Gold Price on Feb 8: ಇಂದಿನ ಚಿನ್ನ ಬೆಳ್ಳಿ ದರದ ಅಪ್ಡೇಟ್, ನಗರವಾರು ದರಪಟ್ಟಿ ಇಲ್ಲಿದೆ
ಬೆಂಗಳೂರು: ಚಿನ್ನ ಬೆಳ್ಳಿ ದರದಲ್ಲಿ ಅಲ್ಪ ಸಮಯದಲ್ಲೇ ಭಾರೀ ಬದಲಾವಣೆ ಆಗಿದೆ. ವಾರದ ಅಂತರದಲ್ಲಿ ನಿರಂತರವಾಗಿ ಹೆಚ್ಚಾಗಿದ್ದ ಈ ಲೋಹಗಳ ಬೆಲೆಗಳು ದಿನಗಳ ಅಂತರದಲ್ಲಿ ಭರ್ಜರಿ ಇಳಿಕೆ ಆಗಿ, ಸಹಜ ಸ್ಥಿತಿಯತ್ತ ಮರಳಿವೆ. ಏರಿಕೆ ಕಂಡಿದ್ದ ಚಿನ್ನವು ತನ್ನ ಮೌಲ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದೆ. ಆದರೆ ಬೆಳ್ಳಿ ನಿರಂತರ ಇಳಿಕೆ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿಲ್ಲ, ಅದು ಇನ್ನಷ್ಟು ಆಗುವ ಸಾಧ್ಯತೆ ಇದೆ. ಇದರ ವಿಶ್ಲೇಷಣೆ ಇಲ್ಲಿದೆ.
ಇಂದು ಭಾನುವಾರ (ಫೆ.8) 22 ಕ್ಯಾರಟ್ ಒಂದು ಗ್ರಾಂ ಬೆಲೆ 14,335 ರೂ.ನಷ್ಟಿತ್ತು ಮತ್ತು 24 ಕ್ಯಾರಟ್ ಒಂದು ಗ್ರಾಂ ಚಿನ್ನದ ದರ 15,660 ರೂಪಾಯಿ ಇದ್ದು, ಒಂದು ವಾರದ ಹಿಂದೆ ಫೆಬ್ರವರಿ 1ರಂದು ಭಾನುವಾರ ಇದೇ ಚಿನ್ನಕ್ಕೆ ಕ್ರಮವಾಗಿ 14, 770 ರೂಪಾಯಿ ಮತ್ತು 16,058 ರೂಪಾಯಿಗೆ ಇಳಿದಿತ್ತು. ಅಲ್ಲಿಂದ ಈವರೆಗೆ ಮೂರು ಬಾರಿ ಇಳಿಕೆ ಹಾಗೂ ಮೂರು ಬಾರಿ ಏರಿಕೆ ಆದರೂ ಸಹಿತ ಮೂಲಕ ಚಿನ್ನವು ತೀವ್ರ ಕುಸಿತ ಕಂಡಿಲ್ಲ. ಬದಲಾಗಿ ಬೆಲೆಯಲ್ಲಿ ತಕ್ಕಮಟ್ಟಿನ ಸ್ಥಿರತೆ ಕಾಯ್ದುಕೊಂಡಿದೆ ಎನ್ನಬಹುದು.

24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 1,56,600 ರೂಪಾಯಿ ಇದೆ. 22 ಕ್ಯಾರಟ್ ಹತ್ತು ಗ್ರಾಂ ಚಿನ್ನದ ದರ 1,43,550 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಇದರ ದರ ಇನ್ನಷ್ಟು ಇಳಿಕೆ ಆಗುವ ನಿರೀಕ್ಷೆ ಇದೆ. ಮದುವೆ, ಇನ್ನಿತರ ಸಮಾರಂಭಗಳಿಗೆ ಚಿನ್ನ ಖರೀದಿಸುವ ಗ್ರಾಹಕರು ದರ ಇಳಿಕೆಗಾಗಿ ಕಾಯುವಂತಾಗಿದೆ. ದರ ಇಳಿಕೆಯು ಹೂಡಿಕೆದಾರರಿಗೆ ನಷ್ಟ ನೀಡಲಿದೆ.
ಬೆಳ್ಳಿ ದರದಲ್ಲಿ ಆದ ವ್ಯತ್ಯಾಸವೇನು?
ಬೆಳ್ಳಿ ದರವು ಇಂದು ಒಂದು ಕೆಜಿಗೆ 2,85,000 ರೂ. ಮತ್ತು 100 ಗ್ರಾಂ ದರ 28,500 ರೂಪಾಯಿ ಇದೆ. ವಾರದ ಹಿಂದೆ ಅಂದರೆ ಫೆಬ್ರವರಿ 1ರಂದು ಭಾನುವಾರ 100 ಗ್ರಾಂ ಇದೇ ಬೆಳ್ಳಿಗೆ ಬರೋಬ್ಬರಿ 35,000 ರೂಪಾಯಿ ಇತ್ತು. ನಂತರ ನಾಲ್ಕು ಬಾರಿ ದರ ಕುಸಿತ ಹಾಗೂ ಎರಡು ಬಾರಿಯ ಏರಿಕೆ ಆಗಿದೆ. ಇದರಿಂದ ಬೆಳ್ಳಿಯು ಇಳಿಮುಖದತ್ತ ಸಾಗಿದ್ದು ಗೊತ್ತಾಗುತ್ತದೆ. 4,10,000 ರೂ. ತಲುಪಿ ಗಗನ ಮುಟ್ಟಿದ್ದ ಶ್ವೇತ ಲೋಹವು ಕಡಿಮೆ ಅವಧಿಯಲ್ಲಿ ಮಹಾ ಕುಸಿತ ಅನುಭವಿಸಿದೆ. ಇದು ಗ್ರಾಹಕರಿಗೆ ಶುಭ ಸುದ್ದಿಯಾಗಿದ್ದು, ಹೂಡಿಕೆದಾರರಿಗೆ ಆಘಾತ ನೀಡಿದೆ.
ಇಂದಿನ 22k ಚಿನ್ನದ ನಗರವಾರು ವಿವರ ಇಲ್ಲಿದೆ
ಬೆಂಗಳೂರು: 14,355 ರೂಪಾಯಿ
ಚೆನ್ನೈ: 14,420 ರೂಪಾಯಿ
ಕೇರಳ: 14,355 ರೂಪಾಯಿ
ಭುವನೇಶ್ವರ್: 14,355 ರೂರೂಪಾಯಿ
ಅಹ್ಮದಾಬಾದ್: 14,360 ರೂಪಾಯಿ
ಮುಂಬೈ: 14,355 ರೂಪಾಯಿ
ದೆಹಲಿ: 14,370 ರೂಪಾಯಿ
ಕೋಲ್ಕತಾ: 14,355 ರೂಪಾಯಿ
ಜೈಪುರ್: 14,370 ರೂಪಾಯಿ
ಲಕ್ನೋ: 14,370 ರೂಪಾಯಿ












Click it and Unblock the Notifications