• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆ ಖರೀದಿ, ಮಾರಾಟಗಾರರಿಗೆ ಜಿಎಸ್ಟಿ ಸಭೆಯಿಂದ ಶುಭ ಸುದ್ದಿ?

|

ನವದೆಹಲಿ, ಜನವರಿ 10: ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಅನೇಕ ಕ್ಷೇತ್ರಗಳಿಗೆ ಶುಭ ಸುದ್ದಿ ಸಿಕ್ಕರೂ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಯಾವುದೇ ಆಶಾದಾಯಕ ಸೂಚನೆ ಸಿಕ್ಕಿರಲಿಲ್ಲ. ಆದರೆ, ಈಗ ರಿಯಲ್ ಎಸ್ಟೇಟ್ ಕ್ಷೇತ್ರದ ಬೇಡಿಕೆಗೆ ಗುರುವಾರ(ಜನವರಿ 10) ದಂದು ನಡೆಯಲಿರುವ 32ನೇ ಜಿಎಸ್ಟಿ ಕೌನ್ಸಿಲ್ ಒಪ್ಪಿಗೆ ಸೂಚಿಸುವ ಸಾಧ್ಯತೆ ಕಂಡು ಬಂದಿದೆ.

ನಿರ್ಮಾಣ ಹಂತದಲ್ಲಿರುವ ಅಪಾರ್ಟ್ಮೆಂಟ್ ಹಾಗೂ ಮನೆಗಳ ಖರೀದಿ ಮೇಲೆ ಶೇ 5 ರಷ್ಟು ಜಿಎಸ್​ಟಿ ಕಡಿತ ಮಾಡುವ ನಿರ್ಧಾರ ಪ್ರಕಟಿಸಿದ್ದಲ್ಲಿ ಫ್ಲಾಟ್ ಗಳು ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗುವ ಸಾಧ್ಯತೆಯಿದೆ.

ಲೋಕಸಭೆ ಚುನಾವಣೆಗೂ ಮುನ್ನ ಸಿಮೆಂಟ್ ಬೆಲೆ ಇಳಿಕೆ ಸಾಧ್ಯತೆ!ಲೋಕಸಭೆ ಚುನಾವಣೆಗೂ ಮುನ್ನ ಸಿಮೆಂಟ್ ಬೆಲೆ ಇಳಿಕೆ ಸಾಧ್ಯತೆ!

ಇದಲ್ಲದೆ, ಸಣ್ಣ ಮತ್ತು ಮಧ್ಯಮ ವರ್ಗದ ಎಂಟ್ರಪ್ರೈಸಸ್​ಗಳ ಮೇಲಿನ ಹೆಚ್ಚುವರಿ ಜಿಎಸ್​ಟಿ ತಗ್ಗಿಸುವ ಬಗ್ಗೆ ಜಿಎಸ್ಟಿ ಕೌನ್ಸಿಲ್ ನ ಫಿಟ್ಮೆಂಟ್ ಸಮಿತಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

* 20 ಲಕ್ಷ ಮೌಲ್ಯದ ಮನೆ, ಕಟ್ಟಡ ಸಂಬಂಧಿ ವ್ಯವಹಾರಗಳಿವೆ ಜಿಎಸ್​​ಟಿಯಿಂದ ವಿನಾಯಿತಿ ನೀಡುವ ಸಾಧ್ಯತೆಗಳಿವೆ.
* ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಒಟ್ಟಾರೆ ಶೇ18ರಷ್ಟಿರುವ ಜಿಎಸ್ಟಿ ತಗ್ಗಿದರೆ, ಗ್ರಾಹಕರು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಕೊಂಚ ನೆಮ್ಮದಿ ಸಿಗಲಿದೆ.

ಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆ

* ನಿರ್ಮಾಣ ಹಂತದ ಕಟ್ಟಡದ ಜಿಎಸ್ಟಿಯನ್ನು ಶೇ 5ರ ಸ್ಲ್ಯಾಬಿಗೆ ತರುವಂತೆ ಕೋರಲಾಗಿದೆ. ಆದರೆ, ಈ ಸ್ಲ್ಯಾಬಿಗೆ ತರುವ ಮುನ್ನ ಬಿಲ್ಡರ್ ಗಳು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಪೈಕಿ ಶೇ80ರಷ್ಟು ಜಿಎಸ್ಟಿ ನೋಂದಾಯಿತ ಸಂಖ್ಯೆ ಹೊಂದಿದೆ ಎಂಬುದನ್ನು ತೋರಿಸಬೇಕಾಗುತ್ತದೆ.

* ಜಿಎಸ್ಟಿ ಶೇ 12ಕ್ಕೆ ಸೀಮಿತಗೊಳಿಸುವುದು, ಬಿಲ್ಡರ್ ಗಳಿಗೆ ಇನ್ಪುಟ್ ತೆರಿಗೆ ಕ್ರೆಡಿಟ್ ಸೇರಿಸಿದರೆ ಶೇ 8ಕ್ಕೆ ಭೂ ಪ್ರದೇಶ ಖರೀದಿಗೆ ದೊರೆಯಲಿದೆ.

ಜನವರಿ 01ರಿಂದ ಯಾವೆಲ್ಲ ಸಾಮಗ್ರಿಗಳ ಬೆಲೆ ಇಳಿಕೆ, ಪಟ್ಟಿ ನೋಡಿಜನವರಿ 01ರಿಂದ ಯಾವೆಲ್ಲ ಸಾಮಗ್ರಿಗಳ ಬೆಲೆ ಇಳಿಕೆ, ಪಟ್ಟಿ ನೋಡಿ

ಕಟ್ಟಡ ನಿರ್ಮಾಣದ ವೆಚ್ಚ : ಶೇ12ರಷ್ಟು ತೆರಿಗೆ ಅಲ್ಲದೆ, ಮನೆ ಕಟ್ಟಲು ಬಳಸುವ ಸಾಮಾಗ್ರಿಗಳಾದ ಉಕ್ಕು(ಶೇ18), ಸಿಮೆಂಟ್ (28%), ಮಾರ್ಬಲ್ ಹಾಗೂ ಗ್ರಾನೈಟ್ (28%), ಮಾರ್ಬಲ್ ಬ್ಲಾಕ್ (12%), ಹಾರುವ ಬೂದಿ ಇಟ್ಟಿಗೆ (12%), ಮರಳು, ಕಲ್ಲು, ಜಲ್ಲಿ (ಶೇ5), ಲಿಫ್ಟ್ ಹಾಗೂ ಇನ್ನಿತರ ಪರಿಕರ (ಶೇ28) ಹೀಗೆ ಶೇ 18 ರಿಂದ 28ರ ಸರಾಸರಿಯಲ್ಲಿ ತೆರಿಗೆ ಇದ್ದು, ಕಟ್ಟಡ ನಿರ್ಮಾಣ ವೆಚ್ಚ ಏರಿಕೆಗೆ ಕಾರಣವಾಗಿದೆ. ಬಾಡಿಗೆ ಕಟ್ಟಡ, ಗೃಹ ಸಾಲ ಸೇರಿದಂತೆ ಅನೇಕ ಕಡೆಗಳಲ್ಲಿ ತೆರಿಗೆ ಎದುರಿಸಬೇಕಾಗಿದೆ.

English summary
The GST Council in its 32nd meeting on Thursday could provide huge relief to MSMEs and small business. Favourable announcements for the service sector is also expected. Sources told Zee Media Breau that the council might increase the threshold limit of Rs 20 lkah to Rs 50 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X