ಗುಡ್ ಇಯರ್ ಇಂಡಿಯಾ ಮಧ್ಯಂತರ ಲಾಭಾಂಶ ಘೋಷಣೆ: ಷೇರು ಬೆಲೆ ಶೇ. 14 ರಷ್ಟು ಏರಿಕೆ
ಮುಂಬೈ, ಡಿಸೆಂಬರ್ 07: ಟಯರ್ ಉತ್ಪಾದನಾ ಕಂಪನಿಯಾದ ಗುಡ್ ಇಯರ್ ಇಂಡಿಯಾ ಮಧ್ಯಂತರ ಲಾಭಾಂಶ(ಡಿವಿಡೆಂಡ್) ಘೋಷನೆ ಮಾಡಿದ ಬೆನಲ್ಲೇ ಸೋಮವಾರ ಕಂಪನಿಯ ಷೇರು ಬೆಲೆ ಶೇಕಡಾ 14ರಷ್ಟು ಏರಿಕೆ ಕಂಡಿದೆ.
2020-21ರ ಆರ್ಥಿಕ ವರ್ಷಕ್ಕೆ ಕಂಪನಿಯ ನಿರ್ದೇಶಕರ ಮಂಡಳಿಯು 2020 ರ ಡಿಸೆಂಬರ್ 7 ರಂದು ನಡೆದ ಸಭೆಯಲ್ಲಿ ತಲಾ 10 ರೂ.ಗಳ ಮುಖಬೆಲೆಯ ಪ್ರತಿ ಇಕ್ವಿಟಿ ಷೇರಿಗೆ 80 ರೂ.ಗಳ ಮಧ್ಯಂತರ ಲಾಭಾಂಶವನ್ನು ಪರಿಗಣಿಸಿ ಘೋಷಿಸಿತು.
ಮಧ್ಯಂತರ ಲಾಭಾಂಶಕ್ಕಾಗಿ ಸದಸ್ಯರ ಅರ್ಹತೆಯನ್ನು ನಿರ್ಧರಿಸುವ(ಡಿವಿಡೆಂಡ್ ವಿತರಣೆ) ದಿನಾಂಕವನ್ನು ಡಿಸೆಂಬರ್ 15, 2021 ಎಂದು ನಿಗದಿಪಡಿಸಲಾಗಿದೆ. ಈ ಉದ್ದೇಶಕ್ಕಾಗಿಯೇ ಡಿಸೆಂಬರ್ 2ರಂದು ಮಾಹಿತಿ ನೀಡಲಾಗಿದೆ.

ಡಿಸೆಂಬರ್ 7ರಂದು ಗುಡ್ ಇಯರ್ ಇಂಡಿಯಾ ಡಿವಿಡೆಂಡ್ ಘೋಷಣೆ ಬಳಿಕ ಕಂಪನಿಯ ಷೇರು ಬೆಲೆ 52 ವಾರಗಳ ಗರಿಷ್ಠ 1,040 ರೂಪಾಯಿವರೆಗೂ ತಲುಪಿ ದಿನದ ವಹಿವಾಟು ಮುಕ್ತಾಯಕ್ಕೆ 121.65 ರೂಪಾಯಿ ಹೆಚ್ಚಳಗೊಂಡು 997.65 ರೂಪಾಯಿಗೆ ತಲುಪಿದೆ.












Click it and Unblock the Notifications