ಜುಲೈ 2021ರಲ್ಲಿ ಜಿಎಸ್‌ಟಿ ಆದಾಯ ಸಂಗ್ರಹ 1,16,393 ಕೋಟಿ ರು
ನವದೆಹಲಿ, ಆಗಸ್ಟ್ 02: ಜುಲೈ 2021ರಲ್ಲಿ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹ 1,16,393 ಕೋಟಿ ರೂ ಆಗಿದ್ದು, ಆ ಪೈಕಿ ಸಿಜಿಎಸ್‌ಟಿ 22,197 ಕೋಟಿ ರೂ, ಎಸ್ ಜಿಎಸ್‌ಟಿ 28,541 ಕೋಟಿ ರೂ, ಐಜಿಎಸ್‌ಟಿ 57,864 ಕೋಟಿ ರೂ. (ಇದರಲ್ಲಿ 27,900 ಕೋಟಿ ರೂ. ಆಮದು ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ) ಮತ್ತು 7,790 ಕೋಟಿ ರೂ. ಸೆಸ್ ಆಗಿದ್ದು, (ಇದರಲ್ಲಿ 815 ಕೋಟಿ ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ ). ಈ ಮೇಲಿನ ಅಂಕಿ ಅಂಶಗಳಲ್ಲಿ 2021ರ ಜುಲೈ 1ರಿಂದ ಜು.31ರವರೆಗೆ ಫೈಲ್ ಆಗಿರುವ ಜಿಎಸ್‌ಟಿಆರ್-3 ಬಿ ಮತ್ತು ಐಜಿಎಸ್‌ಟಿ ಮತ್ತು ಇದೇ ಅವಧಿಯಲ್ಲಿ ಆಮದು ವಸ್ತುಗಳಿಂದ ಸಂಗ್ರಹವಾದ ಸೆಸ್ ಸಹ ಸೇರಿದೆ.
2021ರ ಜುಲೈ 1ರಿಂದ 5ರವರೆಗೆ ಜಿಎಸ್‌ಟಿ ರಿಟರ್ನ್ 4,937 ಕೋಟಿ ರೂ, ಸಂಗ್ರಹವಾಗಿದೆ ಇದರಲ್ಲಿ ಜೂನ್ 2021ರ ತಿಂಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ನೀಡಲಾಗಿದ್ದು, ಅದರಲ್ಲಿ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆ ಹಿನ್ನೆಲೆಯಲ್ಲಿ ಸರಾಸರಿ ವಹಿವಾಟು 5 ಕೋಟಿ ವರೆಗೆ ಹೊಂದಿರುವ ತೆರಿಗೆ ಪಾವತಿದಾರರಿಗೆ ಜೂನ್ ತಿಂಗಳ 21ರವರೆಗೆ 15 ದಿನಗಳಲ್ಲಿ ವಿಳಂಬವಾಗಿ ಪಾವತಿ ಮಾಡಿದರೂ ಸಹ ಬಡ್ಡಿ ಮನ್ನಾ/ವಿನಾಯ್ತಿ ಸೇರಿ ಹಲವು ಪರಿಹಾರ ಕ್ರಮಗಳನ್ನು ತೆರಿಗೆ ಪಾವತಿದಾರರಿಗೆ ಪ್ರಕಟಿಸಲಾಗಿತ್ತು.
ಸರ್ಕಾರ ಮಾಮೂಲಿನಂತೆ 28,087 ಕೋಟಿ ಸಿಜಿಎಸ್‌ಟಿ ಮತ್ತು 24,100 ಕೋಟಿ ಎಸ್‌ಜಿಎಸ್‌ಟಿ ಮೊತ್ತವನ್ನು ಪಾವತಿಸಿದೆ. ಜುಲೈ 2021ರಲ್ಲಿ ಕೇಂದ್ರ ಮತ್ತು ರಾಜ್ಯಗಳು ನಿಗದಿತ ಪಾವತಿಗಳ ನಂತರ 50,284 ಕೋಟಿ ಸಿಜಿಎಸ್‌ಟಿ ಮತ್ತು 52,641 ಕೋಟಿ ಎಸ್‌ಜಿಎಸ್‌ಟಿಯನ್ನು ಸಂಗ್ರಹ ಮಾಡಿದೆ.

ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಆದಾಯ ಹೆಚ್ಚಳ:
2021ರ ಜುಲೈನಲ್ಲಿ ಸಂಗ್ರಹಿಸಿರುವ ಜಿಎಸ್‌ಟಿ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.33ರಷ್ಟು ಅಧಿಕವಾಗಿದೆ. ತಿಂಗಳ ಅವಧಿಯಲ್ಲಿ ಸರಕುಗಳ ಆಮದಿನ ಆದಾಯವು ಶೇ. 36ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಲ್ಲಿ ಬಂದ ಆದಾಯಕ್ಕಿಂತ ಶೇ.32ರಷ್ಟು ಹೆಚ್ಚಾಗಿದೆ.
ಜೂನ್ 2021ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ ₹92,849 ಕೋಟಿಯಾಗಿದ್ದು, ಅದರಲ್ಲಿ ಸಿಜಿಎಸ್‌ಟಿ ₹16,424 ಕೋಟಿ, ಎಸ್‌ಜಿಎಸ್‌ಟಿ 20,397, ಐಜಿಎ ಎಸ್ ಟಿ ₹49,079 ಕೋಟಿ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ, ₹25,762 ಕೋಟಿ ಸೇರಿದಂತೆ) ಮತ್ತು ಸೆಸ್ ₹6,949 ಕೋಟಿ (ಸರಕುಗಳ ಆಮದಿಗೆ ಸಂಗ್ರಹಿಸಿದ ₹809 ಕೋಟಿ ಸೇರಿದಂತೆ) ಎಂದು ವಿತ್ತ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಜಿಎಸ್ಟಿ ಸಂಗ್ರಹ ಸತತ 8 ತಿಂಗಳು 1 ಲಕ್ಷ ಕೋಟಿಗೂ ಅಧಿಕ ಮುಂದುವರಿದಿದೆ, ಆದರೆ ಜೂನ್ 2021ರಲ್ಲಿ 1 ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು, ಜೂನ್ ತಿಂಗಳಲ್ಲಿ ಸಂಗ್ರಹವಾಗಿದ್ದ ಮೊತ್ತ ಬಹುತೇಕ 2021ರ ಮೇ ತಿಂಗಳಿಗೆ ಸೇರಿದ್ದು, ಏಕೆಂದರೆ ಕೋವಿಡ್ ಕಾರಣದಿಂದಾಗಿ ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಅಥವಾ ಭಾಗಶಃ ಲಾಕ್ ಡೌನ್ ವಿಧಿಸಿರುವುದು ಕಾರಣವಾಗಿತ್ತು.
ಕೋವಿಡ್ ನಿರ್ಬಂಧಗಳ ಸಡಿಲಿಕೆ ಪರಿಣಾಮ, ಜಿಎಸ್‌ಟಿ ಆದಾಯ ಸಂಗ್ರಹ 2021ರ ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ.ಗೂ ಮೇಲೇರಿದೆ, ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸಂಕೇತವಾಗಿದೆ. ಮುಂದಿನ ತಿಂಗಳುಗಳಲ್ಲಿಯೂ ಸಹ ಜಿಎಸ್‌ಟಿ ಸಂಗ್ರಹ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ. (ಅಂಕಿ ಅಂಶ ಕೃಪೆ: ವಿತ್ತ ಸಚಿವಾಲಯ)
| 2021ರ ಜುಲೈನಲ್ಲಿ ರಾಜ್ಯವಾರು ಜಿಎಸ್‌ಟಿ ಆದಾಯ ಸಂಗ್ರಹ ವಿವರ | ||||
|---|---|---|---|---|
| ಕ್ರಮ ಸಂಖ್ಯೆ | ರಾಜ್ಯ | ಜುಲೈ 2020 | ಜುಲೈ 2021 | ಪ್ರಗತಿ |
| 01 | ಜಮ್ಮು ಮತ್ತು ಕಾಶ್ಮೀರ | 298 | 432 | 45% |
| 02 | ಹಿಮಾಚಲ ಪ್ರದೇಶ | 605 | 667 | 10% |
| 03 | ಪಂಜಾಬ್ | 1,188 | 1,533 | 29% |
| 04 | ಚಂಡಿಗಢ | 137 | 169 | 23% |
| 05 | ಉತ್ತರಾಖಂಡ | 988 | 1,106 | 12% |
| 06 | ಹರಿಯಾಣ | 3,483 | 5,330 | 53% |
| 07 | ದೆಹಲಿ | 2,629 | 3,815 | 45% |
| 08 | ರಾಜಸ್ಥಾನ | 2,797 | 3,129 | 12% |
| 09 | ಉತ್ತರ ಪ್ರದೇಶ | 5,099 | 6,011 | 18% |
| 10 | ಬಿಹಾರ | 1,061 | 1,281 | 21% |
| 11 | ಸಿಕ್ಕಿಂ | 186 | 197 | 6% |
| 12 | ಅರುಣಾಚಲ ಪ್ರದೇಶ | 33 | 55 | 69% |
| 13 | ನಾಗಾಲ್ಯಾಂಡ್ | 25 | 28 | 11% |
| 14 | ಮಣಿಪುರ | 25 | 37 | 48% |
| 15 | ಮಿಜೋರಾಂ | 16 | 21 | 31% |
| 16 | ತ್ರಿಪುರ | 48 | 65 | 36% |
| 17 | ಮೇಘಾಲಯ | 120 | 121 | 1% |
| 18 | ಅಸ್ಸಾಂ | 723 | 882 | 22% |
| 19 | ಪಶ್ಚಿಮ ಬಂಗಾಳ | 3,010 | 3,463 | 15% |
| 20 | ಜಾರ್ಖಂಡ್ | 1,340 | 2,056 | 54% |
| 21 | ಒಡಿಶಾ | 2,348 | 3,615 | 54% |
| 22 | ಚತ್ತಿಸ್ ಗಢ | 1,832 | 2,432 | 33% |
| 23 | ಮಧ್ಯಪ್ರದೇಶ | 2,289 | 2,657 | 16% |
| 24 | ಗುಜರಾತ್ | 5,621 | 7,629 | 36% |
| 25 | ದಾಮನ್ ಮತ್ತು ದಿಯು | 77 | 0 | -99% |
| 26 | ದಾದ್ರ ಮತ್ತು ನಾಗರ್ ಹವೇಲಿ | 130 | 227 | 74% |
| 27 | ಮಹಾರಾಷ್ಟ್ರ | 12,508 | 18,899 | 51% |
| 28 | ಕರ್ನಾಟಕ | 6,014 | 6,737 | 12% |
| 29 | ಗೋವಾ | 257 | 303 | 18% |
| 30 | ಲಕ್ಷದ್ವೀಪ | 2 | 1 | -42% |
| 31 | ಕೇರಳ | 1,318 | 1,675 | 27% |
| 32 | ತಮಿಳುನಾಡು | 4,635 | 6,302 | 36% |
| 33 | ಪುದುಚೆರಿ | 136 | 129 | -6% |
| 34 | ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | 18 | 19 | 6% |
| 35 | ತೆಲಂಗಾಣ | 2,876 | 3,610 | 26% |
| 36 | ಆಂಧ್ರ ಪ್ರದೇಶ | 2,138 | 2,730 | 28% |
| 37 | ಲಡಾಖ್ | 7 | 13 | 95% |
| 38 | ಇತರೆ ಭೂಭಾಗ | 97 | 141 | 45% |
| 39 | ಕೇಂದ್ರೀಯ ವ್ಯಾಪ್ತಿ | 179 | 161 | -10% |
| ಒಟ್ಟು | 66,291 ಕೋಟಿ ರು | 87,678 ಕೋಟಿ ರು | 1 | 32% |












Click it and Unblock the Notifications