ಚಿನ್ನದ ಬೆಲೆ ಮತ್ತೆ ಏರಿಕೆ, ಯಾವ ನಗರಗಳಲ್ಲಿ ಎಷ್ಟು ಬೆಲೆ?
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಎರಡು ತಿಂಗಳಲ್ಲೇ ಕಾಣದಂಥ ಏರಿಕೆ ಕಂಡಿದೆ. ಸೋಮವಾರ (ಮೇ.10) ದಂದು ಕೆಲವೆಡೆ ಖರೀದಿ ಚಿನ್ನದ ಬೆಲೆ 10ರು ನಂತೆ ಏರಿಕೆ ಕಂಡಿದೆ. ಬಹುತೇಕ ಎಲ್ಲೆಡೆ ಬೆಲೆ ಸ್ಥಿರವಾಗಿದ್ದು, ಅಕ್ಷಯ ತೃತೀಯ ವೇಳೆ ಏರಿಳಿತ ಹೆಚ್ಚಾಗುವ ಸೂಚನೆ ಸಿಕ್ಕಿದೆ.
ಏಪ್ರಿಲ್ ತಿಂಗಳಲ್ಲಿ ನಿರಂತರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಮೇ ತಿಂಗಳ ಮೊದಲ ವಾರ ಹೆಚ್ಚಿನ ಬದಲಾವಣೆ ಕಂಡಿಲ್ಲ. ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ 10 ಗ್ರಾಂ ಬೆಲೆ 0,18%ರು ನಷ್ಟು ಏರಿಕೆಯಾಗಿ 47, 835ರು ಹಾಗೂ ಬೆಳ್ಳಿ ಶೇ0.95 ರಷ್ಟು ಏರಿಕೆಯಾಗಿ ಪ್ರತಿ 1 ಕೆಜಿಗೆ 72,111 ರು ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.3ರಷ್ಟು ಏರಿಕೆಯಾಗಿ 1,836.05ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.85ರಷ್ಟು ಏರಿಕೆಯಾಗಿ 27.69ಯುಎಸ್ ಡಾಲರ್ ಆಗಿದೆ.
ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 10: 44,610 (---) 48,670(---)
ಮೇ 9: 44,610 (10 ರು ಏರಿಕೆ) 48,670(10ರು ಏರಿಕೆ)
ಮೇ 8: 44,600 (+100 ರು) 48,660 (+110ರು)
ಮೇ 7: 44,500 (+500 ರು) 48,550 (+550ರು)
ಮೇ 6: 44,000 (+100) 48,000 (+110)
ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 10: 46,000 (--) 50,000 (---)
ಮೇ 9: 46,000 (10 ರು ಏರಿಕೆ) 50,000 (+10)
ಮೇ 8: 45,990 (+80 ರು) 49,990 (+40ರು)
ಮೇ 7: 45,910 (+ 310 ರು ಏರಿಕೆ) 49,950 (+210ರು)
ಮೇ 6: 45,600 (+110 ರು ) 49,740 (+110 ರು)
ಮೇ 5: 45,490 (-290) 49,630 (-350)
ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 10: 45,050 (60 ರು ಇಳಿಕೆ) 49,150 (60 ರು ಇಳಿಕೆ)
ಮೇ 9: 45,110 (10 ರು ಏರಿಕೆ) 49,210 (-2990)
ಮೇ 8: 45,100 (+130 ರು) 49,200 (+140ರು)
ಮೇ 7: 44,970 (+470 ರು) 49,060 (+570 ರು)
ಮೇ 6: 44,500 (+350 ರು) 48,490 (+330ರು)
ಬೆಳ್ಳಿ: 1 ಕೆ.ಜಿಗೆ 76,500ರುಪಾಯಿ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್-24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 10: 44,910 (---) 45,910 (---)
ಮೇ 9: 44,910 (10 ರು ಏರಿಕೆ) 45,910 (10 ರು ಏರಿಕೆ)
ಮೇ 8: 44,900 (+100 ರು) 49,900 (+100ರು)
ಮೇ 7: 44,800 (+510 ರು) 45,800 (+510ರು)
ಮೇ 6: 44,290 (+10 ರು) 45,290 (+10 ರು)
ಬೆಳ್ಳಿ: 1 ಕೆ.ಜಿಗೆ 71,500ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಮೇ 10: 44,610 (---) 48,670 (-510)
ಮೇ 9: 44,610 (10 ರು ಏರಿಕೆ) 49,180 (10 ರು ಏರಿಕೆ)
ಮೇ 8: 44,600 (+100 ರು) 48,660 (+110ರು)
ಮೇ 7: 44,500 (+500 ರು) 48,550 (+550ರು)
ಮೇ 6: 44,000 (+100 ರು) 48,000 (+110ರು)
ಬೆಳ್ಳಿ: 1 ಕೆ.ಜಿಗೆ 76,500ರುಪಾಯಿ












Click it and Unblock the Notifications