Budget 2025: ಆದಾಯ ತೆರಿಗೆ ಕಡಿತ ಮಾಡಲು ಹೆಚ್ಚಿದ ಒತ್ತಡ; ಸಿಹಿ ಸುದ್ದಿ ಕೊಡಲು ಸಜ್ಜಾದ ಕೇಂದ್ರ!
2025-2026ನೇ ಹಣಕಾಸು ವರ್ಷದ ಬಜೆಟ್ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಫೆಬ್ರವರಿ 1 ರಂದು ಕೇಂದ್ರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಜೆಟ್ ಮೇಲೆ ದೇಶದ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅದರಲ್ಲೂ ಆದಾಯ ತೆರಿಗೆ ಕಡಿತದ ಬಗ್ಗೆ ತೆರಿಗೆದಾರರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಈ ಬಾರಿ ಬಜೆಟ್‌ನಲ್ಲಿ ಆದಾಯ ತೆರಿಗ ಕಡಿತ ಮಾಡುವ ವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿತ ಮಾಡದೇ ಇದ್ದರೆ ಮಧ್ಯಮ ವರ್ಗದ ಜನರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಕೂಡ ಇದೆ.

ಈಗ ಇರುವ ತೆರಿಗೆ ಎಷ್ಟು?
ಈಗ ಇರುವ ತೆರಿಗೆ ವ್ಯವಸ್ಥೆ ಪ್ರಕಾರ 3 ಲಕ್ಷ ರೂಪಾಯಿವರೆಗೆ ಆದಾಯಕ್ಕೆ ವಿನಾಯಿತಿ ನೀಡಲಾಗಿದ್ದು, 3 ರಿಂದ 7 ಲಕ್ಷ ರೂಪಾಯಿವರೆಗೆ ಆದಾಯ ಗಳಿಸುವವರು ಶೇಕಡಾ 5 ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ. 7 ರಿಂದ 10 ಲಕ್ಷ ರೂಪಾಯಿ ಆದಾಯ ಹೊಂದಿರುವವರಿಗೆ ಶೇಕಡಾ 10 ರಷ್ಟು ತೆರಿಗೆ ವಿಧಿಸುತ್ತಿದ್ದು., 10 ರಿಂದ 12 ಲಕ್ಷ ರೂಪಾಯಿ ವರೆಗೆ ಆದಾಯ ಹೊಂದಿರುವವರು ಶೇಕಡಾ 15 ರಷ್ಟು ಆದಾಯ ಪಾವಾತಿಸುತ್ತಿದ್ದಾರೆ. ಇನ್ನು 12 ರಿಂದ 15 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು ಶೇಕಡಾ 20 ರಷ್ಟು ತೆರಿಗೆ ಪಾವತಿಸಬೇಕಿದ್ದು, 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ಶೇಕಡಾ 30 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ತೆರಿಗೆ ವಿನಾಯಿತಿ ನಿರೀಕ್ಷೆ
ಇ ಸಾಲಿನ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ಕಡಿತವನ್ನು ನಿರೀಕ್ಷೆ ಮಾಡಿದ್ದು, ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಂಭೀರವಾಗಿ ಚಿಂತಿಸಿದೆ ಎನ್ನುವ ಸುಳಿವು ಸಿಕ್ಕಿದೆ. ಬಿಸಿನೆಸ್ ಸ್ಟಾಂಡರ್ಡ್ ವರದಿಯ ಪ್ರಕಾರ ತೆರಿಗೆ ಪದ್ಧತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುವ ಬಗ್ಗೆ ಸರ್ಕಾರ ಯೋಚಿಸಿದ್ದು ಬಜೆಟ್‌ನಲ್ಲಿ ಘೋಷಣೆ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
10 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರಿಗೆ ತೆರಿಗೆಯಿಂದ ವಿನಾಯಿತಿ ನೀಡುವುದು ಮತ್ತು 15 ರಿಂದ 20 ಲಕ್ಷ ರೂಪಾಯಿವರೆಗೆ ಆದಾಯಕ್ಕೆ 25% ತೆರಿಗೆ ವಿಧಿಸುವುದು ಮತ್ತು 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿದ್ದರೆ 30% ತೆರಿಗೆ ವಿಧಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಒಂದು ವೇಳೆ ಸರ್ಕಾರ ಈ ಮಾದರಿಯ ಅದಾಯ ತೆರಿಗೆಯನ್ನು ಜಾರಿ ಮಾಡಿದರೆ ವಾರ್ಷಿಕವಾಗಿ 50,000 ದಿಂದ 1 ಲಕ್ಷ ಕೋಟಿಯವರೆಗೆ ಆದಾಯ ನಷ್ಟವಾಗಬಹುದು ಎಂದು ಹೇಳಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ತೆರಿಗೆ ನೀತಿಯಿಂದ ದುಡಿಯುವ ವರ್ಗ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿದೆ. ವಾರ್ಷಿಕ 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ದೇಶ ತೊರೆಯುವ ಬಗ್ಗೆ ಆಲೋಚಿಸುತ್ತಿದ್ದಾರೆ ಎನ್ನುವ ವರದಿಗಳಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.












Click it and Unblock the Notifications