• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆದಾಯ ತೆರಿಗೆ ರಿಟರ್ನ್ಸ್(ITR) ಸಲ್ಲಿಸಲು ಇಂದೇ ಕೊನೇ ದಿನ

By Mahesh
|

ಬೆಂಗಳೂರು, ಜುಲೈ 27: ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿ ರಿಟರ್ನ್ಸ್) ಕೊನೆ ದಿನಾಂಕವನ್ನು ಆಗಸ್ಟ್‌ 31ರವರೆಗೆ ವಿಸ್ತರಣೆ ಮಾಡಿ ವಿತ್ತ ಸಚಿವಾಲಯ ಆದೇಶ ಹೊರಡಿಸಿದೆ.

2017-18ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿತ್ತು. ಐಟಿ ರಿಟರ್ನ್ಸ್ ಗಡುವನ್ನು ಆಗಸ್ಟ್‌ 31ರ ತನಕ ವಿಸ್ತರಿಸಲಾಗಿದ್ದು, ಆಗಸ್ಟ್ 05ರಿಂದ 2018-19ರ ಸಾಲಿನ ಅರ್ಜಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರಿ ನೌಕರರು, ದೇಶ ಮತ್ತು ವಿದೇಶಗಳಿಂದ ದೇಣಿಗೆ ಪಡೆಯುವ ಸ್ವಯಂ ಸೇವಾ ಸಂಸ್ಥೆಗಳು, ಅವುಗಳ ಪದಾಧಿಕಾರಿಗಳಿಗೆ ಆಸ್ತಿ ವಿವರಗಳನ್ನು ಸಲ್ಲಿಸಲು ಇನ್ನೂ ಅವಕಾಶ ಲಭ್ಯವಾಗಲಿದೆ.

ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ಇ ರಿಟರ್ನ್ಸ್ ಹೇಗೆ?

ಕೊನೆದಿನಾಂಕದೊಳಗೆ ಐಟಿ ರಿಟರ್ನ್ಸ್ ಸಲ್ಲಿಸದಿದ್ದರೆ, 1,000, 5,000 ಹಾಗೂ 10,000 ರು ತನಕ ದಂಡ ವಿಧಿಸಲಾಗುತ್ತದೆ. 5 ಲಕ್ಷ ರುಗಿಂತ ಕಡಿಮೆ ಆದಾಯ ಹೊಂದಿರುವವರಿಗೆ 1,000 ರು ದಂಡ ವಿಧಿಸಲಾಗುತ್ತದೆ.

ಬ್ಯಾಂಕಿನಿಂದ ನೀಡುವ Tax Deducted at Source(ಟಿಡಿಎಸ್) ಪ್ರಮಾಣ ಪತ್ರ ಹಾಗೂ ಇನ್ನಿತರ ಕಡಿತಗಳ ವಿವರ ನೀಡುವುದು ಈ ವರ್ಷ ತಡವಾಗಿದೆ. ಅಲ್ಲದೆ, ಐಟಿ ರಿಟರ್ನ್ ಅರ್ಜಿಗಳು ಹೆಚ್ಚಾಗಿವೆ.

ಐಟಿ ರಿಟರ್ನ್ಸ್ ವಿಸ್ತರಣೆಗೆ ಕಾರಣಗಳು

ಐಟಿ ರಿಟರ್ನ್ಸ್ ವಿಸ್ತರಣೆಗೆ ಕಾರಣಗಳು

ಉದ್ಯೋಗದಾತರು ಟಿಡಿಎಸ್ ಸರ್ಟಿಫಿಕೆಟ್ /ಫಾರ್ಮ್ 16ಗಳನ್ನು ತನ್ನ ಉದ್ಯೋಗಿಗಳಿಗೆ ನೀಡುವುದು ತಡವಾಗಿದೆ. ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ, ಆಧಾರ್ ಹಾಗೂ ಬ್ಯಾಂಕ್ ಖಾತೆ ಜೋಡಣೆ ಇನ್ನಿತರ ಐಟಿ ರಿಟರ್ನ್ಸ್ ಗೆ ಸಂಬಂಧಿಸಿದ ಬ್ಯಾಂಕಿಂಗ್ ವ್ಯವಹಾರಗಳ ಜಂಜಾಟ ಇನ್ನೂ ಮುಕ್ತಾಯವಾಗಿಲ್ಲ.

ಸರಕು ಮತ್ತು ಸೇವಾ ತೆರಿಗೆ

ಸರಕು ಮತ್ತು ಸೇವಾ ತೆರಿಗೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಂಡಿದ್ದರಿಂದ ಚಾರ್ಟೆಡ್ ಅಕೌಂಟೆಟ್ ಗಳು ಅದರಲ್ಲೇ ಹೆಚ್ಚು ನಿರತರಾಗಿದ್ದಾರೆ. ಪರೋಕ್ಷ ತೆರಿಗೆ ಬಗ್ಗೆ ಹೆಚ್ಚು ಗಮನಹರಿಸಿರುವ ಸಿಎ ಗಳು ಜುಲೈ ತಿಂಗಳಿನಲ್ಲಿ ನೇರ ತೆರಿಗೆ ಬಗ್ಗೆ ತಮ್ಮ ಗ್ರಾಹಕರಿಗೆ(ಉದ್ಯೋಗಿಗಳು) ಹೆಚ್ಚಿನ ಸಲಹೆ, ನೆರವು ನೀಡಲು ಸಾಧ್ಯವಾಗಿಲ್ಲ. ಹೀಗಾಗಿ, ದಿನಾಂಕ ವಿಸ್ತರಣೆಗೆ ಕೋರಲಾಯಿತು.

ಐಟಿಆರ್ 1 ಸಹಜ್

ಐಟಿಆರ್ 1 ಸಹಜ್

ಜನ ಸಾಮಾನ್ಯರಿಗೆ ಈ ಅರ್ಜಿ ಅನ್ವಯ. ಸಂಬಳದಾರರಾಗಿದ್ದು, ಒಂದು ಮನೆ ಆಸ್ತಿ ಹೊಂದಿದ್ದು, ಇತರೆ ಮೂಲಗಳಿಂದ ಆದಾಯವಿದ್ದು, 50 ಲಕ್ಷ ರು ತನಕದ ಗಳಿಕೆ ಹೊಂದಿದ್ದರೆ ಈ ಅರ್ಜಿ ಬಳಸತಕ್ಕದ್ದು.

ಐಟಿಆರ್ 2

ಐಟಿಆರ್ 2

ಐಟಿಆರ್ 2: ವೈಯಕ್ತಿಕ ಆದಾಯ ಹೊಂದಿದ್ದು, 50 ಲಕ್ಷ ತನಕ ಗಳಿಕೆ ಹೊಂದಿದ್ದರೆ ಅಥವಾ ವಿದೇಶಿ ಮೂಲಗಳಿಂದ ಆದಾಯ/ ಆಸ್ತಿ ಹೊಂದಿದ್ದರೆ ಅಥವಾ ಒಂದಕ್ಕಿಂತ ಅಧಿಕ ವಸತಿ ಗೃಹ ಹೊಂದಿದ್ದರೆ ಅಥವಾ ಎಚ್ ಯುಎಫ್/ ಇನ್ನಿತರ ಮೂಲದ ಆದಾಯ ಹೊಂದಿದ್ದರೆ ಈ ಅರ್ಜಿ ಬಳಸಬೇಕು.

ಐಟಿಆರ್ 3 ಹಾಗೂ ಐಟಿಆರ್ 4 ಸುಗಮ್

ಐಟಿಆರ್ 3 ಹಾಗೂ ಐಟಿಆರ್ 4 ಸುಗಮ್

ಐಟಿಆರ್ 3 : ವೈಯಕ್ತಿಕ ಗಳಿಕೆ ಹಾಗೂ ಅವಿಭಕ್ತ ಹಿಂದೂ ಕುಟುಂಬ(ಎಚ್ ಯುಎಫ್) ನಿಂದ ಬಂದಿರುವ ಆದಾಯ, ವ್ಯಾಪಾರ ವಹಿವಾಟಿನಿಂದ ಬಂದ ಲಾಭ, ಸಂಬಳದಾರರಾಗಿದ್ದು, ಇನ್ನಿತರೆ ವೃತ್ತಿಯಿಂದ ಗಳಿಸಿದ ಆದಾಯ, ಮನೆ, ಇನ್ನಿತರ ಮೂಲಗಳಿಂದ ಆದಾಯ ಬರುತ್ತಿದ್ದರೆ ಈ ಅರ್ಜಿ ಬಳಸತಕ್ಕದ್ದು.

ಐಟಿಆರ್ ಸುಗಮ್: ವೈಯಕ್ತಿಕ, ಹಿಂದೂ ಅವಿಭಕ್ತ ಕುಟುಂಬ ಆದಾಯ ಅಲ್ಲದೆ, ಆದಾಯ ತೆರಿಗೆ ಕಾಯ್ದೆ 1961ರ 44ಎಡಿ, 44ಎಡಿಎ, 44ಎಇ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಹತೆ ಹೊಂದಿದ್ದರೆ ಈ ಅರ್ಜಿ ಸಲ್ಲಿಸಬೇಕು.

ಐಟಿಆರ್ 5

ಐಟಿಆರ್ 5

ಐಟಿಆರ್ 5: ಲಿಮಿಟೆಡ್ ಸಂಸ್ಥೆ,ಖಾಸಗಿ ಸಂಸ್ಥೆ, ಕೋ ಆಪರೇಟಿವ್ ಸೊಸೈತಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಈ ಅರ್ಜಿ ಅನ್ವಯ.

ಐಟಿಆರ್ 6: ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 11ರ ಅಡಿಯಲ್ಲಿ ವಿನಾಯತಿ ಬಯಸುವ ಸಂಸ್ಥೆಗಳು ಈ ಅರ್ಜಿಯನ್ನು ಬಳಸಬಹುದು. ಐಟಿಆರ್ ಸಲ್ಲಿಕೆ ಜತೆಗೆ ಬ್ಯಾಲೆನ್ಸ್ ಶೀಟ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಕಂಪನೀಸ್ ಕಾಯ್ದೆ 2013ರ ಅನ್ವಯ ನೀಡತಕ್ಕದ್ದು.

ಐಟಿಆರ್ 7: ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139 (4ಎ) ಅಥವಾ 139 (4ಬಿ) ಅಥವಾ 139 (4ಸಿ) ಅಥವಾ 19 (4 ಡಿ) ಅಥವಾ 139(4ಇ) ಅಥವಾ 139 (4ಎಫ್) ಅಡಿಯಲ್ಲಿ ಬರುವ ಟ್ರಸ್ಟ್ ಗಳು ರಾಜಕೀಯ ಪಕ್ಷಗಳು ಈ ಅರ್ಜಿ ಬಳಸತಕ್ಕದ್ದು.

English summary
The last date for filing income-tax returns has been extended to 5 August. Tax returns for 2017-18 (assessment year 2017-178 were originally to be filed by 31 July. But in view of the delay in issue of TDS/Form 16A, and confusion over choosing appropriate ITR, the deadline has been extended to 31 August.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X