ಜಿಎಸ್‌ಟಿ ಕೌನ್ಸಿಲ್ ಸಭೆ: ಸಣ್ಣ ತೆರಿಗೆದಾರರಿಗೆ ದೊಡ್ಡ ಪರಿಹಾರ, ಯಾವುದೇ ಪ್ರಮುಖ ತೆರಿಗೆ ದರ ಕಡಿತವಿಲ್ಲ

ನವದೆಹಲಿ, ಜೂನ್ 12: ಇಂದು ನಡೆದ ಜಿಎಸ್‌ಟಿ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಣ್ಣ ತೆರಿಗೆದಾರರಿಗೆ ಬಿಗ್ ರಿಲೀಫ್ ನೀಡಿದ್ದಾರೆ. ಒಟ್ಟು 5 ಕೋಟಿ ರುಪಾಯಿಗಿಂತ ಕಡಿಮೆ ವಹಿವಾಟು ನಡೆಸುತ್ತಿರುವ ಸಣ್ಣ ತೆರಿಗೆದಾರರಿಗೆ ದೊಡ್ಡ ಪರಿಹಾರ ಘೋಷಿಸಿದ್ದಾರೆ.

Recommended Video

      Jonty Rhodes Shares Viral Video Of People Playing Cricket In Quarantine | Oneindia Kannada

      ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಆದಾಯವನ್ನು ತಡವಾಗಿ ಸಲ್ಲಿಸುವಾಗ ಬಡ್ಡಿದರವನ್ನು 18 ಪರ್ಸೆಂಟ್‌ರಿಂದ 9 ಪರ್ಸೆಂಟ್‌ಗೆ ಇಳಿಸಿದರು. ಯಾವುದೇ ಹೊಣೆಗಾರಿಕೆಯಿಲ್ಲದೆ ಜಿಎಸ್‌ಟಿಆರ್ 3 ಬಿ ರಿಟರ್ನ್ಸ್ ಸಲ್ಲಿಸಲು ಯಾವುದೇ ವಿಳಂಬ ಶುಲ್ಕವಿಲ್ಲ ಎಂದು ಸರ್ಕಾರ ಘೋಷಿಸಿದೆ. ಇದು ಜುಲೈ 2017 ರಿಂದ ಜನವರಿ 2020 ರವರೆಗೆ ಬಾಕಿ ಉಳಿಸಿಕೊಂಡವರಿಗೆ ಅನ್ವಯವಾಗುತ್ತದೆ. ಆದಾಗ್ಯೂ, ಹೊಣೆಗಾರಿಕೆ ಇರುವವರಿಗೆ ಗರಿಷ್ಠ ತಡವಾದ ಶುಲ್ಕವನ್ನು 500 ರುಪಾಯಿಗೆ ನಿಗದಿಪಡಿಸಲಾಗಿದೆ.

      ರಾಷ್ಟ್ರವ್ಯಾಪಿ ಲಾಕ್‌ಡೌನ್ ನಂತರ ಮೊದಲ ಬಾರಿಗೆ ನಡೆದ ಜಿಎಸ್‌ಟಿ ಕೌನ್ಸಿಲ್ಸ್‌ ಸಭೆಯಲ್ಲಿ ಯಾವುದೇ ಪ್ರಮುಖ ತೆರಿಗೆ ದರ ಕಡಿತವನ್ನು ಮಾಡಲಾಗಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ 40 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಮುಖ್ಯ ಅಧ್ಯಕ್ಷತೆಯನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ವಹಿಸಿದ್ದರು. ಇವರ ಜೊತೆಗೆ ಅನುರಾಗ್ ಠಾಕೂರ್, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಮಂತ್ರಿಗಳು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.

      GST Council Meeting: Major Relief For Small Taxpayers

      ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಬೇಡಿಕೆ ತಗ್ಗಿರುವುದರಿಂದ ವ್ಯವಹಾರಗಳು ಮತ್ತು ಕೈಗಾರಿಗಳು ಜಿಎಸ್‌ಟಿ ದರ ಕಡಿತವನ್ನು ನಿರೀಕ್ಷಿಸಿದ್ದವು. ಆದರೆ ಸರ್ಕಾರವು ಜಿಎಸ್‌ಟಿ ಕೊರತೆ ಮತ್ತು ರಾಜ್ಯಗಳ ಪರಿಹಾರದ ಬೇಡಿಕೆ ಕಾರಣದಿಂದಾಗಿ ಆದಾಯ ಹೆಚ್ಚಿಸುವತ್ತ ಗಮನ ಹರಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+