Good News: ಆಹಾರ, ಹೋಟೆಲ್ ಉದ್ಯಮಕ್ಕೆ ಇನ್ಮುಂದೆ ದಿಢೀರ್ ಸಿಗಲಿದೆ FSSAI ಲೈಸೆನ್ಸ್!
ಆಹಾರ ಹಾಗೂ ಹೋಟೆಲ್ ಉದ್ಯಮಗಳಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್ ಇದೆ. ಆಹಾರ ಮತ್ತು ಹೋಟೆಲ್ ಉದ್ಯಮ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಉದ್ಯಮವನ್ನು ಮಾಡಿದವರಿಗೆ ಲಾಭ ಮಿಸ್ ಇಲ್ಲ. ಸ್ವಲ್ಪ ಪ್ಲಾನ್ ಮಾಡಿಕೊಂಡು ಬ್ಯುಸಿನೆಸ್ ಮಾಡಿದರೆ, ಈ ಬ್ಯುಸಿನೆಸ್‌ನಲ್ಲಿ ಲಾಭ ಕಟ್ಟಿಟ್ಟ ಬುತ್ತಿ ಎನ್ನುವ ಮಾತಿದೆ. ಇನ್ನು ಇದೀಗ FSSAI ಸಹ ಭರ್ಜರಿ ( Food Safety and Standards Authority of India) ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಇದರ ನೋಂದಣಿ ಅತ್ಯಂತ ಸುಲಭವಾಗಲಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಹೌದು ಆಹಾರ ವಹಿವಾಟು ಪ್ರಾರಂಭಿಸುವವರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಫೂಡ್ ಬ್ಯುಸಿನೆಸ್ ಮಾಡಬೇಕು ಎನ್ನುವವರಿಗೆ ಇದು ಭರ್ಜರಿ ಗುಡ್‌ನ್ಯೂಸ್ ಆಗಿದೆ. ಇನ್ಮುಂದೆ ದಿಢೀರ್ ಅಂತ ನಿಮಗೆ FSSAIನ ಲೈಸೆನ್ಸ್ ಸಿಗಲಿದೆ. ಯಾರೆಲ್ಲ ಇದಕ್ಕೆ ಅರ್ಹರು ಇದರ ಪ್ರಕ್ರಿಯೆ ಯಾವ ರೀತಿ ಇರಲಿದೆ ಎನ್ನುವ ವಿವರ ಇಲ್ಲಿದೆ.

ಕೇಂದ್ರ ಸರ್ಕಾರವು ಬ್ಯುಸಿನೆಸ್ ಪ್ರಾರಂಭಿಸುವ ಹಂತದಲ್ಲಿ ಇರುವ ಲೈಸೆನ್ಸ್ ಪ್ರಕ್ರಿಯೆಗಳನ್ನು ಕಳೆದ ಐದು ವರ್ಷಗಳಿಂದಲೂ ಗಣನೀಯ ಪ್ರಮಾಣದಲ್ಲಿ ಸರಳೀಕರಣಗೊಳಿಸುತ್ತಿದ್ದು, ಇದೀಗ ಆಹಾರ ಕ್ಷೇತ್ರದಲ್ಲೂ ಗಣನೀಯ ಬದಲಾವಣೆಯನ್ನು ಮಾಡಲು ಮುಂದಾಗಿದೆ. ಇದರ ಭಾಗವಾಗಿ FSSAI ಲೈಸೆನ್ಸ್ ಪ್ರಕ್ರಿಯೆಗಳನ್ನು ಸರಳೀಕರಣ ಮಾಡಲಾಗಿದೆ.
FSSAI ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ
FSSAIಗೆ ಅರ್ಜಿ ಸಲ್ಲಿಸುವ ವಿಧಾನವು ಅತ್ಯಂತ ಸರಳವಾಗಿದೆ. ಇದಕ್ಕೆ ಮೊದಲು ನೀವು FoSCoS ಪೋರ್ಟಲ್‌ಗೆ ಭೇಟಿ ಕೊಡಿ.
[https://foscos.fssai.gov.in] ನಂತರ ಹೋಂಪೇಜ್‌ನಲ್ಲಿ ಕಾಣುವ Apply for Tatkal License / Registration ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಕೆಲವು ದಾಖಲೆಗಳನ್ನು ಕೇಳಲಾಗುತ್ತದೆ. ಆ ದಾಖಲೆಗಳನ್ನು ನೀವು ಅಪ್ಲೋಡ್ ಮಾಡಿದರೆ ಅತ್ಯಂತ ಸರಳವಾಗಿ ನಿಮಗೆ ಲೈಸೆನ್ಸ್ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ: ಉಚಿತ ಸಹಾಯವಾಣಿ ಸಂಖ್ಯೆ 1800112100 ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಯಾವ ದಾಖಲೆಗಳ ಮೂಲಕ ಪರಿಶೀನೆ: ಈ ಪ್ರಕ್ರಿಯೆಗೆ ಜಿಎಸ್‌ಟಿ, ಆಧಾರ್ ಮತ್ತು ಪಾನ್ ಕಾರ್ಡ್‌ಗಳನ್ನು ಡಿಜಿಟಲ್ ಮೂಲಕ ಪರಿಶೀಲನೆ ಮಾಡಲಾಗುತ್ತದೆ.
FSSAI ಲೈಸೆನ್ಸ್‌ಗೆ ಯಾರೆಲ್ಲ ಅರ್ಹರು ?
* ಆಹಾರ ಉದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಾರ ಮಾಡುತ್ತಿರುವವರು
* ವಿತರಕರು
* ಚಿಲ್ಲರೆ ಮಾರಾಟಗಾರರು
* ಫೂಡ್ ಟ್ರಾನ್ಸಪೋಟ್ ಮಾಡುವವರು
* ದಾಸ್ತಾನು ವ್ಯವಸ್ಥೆಯನ್ನು ಹೊಂದಿರುವವರು
* ಆಹಾರ ಮಾರಾಟ ಏಜೆನ್ಸಿಗಳು
* ನೇರ ಮಾರಾಟ ಮಾಡುವವರು
* ಆಮದು ಮಾಡಿಕೊಳ್ಳುವವರು
* ರಫ್ತು ವರ್ತಕರು
* ಚಿಲ್ಲರೆ ಮಾರಾಟಗಾರರು
* ಹಾಕರ್‌ಗಳು ಸೇರಿದಂತೆ ಹಲವರು ಇದಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಉದ್ಯಮ ಪ್ರಾರಂಭಿಸುವುದು ಹಾಗೂ ಉದ್ಯಮಗಳಲ್ಲಿ ಈಸ್ ಬ್ಯುಸಿನೆಸ್ ಪರಿಕಲ್ಪನೆಯ ಅಡಿಯಲ್ಲಿ ಈ ಸುಧಾರಣೆ ತರಲಾಗಿದೆ.












Click it and Unblock the Notifications