿ ರಾಷ್ಟ್ರೀಯ ಮಟ್ಟದ ಆಟಗಾರರಾಗಿಯೂ ಗುರುತಿಸಿಕೊಳ್ಳಬಹುದು.[ನಂದಿ ಬೆಟ್ಟವನ್ನು ಒಂದು ಸುತ್ತು ಹಾಕಿಕೊಂಡು ಬನ್ನಿ]

ಗುಮ್ ಮಾರ್ಗ್ ಸ್ಕೂಲ್ ಫೇಸ್ ಬುಕ್ ಖಾತೆಗೂ ಭೇಟಿ ನೀಡಬಹುದು

ಉತ್ತಮ ವಸತಿ

ಉತ್ತಮ ವಸತಿ

ನೀವು ಶ್ರೀ ನಗರಕ್ಕೆ ತೆರಳಿದರೆ ಅಲ್ಲಿಂದ ಮುಂದಿನ ಎಲ್ಲ ವೆಚ್ಚವನ್ನು ಗುಲ್ ಮಾರ್ಗ್ ಸ್ಕೂಲ್ ನೋಡಿಕೊಳ್ಳುತ್ತದೆ. ಉತ್ತಮ ಹೋಟೆಲ್ ಗಳಲ್ಲಿ ನಿಮಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಅಲ್ಲದೇ ಇಲ್ಲಿಯೂ ವಿವಿಧ ಪ್ಯಾಕೇಜ್ ಆಯ್ಕೆಗಳಿರುತ್ತವೆ.

ಸ್ಕೈಯಿಂಗ್ ಸ್ಫೋರ್ಟ್

ಸ್ಕೈಯಿಂಗ್ ಸ್ಫೋರ್ಟ್

ಸ್ಕೀಯಿಂಗ್ ಸ್ಫೋರ್ಟ್ ಸ್ಕೇಟಿಂಗ್ ಗಿಂತ ಭಿನ್ನವಾದದ್ದು. ಒಲಿಂಪಿಕ್ಸ್ ನಲ್ಲಿ ಸಹ ಈ ಆಟ ಇರುತ್ತದೆ. ತರಬೇತಿ ಪಡೆದ ತಜ್ಞರು ನಿಮಗೆ ಆಟದ ವಿವಿಧ ಮಜಲುಗಳನ್ನು ಹೇಳಿಕೊಡುತ್ತಾರೆ. ಸ್ಕೇಟಿಂಗ್ ನಲ್ಲಿ ಉರುಳುವ ಚಕ್ರಗಳನ್ನು ಬಳಸಿದರೆ ಇಲ್ಲಿ ಬ್ಲೇಡ್ ಗಳನ್ನು ಬಳಸಲಾಗುತ್ತದೆ.

ಎಲ್ಲ ಬಗೆಯ ತರಬೇತಿ

ಎಲ್ಲ ಬಗೆಯ ತರಬೇತಿ

ಗುಲ್ ಮಾರ್ ಸ್ಕೂಲ್ ನಿಮಗೆ ಒಂಭತ್ತು ದಿನಗಳ ಆಟದ ಮಜಾ ನೀಡಲಿದೆ.ಮೊದಲು ಹಿಮದ ಮೇಲೆ ಕಾಲಿಗೆ ಬ್ಲೇಡ್ ಅಳವಡಿಸಿಕೊಂಡು ನಡೆಯುವುದರ ಬಗ್ಗೆ ತರಬೇತಿ ನೀಡಲಾಗುವುದು.

ಕಡಿಮೆ ದರ

ಕಡಿಮೆ ದರ

ವ್ಯಕ್ತಿಯೊಬ್ಬರಿಗೆ 17, 990 ರು. ಗಳನ್ನು ಶುಲ್ಕವಾಗಿ ತೆಗೆದುಕೊಳ್ಳಲಾಗುವುದು. ಶ್ರೀನಗರಕ್ಕೆ ತೆರಳಿದ ನಂತರ ನಿಮ್ಮ ಪ್ರವಾಸ, ವಸತಿ ಎಲ್ಲ ವ್ಯವಸ್ಥೆಗಳನ್ನು ಸಂಸ್ಥೆಯೇ ನೋಡಿಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗೆ 9739459898ಕ್ಕೆ ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Based on the demand, Gulmarg Snow School introducing a New Pacakge for Nataure lovers. Total 9 day Kashmir package will cost 17,990 Rs. for more details please contact 9739459898.
Please Wait while comments are loading...