Get Updates
Get notified of breaking news, exclusive insights, and must-see stories!

ವಿವಿಧ ರಾಜ್ಯಗಳ ಜಿಎಸ್‌ಟಿ ಸಂಗ್ರಹ ಶೇ 10 ರಷ್ಟು ಏರಿಕೆ: ಯಾವ ರಾಜ್ಯಗಳ ಸಂಗ್ರಹ ಎಷ್ಟು? ಅಂಕಿಅಂಶ ತಿಳಿಯಿರಿ

ನವದೆಹಲಿ, ಅಕ್ಟೋಬರ್‌ 02: ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಒಟ್ಟು ಜಿಎಸ್‌ಟಿ ಸಂಗ್ರಹವು 1,62,712 ಕೋಟಿ ರೂಪಾಯಿ ಆಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 10ರಷ್ಟು ಹೆಚ್ಚು ಸಂಗ್ರಹವಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಇದು ಒಂದು ತಿಂಗಳಲ್ಲೇ ಅತ್ಯಧಿಕ ಜಿಎಸ್‌ಟಿ ಸಂಗ್ರಹವಾಗಿದೆ.

2023ರ ಸೆಪ್ಟೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,62,712 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 29,818 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ 37,657 ಕೋಟಿ, ಐಜಿಎಸ್‌ಟಿ 83,623 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 41,145 ಕೋಟಿ ಸೇರಿದಂತೆ) ಮತ್ತು ಸೆಸ್ 11,613 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 881 ಕೋಟಿ ಸೇರಿದಂತೆ) ಎಂದು ಕೇಂದ್ರ ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯ ತಿಳಿಸಿದೆ.

GST collection of various states increased by 10%, know which states collect how much figure

2023-24 ರ ಆರ್ಥಿಕ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹವು ನಾಲ್ಕನೇ ಬಾರಿಗೆ 1.60 ಲಕ್ಷ ಕೋಟಿ ಗಡಿ ದಾಟಿದೆ. ಆದರೆ 2023-24 ರಲ್ಲಿ ಸರಾಸರಿ ಮಾಸಿಕ ಒಟ್ಟು ಜಿಎಸ್‌ಟಿ ಸಂಗ್ರಹವು ಶೇಕಡಾ 11ರಷ್ಟು ಅಂದರೆ 1.65 ಲಕ್ಷ ಕೋಟಿ ರೂ. ವರ್ಷದ ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ 33,736 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ 27,578 ಕೋಟಿ ರೂ.ಗೆ ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೇಂದ್ರ ಮತ್ತು ರಾಜ್ಯಗಳ ಒಟ್ಟು ಜಿಎಸ್‌ಟಿ ಆದಾಯ

ಒಟ್ಟಾರೆ ಸೆಪ್ಟೆಂಬರ್‌ನಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿ 63,555 ಕೋಟಿ ಮತ್ತು ಎಸ್‌ಜಿಎಸ್‌ಟಿ ಗಾಗಿ 65,235 ಕೋಟಿ ರೂ. ಆಗಿದೆ. ಸೆಪ್ಟೆಂಬರ್‌ನಲ್ಲಿ ಆದಾಯವು ಕಳೆದ ವರ್ಷದ ಅದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ 10% ಹೆಚ್ಚಾಗಿದೆ. ಇದು ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 14% ಹೆಚ್ಚಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ನಾಲ್ಕನೇ ಬಾರಿಗೆ ₹1.60 ಲಕ್ಷ ಕೋಟಿ ದಾಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ 2023 ರಲ್ಲಿ ಜಿಎಸ್‌ಟಿ ಆದಾಯದ ರಾಜ್ಯವಾರು ಆದಾಯ

ಕ್ರಮ ಸಂಖ್ಯೆ ರಾಜ್ಯ ಸೆಪ್ಟೆಂಬರ್ 22 (ಕೋಟಿಗಳಲ್ಲಿ) ಸೆಪ್ಟೆಂಬರ್23(ಕೋಟಿಗಳಲ್ಲಿ) ಹೆಚ್ಚಳ (%)
1 ಜಮ್ಮು ಮತ್ತು ಕಾಶ್ಮೀರ 428 563 32%
2 ಹಿಮಾಚಲ ಪ್ರದೇಶ 712 784 10%
3 ಪಂಜಾಬ್ 1,710 1,866 9%
4 ಚಂಡೀಗಢ 206 219 6%
5 ಉತ್ತರಾಖಂಡ 1,300 1,392 7%
6 ಹರಿಯಾಣ 7,4003 8,009 8%
7 ದೆಹಲಿ 4,741 4,849 2%
8 ರಾಜಸ್ಥಾನ 3,307 3,869 17%
9 ಉತ್ತರ ಪ್ರದೇಶ 7,004 7,844 12%
10 ಬಿಹಾರ 1,466 1,397 -5%
11 ಸಿಕ್ಕಿಂ 285 315 11%
12 ಅರುಣಾಚಲ ಪ್ರದೇಶ 64 81 27%
13 ನಾಗಾಲ್ಯಾಂಡ್ 49 52 5%
14 ಮಣಿಪುರ 38 56 47%
15 ಮಿಜೋರಾಂ 24 27 14%
16 ತ್ರಿಪುರ 65 73 13%
17 ಮೇಘಾಲಯ 161 165 2%
18 ಅಸ್ಸಾಂ 1,157 1,175 2%
19 ಪಶ್ಚಿಮ ಬಂಗಾಳ 4,804 4,940 3%
20 ಜಾರ್ಖಂಡ್ 2,463 2,623 7%
21 ಒಡಿಶಾ 3,765 4,249 13%
22 ಛತ್ತೀಸ್‌ಗಢ 2,269 2,684 18%
23 ಮಧ್ಯ ಪ್ರದೇಶ 2,711 3,118 15%
24 ಗುಜರಾತ್ 9,020 10,129 12%
25 ದಾದ್ರಾ ಮತ್ತು ನಗರ ಹವೇಲಿ ಮತ್ತು ದಾಮನ್ ಮತ್ತು ದಿಯು 312 350 12%
26 ಮಹಾರಾಷ್ಟ್ 21,403 25,137 17%
27 ಕರ್ನಾಟಕ 9,760 11,693 20%
28 ಗೋವಾ 429 497 16%
29 ಲಕ್ಷದ್ವೀಪ 3 2 -45%
30 ಕೇರಳ 2,246 2,505 12%
31 ತಮಿಳುನಾಡು 8,637 10,481 21%
32 ಪುದುಚೇರಿ 188 197 5%
33 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 33 23 -30%
34 ತೆಲಂಗಾಣ 3,915 5,226 33%
35 ಆಂಧ್ರ ಪ್ರದೇಶ 3,132 3,658 17%
36 ಲಡಾಖ್ 19 35 81%
37 ಇತರೆ ಪ್ರದೇಶ 202 207 2%
38 ಕೇಂದ್ರ ವಲಯ 182 196 8%
ಒಟ್ಟು 1,05,615 1,20,686 14%
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+