ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ದರ ಏರಿಕೆ, ಹಳೆ ನಿಯಮ ಮತ್ತೆ ಜಾರಿಗೆ ತರಲು ಚಿಂತನೆ

|
Google Oneindia Kannada News

ದೇಶದ ಕೆಲವು ನಗರಗಳಲ್ಲಿ ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ಪೆಟ್ರೋಲ್- ಡೀಸೆಲ್ ದರ ತಲುಪಿದ ನಂತರ ಇದೀಗ ಎಚ್ಚೆತ್ತಿರುವ ಸರಕಾರ ಗ್ರಾಹಕರ ರಕ್ಷಣೆಗೆ ಮುಂದಾಗುವಂತೆ ಕಾಣುತ್ತಿದೆ. ದಿನದಿನಕ್ಕೂ ಹೆಚ್ಚುತ್ತಿರುವ ಇಂಧನ ಬೆಲೆಗೆ ಪರಿಹಾರ ಎಂಬಂತೆ ಈ ಹಿಂದೆ ಇದ್ದ ನಿಯಮವನ್ನೇ ಮತ್ತೆ ಜಾರಿಗೆ ತರಲು ಚಿಂತಿಸುತ್ತಿದೆ.

ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರಮೂರು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರ

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿನ ಏರಿಕೆ ಬಗ್ಗೆ ಸುದ್ದಿಯಾದ ನಂತರ ಚಿಲ್ಲರೆ ಮಾರಾಟ ದರವನ್ನು ಹತೋಟಿಯಲ್ಲಿಡಬೇಕು ಎಂಬ ಕಾರಣಕ್ಕೆ ಸರಕಾರ ಮಧ್ಯಪ್ರವೇಶಿಸುವ ಸಾಧ್ಯತೆ ಗೋಚರಿಸುತ್ತಿದೆ. ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಮೂರು ವರ್ಷದ ಇದ್ದ ದರಕ್ಕೆ ಸಮನಾಗಿ ಈಗಿನ ಬೆಲೆ ಬಂದು ನಿಂತಿದೆ.

Government steps in to save people from rising fuel bill

ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 79.48 ರುಪಾಯಿ ತಲುಪಿದೆ. 2014ರ ಆಗಸ್ಟ್ ನಲ್ಲಿ ಈ ದರ ಇತ್ತು. ಅದೇ ರೀತಿ ಪ್ರತಿ ಲೀಟರ್ ಗೆ ಡೀಸೆಲ್ ದರ ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ರು. 61.37 ಹಾಗೂ ರು. 61.84 ಇದೆ. ಪೆಟ್ರೋಲ್-ಡೀಸೆಲ್ ನ ಚಿಲ್ಲರೆ ಮಾರಾಟ ದರ ನಿರಂತರವಾಗಿ ಏರಿಕೆ ಕಂಡಿದೆ.

ಜೂನ್ ನಲ್ಲಿ ಯಾವಾಗ ಬೆಲೆ ಪರಿಷ್ಕರಣೆ ನಿತ್ಯವೂ ಆಗಬೇಕು ಎಂದು ತೀರ್ಮಾನಿಸಲಾಯಿತೋ ಆಗಿನಿಂದ ಸಣ್ಣ ಪ್ರಮಾಣದಲ್ಲಿ ಬಹುತೇಕ ಎಲ್ಲ ದಿನವೂ ಏರಿಕೆಯಾಗಿದೆ. ಈ ಹಿಂದೆ ದರವನ್ನು ಸರಕಾರ ತನ್ನ ಹತೋಟಿಯಲ್ಲಿ ಇರಿಸಿಕೊಂಡಿದ್ದಾಗ ಬೆಲೆ ಏರಿಕೆ ಅನ್ನೋದು ತುಂಬ ದೊಡ್ಡ ಸಂಗತಿಯಾಗಿತ್ತು. ಆದರೆ ಏಳು ವರ್ಷಗಳ ಹಿಂದೆ ಸರಕಾರ ತೈಲ ಬೆಲೆಯನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತು.

ಈ ಬಂಕ್ ನಲ್ಲಿ ಪೆಟ್ರೋಲ್-ಡೀಸೆಲ್ ಹಾಕಿಸಿದರೆ ತಿಂಡಿ- ಊಟ ಫ್ರೀಈ ಬಂಕ್ ನಲ್ಲಿ ಪೆಟ್ರೋಲ್-ಡೀಸೆಲ್ ಹಾಕಿಸಿದರೆ ತಿಂಡಿ- ಊಟ ಫ್ರೀ

ಆ ನಂತರ ಮೂರು ವರ್ಷ ಕಚ್ಚಾ ತೈಲ ದರದಲ್ಲೂ ಏರಿಕೆ ಕಂಡು, ಪೆಟ್ರೋಲ್ ನ ಬೆಲೆಯಲ್ಲೂ ಏರಿಕೆಯಾಯಿತು. ಆದರೆ ಆ ಮೇಲೆ ಕಚ್ಚಾ ತೈಲ ದರ ಕುಸಿಯಲು ಆರಂಭವಾಯಿತು. ಆದರೂ ಪೆಟ್ರೋಲ್ ಹಾಗೂ ಡೀಸೆಲ್ ದರ ತುಂಬ ವ್ಯತ್ಯಾಸ ಏನೂ ಆಗಲಿಲ್ಲ. ಒಂದೋ ಸ್ಥಿರವಾಗಿರುತ್ತಿತ್ತು ಅಥವಾ ಸ್ವಲ್ಪ ಏರಿಕೆಯಾಗುತ್ತಿತ್ತು.

ಬೆಲೆ ಪರಿಷ್ಕರಣೆ ನಿತ್ಯವೂ ಮಾಡಲು ಆರಂಭಿಸಿದ ಮೇಲೆ ಜುಲೈ ಒಂದರಿಂದ ಈಚೆಗೆ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ರು.7.29 ಹೆಚ್ಚಾಗಿ ರು.70.38 (ಸೆಪ್ಟೆಂಬರ್ 13,2017 ಬುಧವಾರ) ತಲುಪಿದೆ.

English summary
may check petrol, diesel pricesAs the petrol and diesel prices have hit three-year highs in some cities, the government seems to have swung into action to protect the consumers from the rising fuel bills, possibly bringing back old rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X