ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದ ನಿರ್ಮಲಾ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ಚಿನ್ನ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಚಿನ್ನದ ಆಮದು ಪ್ರಮಾಣ ಎಂದಿನಂತೆ ಸಾಗಿರುವುದು, ಕೋವಿಡ್ 19 ಆರ್ಥಿಕ ಸಂಕಷ್ಟ, ಜಾಗತಿಕ ವಿದ್ಯಮಾನಗಳ ನಡುವೆ ಕೇಂದ್ರ ಬಜೆಟ್ 2021 ಬಗ್ಗೆ ಚಿನಿವಾರ ಪೇಟೆ ಭಾರಿ ನಿರೀಕ್ಷೆ ಇಟ್ಟುಕೊಂಡಿತ್ತು.
ಚಿನ್ನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲಾಗಿದೆ. ಶೇ 11.85% ರಿಂದ ಶೇ 6.9ಕ್ಕಿಳಿಸಲಿದೆ. ಬೆಳ್ಳಿ ಮೇಲೆ ಇದ್ದ ಅಬಕಾರಿ ಸುಂಕ ಶೇ 11%ರಿಂದ ಶೇ 6.1ಕ್ಕಿಳಿಸಲಾಗಿದೆ. ಇದೇ ರೀತಿ ಪ್ಲಾಟಿನಂ ಹಾಗೂ ಪಲ್ಲಿಡಂ ಮೇಲಿನ ಸುಂಕ ಶೇ 12.5ರಿಂದ 10ಕ್ಕಿಳಿಸಲಾಗಿದೆ.
ಇನ್ನು ಜಿ.ಎಸ್.ಟಿ. ಅಡಿ ಚಿನ್ನಾಭರಣ ಮೇಕಿಂಗ್ ಚಾರ್ಜ್ ಶೇ. 5 ರಷ್ಟಿದ್ದು, ಇದನ್ನು ಕಡಿಮೆ ಮಾಡಬೇಕೆಂಬ ಒತ್ತಾಯ ಚಿನ್ನಾಭರಣ ವರ್ತಕರ ಒಕ್ಕೂಟದಿಂದ ಕೇಳಿ ಬಂದಿದೆ. ಐಷಾರಾಮಿ ಜೀವನಕ್ಕೆ ಕಡಿವಾಣ ಹಾಕುವ ಭೂತವನ್ನು ಮೈಮೇಲೆ ಹೊತ್ತು ತಿರುಗುತ್ತಿರುವ ಕೇರಳ ಸರ್ಕಾರದಿಂದ ಚಿನ್ನದ ಮೇಲಿನ ತೆರಿಗೆ ಹೆಚ್ಚಳಕ್ಕೆ ಭಾರಿ ಒತ್ತಡ ಬಂದಿದೆ.

ಚಿನ್ನ ಹಾಗೂ ಬೆಳ್ಳಿ ಮೇಲಿನ ಮೂಲ ಸುಂಕ ಶೇ 12.5ರಷ್ಟಿದೆ. ಜಿಎಸ್ಟಿಗೂ ಮುನ್ನ ಚಿನ್ನದ ಮೇಲೆ ಶೇ. 3ರಷ್ಟು, ರಫ್ ಡೈಮೆಂಡ್ ಗಳ ಮೇಲೆ ಶೇ. 0.25ರಷ್ಟು ಸುಂಕ, ವಜ್ರ, ಇತರೆ ಅಲಂಕಾರಿಗೆ ಹರಳುಗಳ ಮೇಲೂ ಶೇ. 3ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ಜಿ.ಎಸ್.ಟಿ. ಅಡಿ ಚಿನ್ನಾಭರಣ ಮೇಕಿಂಗ್ ಚಾರ್ಜ್ ಶೇ. 5 ರಷ್ಟಿದ್ದು, ಇದನ್ನು ಕಡಿಮೆ ಮಾಡಬೇಕೆಂಬ ಒತ್ತಾಯ ಚಿನ್ನಾಭರಣ ವರ್ತಕರ ಒಕ್ಕೂಟದಿಂದ ಎಂದಿನಿಂದಲೂ ಇದೆ.
ಮೂಲ ಅಬಕಾರಿ ಸುಂಕವನ್ನು 2019ರ ಜುಲೈಯಲ್ಲಿ ಶೇ 10 ರಿಂದ ಶೇ 12.5ಕ್ಕೇರಿಸಲಾಗಿದೆ. ಈ ಬಾರಿ ಬಜೆಟ್ ನಲ್ಲಿ ಕೃಷಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಸೆಸ್ 2.5% ಚಿನ್ನ ಹಾಗೂ ಬೆಳ್ಳಿ ಮೇಲೂ ಹಾಕಲಾಗಿದೆ.












Click it and Unblock the Notifications