Gold Price: ಚಿನ್ನದ ಬೆಲೆ 66,350 & ಬೆಳ್ಳಿ ಬೆಲೆ 91,600 ರೂಪಾಯಿ!
ಚಿನ್ನದ ಬೆಲೆ & ಬೆಳ್ಳಿ ಬೆಲೆ ಸತತವಾಗಿ ಕುಸಿತ ಕಾಣುತ್ತಾ ಬರುತ್ತಿದೆ. ಕಳೆದ ಕೆಲ ತಿಂಗಳು ಸತತವಾಗಿ ಚಿನ್ನ & ಬೆಳ್ಳಿ ಎರಡೂ ಕುಸಿದು ಬಿದ್ದಿವೆ. ಅದರಲ್ಲೂ ಚಿನ್ನಕ್ಕೆ ಈಗ ಭಾರಿ ಬೇಡಿಕೆ ಇದ್ದರೂ ಚಿನ್ನ ಮಾತ್ರ ಏರಿಕೆ ಕಂಡಿಲ್ಲ. ಹಾಗಾದ್ರೆ ಚಿನ್ನ & ಬೆಳ್ಳಿ ಬೆಲೆ ಈಗ ಎಷ್ಟು ಗ್ರಾಂಗೆ ಎಷ್ಟು ರೂಪಾಯಿ ಇದೆ? ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಚಿನ್ನ ಅಮೂಲ್ಯ ವಸ್ತು, ಇದೇ ಕಾರಣಕ್ಕೆ ಚಿನ್ನಕ್ಕೆ ಅತ್ಯುನ್ನತ ಸ್ಥಾನ ನೀಡಿದ್ದ ನಮ್ಮ ಪೂರ್ವಿಕರು ಅದನ್ನು ಜೋಪಾನ ಮಾಡಿಕೊಂಡು ಬಂದರು. ಹೀಗಿದ್ದಾಗ ಈ ಆಧುನಿಕ ಕಾಲಘಟ್ಟದಲ್ಲಿ ಚಿನ್ನ & ಬೆಳ್ಳಿಗೆ ಮತ್ತಷ್ಟು ಮಹತ್ವ ಬಂದಿದೆ. ಅದರಲ್ಲೂ ಆಧುನಿಕ ಕಾಲದಲ್ಲಿ ಅತ್ಯಗತ್ಯ ಆಗಿರುವ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೂ ಚಿನ್ನ ಅತ್ಯಗತ್ಯ. ಆಭರಣ ಪ್ರಿಯರಿಗೂ ಚಿನ್ನದ ಮೇಲೆ ಪ್ರೀತಿ, ಇನ್ನು ಹೂಡಿಕೆ ಮಾಡುವವರಿಗೆ ಕೂಡ ಚಿನ್ನವೇ ಬೆಸ್ಟ್ & ಮೊದಲ ಆಯ್ಕೆ ಹೀಗೆ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇರುವಾಗಲೇ ಈ ಹಳದಿ ಲೋಹ ಕುಸಿದು ಬೀಳುತ್ತಿದೆ. ಹಾಗಾದ್ರೆ ಇಂದು ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ?

ಚಿನ್ನದ ಬೆಲೆ ಇಷ್ಟಿದೆ ನೋಡಿ!
ಚಿನ್ನ & ಬೆಳ್ಳಿ ಬೆಲೆ ಮೇಲೆ ಅಂತಾರಾಷ್ಟ್ರೀಯ ವಿದ್ಯಮಾನಗಳು ಪ್ರಭಾವ ಬೀರುತ್ತಿವೆ. ಚಿನ್ನ ಬೆಲೆ ಮುಗಿಲು ಮುಟ್ಟುತ್ತಿದ್ದ ಸಮಯದಲ್ಲೇ ದಿಢೀರ್ ಕುಸಿಯಲು ಶುರು ಮಾಡಿದ್ದು, ಕಳೆದ ಕೆಲ ತಿಂಗಳ ಕಾಲ ನಿರಂತರ ಏರಿಕೆ ಕಂಡು ಚಿನ್ನದ ಬೆಲೆ ಇನ್ನೇನು 10 ಗ್ರಾಂಗೆ 1 ಲಕ್ಷ ರೂಪಾಯಿ ಆಗಲಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಈಗ 1 ಲಕ್ಷ ತಲುಪುವ ಮಾತು ಬಿಡಿ 70,000 ರೂಪಾಯಿ ಹತ್ತಿರ ಕೂಡ ಇಲ್ಲ. ಹಾಗಾದ್ರೆ ಇಂದು ಎಷ್ಟಿದೆ ಚಿನ್ನದ & ಬೆಳ್ಳಿ ರೇಟ್? ಮುಂದೆ ಓದಿ.
ಚಿನ್ನ & ಬೆಳ್ಳಿ ರೇಟ್ ಈಗ...
ಆಭರಣ ಚಿನ್ನದ ಬೆಲೆ 10 ಗ್ರಾಂಗೆ 66,340 ರೂಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 72,370 ರೂಪಾಯಿ ಆಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ 54,280 ರೂಪಾಯಿಗೆ ಬಂದು ನಿಂತಿದೆ. ಇನ್ನುಳಿದಂತೆ ಬೆಳ್ಳಿ ಬೆಲೆ ಕೂಡ ಏರಿಳಿತ ಕಂಡಿದ್ದು, ಇದೀಗ ಬೆಳ್ಳಿಯ ರೇಟ್ ಪ್ರತಿ 100 ಗ್ರಾಂಗೆ 9,160 ರೂಪಾಯಿ ಇದೆ. ಹಾಗೇ ಬೆಳ್ಳಿ ಬೆಲೆ ಪ್ರತಿ ಕೆಜಿ ಈಗ 91,600 ರೂಪಾಯಿ ಆಗಿದೆ. ಈ ಮೂಲಕ ಬೆಳ್ಳಿ ಬೆಲೆಯಲ್ಲಿ ಕೂಡ ಏರಿಳಿತ ಆಗಿದೆ.
ಆಭರಣ ಪ್ರಿಯರಿಗೆ ಚಿನ್ನವೇ ಚನ್ನ!
ಒಂದು ಕಡೆ ಹೂಡಿಕೆ ಮಾಡುವವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ ಆಗುತ್ತದೆ, ಆದರೂ ಸಾಮಾನ್ಯವಾಗಿ ಆಭರಣಗಳನ್ನ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಮಾತ್ರ ಸಂತಸವಾಗುತ್ತದೆ. ಹೀಗೆ ಚಿನ್ನದ ಬೆಲೆಯು ಕಳೆದ 1 ತಿಂಗಳಿಂದ ಭಾರಿ ಏರಿಳಿತವನ್ನು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಂಡು, ಆ ನಂತರದಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳುತ್ತದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಆಭರಣವನ್ನ ಕೊಳ್ಳುವವರಿಗೆ ಈ ತಿಂಗಳು ಮತ್ತಷ್ಟು ಸಿಹಿಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು.












Click it and Unblock the Notifications