ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಟಿ ಬೆಲೆ ಏರಿಕೆ ಬಿಸಿː ಬಿಸ್ಕತ್ತು, ಆನ್ಲೈನ್ ಸೇವೆಗೂ ಕುತ್ತು

By Mahesh
|
Google Oneindia Kannada News

ನವದೆಹಲಿ, ಜೂನ್ 30 : ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ವಿನಾಯಿತಿ ಬಯಸಿ ಕೊನೆ ಕ್ಷಣದವರೆಗೂ ಕಾದಿದ್ದ ಕೆಲ ಕ್ಷೇತ್ರದ ವ್ಯಾಪಾರಿಗಳಿಗೆ ನಿರಾಶೆಯಾಗಿದೆ.

ಸಂಸತ್ತಿನಲ್ಲಿ ವಿಧೇಯಕ ಮಂಡನೆಗೂ ಮುನ್ನ ನಡೆದ ಪ್ರಧಾನಿ ಮೋದಿ ನೇತೃತ್ವದ ಕೌನ್ಸಿಲ್ ಸಭೆಯಲ್ಲಿ ಕೃಷಿ ಹಾಗೂ ಕೃಷಿ ಉತ್ಪನ್ನಗಳಿಗೆ ಮಾತ್ರ ವಿನಾಯಿತಿ ಸಿಕ್ಕಿದೆ. ಉಳಿದಂತೆ ವಿನಾಯತಿ ಬಯಸಿ ವಿಫಲವಾದ ಹಾಗೂ ಬಹುಬೇಡಿಕೆ ಹೊಂದ್ದಿರುವ ದೈನಂದಿನ ಪದಾರ್ಥಗಳ ವಿವರ ಇಲ್ಲಿದೆ.

ಜಿಎಸ್ ಟಿಯು 1,200ಕ್ಕೂ ಅಧಿಕ ವಸ್ತುಗಳನ್ನು ನಾಲ್ಕು ಸ್ಲ್ಯಾಬ್ ನಲ್ಲಿ ಹೊಂದಿದ್ದು, 5%, 12%, 18% ಹಾಗೂ 28% ನಂತೆ ತೆರಿಗೆ ವಿಧಿಸಲಾಗುತ್ತಿದೆ. ಖಾದಿ, ಪೂಜಾ ಸಾಮಾಗ್ರಿ ಸೇರಿದಂತೆ ಕೆಲ ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ಜಿಎಸ್‌‌‌ಟಿ ಕೌನ್ಸಿಲ್ ಸಭೆ ನಡೆಸಲಾಯಿತು. ರಸಗೊಬ್ಬರಗಳ ಮೇಲಿನ ತೆರಿಗೆಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಲಾಯಿತು. ಟ್ರ್ಯಾಕ್ಟರ್‌ಗಳ ಬಿಡಿ ಭಾಗಗಳ ಮೇಲಿನ ತೆರಿಗೆ ಕೂಡಾ ಶೇ. 28ರಿಂದ ಶೇ. 18ಕ್ಕೆ ಇಳಿಸಲಾಗಿದೆ.

ಬಿಸ್ಕತ್ತು

ಬಿಸ್ಕತ್ತು

ಎಲ್ಲಾ ಬಗೆಯ ಬಿಸ್ಕತ್ತುಗಳ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಲಾಗಿದೆ. ಪ್ರೀಮಿಯಂ ಬಿಸ್ಕತ್ತುಗಳ ದರದಲ್ಲಿ ಹೆಚ್ಚಿನ ಏರುಪೇರು ಆಗದೆ ಇರಬಹುದು. ಆದರೆ, ಗ್ಲುಕೋಸ್ ಬಿಸ್ಕತ್ತುಗಳ ದರದಲ್ಲಿ ಏರಿಕೆಯಾಗಲಿದೆ. ಪಾರ್ಲೆ ಜಿ ಸೇರಿದಂತೆ ಪ್ರಮುಖ ಬಿಸ್ಕತ್ತು ಉತ್ಪಾದಕ ಸಂಸ್ಥೆಗಳು, ತೆರಿಗೆ ಪ್ರಮಾಣದಲ್ಲಿ ಇಳಿಕೆಗೆ ಯತ್ನಿಸಿ ವಿಫಲರಾಗಿದ್ದಾರೆ.

ರೀಟೇಲ್ ಉತ್ಪನ್ನ

ರೀಟೇಲ್ ಉತ್ಪನ್ನ

ಅಗತ್ಯ ಆಹಾರ ಪದಾರ್ಥಗಳ ಪಟ್ಟಿಯಲ್ಲಿರುವ ಬೇಳೆ, ಕಾಳುಗಳಿಗೆ ಜಿಎಸ್ ಟಿಯಲ್ಲಿ ವಿನಾಯತಿ ಸಿಕ್ಕಿದೆ. ಆದರೆ, ಇದೇ ಪದಾರ್ಥಗಳು ಬ್ರಾಂಡೆಡ್ ಪ್ಯಾಕೇಜ್ಡ್ ಆಗಿ ಬಂದರೆ ಶೇ 5ರಷ್ಟು ತೆರಿಗೆ ತೆರಬೇಕಾಗುತ್ತದೆ. ಫ್ಯೂಚರ್ ಗ್ರೂಪ್ ಹಾಗೂ ರೀಟೈಲರ್ ಅಸೋಸಿಯೇಷನ್ ಆಫ್ ಇಂಡಿಯಾ (ಆರ್ ಎ ಐ) ನ ಕಿಶೋರ್ ಬಿಯಾನಿ ಅವರು ಪ್ಯಾಕೇಜ್ಡ್ ಪದಾರ್ಥ(ಸಗಟು)ಗಳ ಮೇಲೂ ವಿನಾಯಿತಿಗೆ ಮನವಿ ಸಲಿಸಿದ್ದರು.

ಹೋಮ್ ಡೆಲಿವರಿ ಸೇವೆ

ಹೋಮ್ ಡೆಲಿವರಿ ಸೇವೆ

ಸಗಟು ಪದಾರ್ಥಗಳು ಬ್ರಾಂಡೆಡ್ ಆಗಿದ್ದರೆ ತೆರಿಗೆ ಅಡಿಗೆ ಬರುತ್ತದೆ. ಜತೆಗೆ ಜಿಎಸ್ ಟಿ ನಿಯಮದಂತೆ ಮನೆ ಮನೆಗೆ ಇಂಥ ಪದಾರ್ಥ ಪೂರೈಕೆ ಮಾಡುತ್ತಿದ್ದರೆ, ತೆರಿಗೆ ಕಟ್ಟಬೇಕಾಗುತ್ತದೆ. ಹೋಂ ಡೆಲಿವರಿ ಅಡಿಯಲ್ಲಿನ ಈ ತೆರಿಗೆಯಿಂದ ಸಗತು ಪದಾರ್ಥಗಳಿಗೆ ವಿನಾಯಿತಿ ಕೋರಲಾಗಿತ್ತು. ರಿಟೈಲ್ ಅಸೋಸಿಯೇಷನ್ ಸಿಇಒ ಕುಮಾರ್ ರಾಜಗೋಪಾಲನ್ ಮಾತನಾಡಿ, ಸರ್ಕಾರವನ್ನು ಸಗಟು ಮಾರಾಟಗಾರರು ಪ್ರತಿನಿಧಿಸುವಾಗ ವಿನಾಯತಿ ನೀಡಬೇಕಿತ್ತು ಎಂದಿದ್ದಾರೆ.

ಅನ್ ಲೈನ್ ಬಿಲ್

ಅನ್ ಲೈನ್ ಬಿಲ್

ರೀಟೈಲ್, ವ್ಯಾಪಾರಿಗಳು, ಉತ್ಪಾದನಾ ಸಂಸ್ಥೆಗಳಿಗೆ ಇನ್ನೂ ಜಿಎಸ್ ಟಿ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ಆನ್ ಲೈನ್ ಬಿಲ್ ಉತ್ಪಾದನೆ, ಜಿಎಸ್ ಟಿಎನ್ ಗೆ ನೋಂದಣಿ ಬಗ್ಗೆ ಹೆಚ್ಚಿನ ಕಾಲಾವಕಾಶ ಕೇಳಲಾಗಿತ್ತು. ಜಿಎಸ್ ಟಿ ಅಡಿಯಲ್ಲಿ ಸರಕು ಸಾಗಣೆ ವಾಹನಗಳು ಅಂತರ ರಾಜ್ಯಗಳಲ್ಲಿ ಸಂಚರಿಸುವಾಗ ಇ ಬಿಲ್ ಹೊಂದಿರಬೇಕು ಎಂಬ ನಿಯಮವಿದೆ.
HSN (harmonized system of nomenclature) code, ಸಾಗಣೆಗೆ ತೆಗೆದುಕೊಂಡ ಕಾಲಾವಧಿ, ವಿಶ್ರಾಂತಿ ಸಮಯ ಎಲ್ಲಾ ಲೆಕ್ಕ ಹಾಕಲಾಗುತ್ತದೆ. ಇದು ಸಾಗಣೆದಾರರಿಗೆ ಬಿಸಿ ಮುಟ್ಟಿಸಿದೆ.

English summary
Goods and Services Tax (GST) : Industry seeks rate revision on these items. Here is a list of items that various industry associations, traders and retailers have been representing to the government for rate revision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X