Gold Rate On Sep 29: ಚಿನ್ನದ ಬೆಲೆಯಲ್ಲಿ ಸರ್ವಕಾಲಿಕ ದಾಖಲೆ : ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ !

Gold Rate On Sep 29: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು ಚಿನ್ನ ಪ್ರಿಯರಿಗೆ ಶಾಕ್ ಎದುರಾಗಿದೆ. ಚಿನ್ನದ ಬೆಲೆಯು ಕೆಲವು ದಿನಗಳಿಂದ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇದಕ್ಕೆ ಡಾಲರ್ ಮೌಲ್ಯದ ಮುಂದೆ ರೂಪಾಯಿ ಬೆಲೆ ಭಾರೀ ಇಳಿಕೆಯಾಗಿರುವುದು. ಭೌಗೋಳಿಕವಾಗಿ ಕೆಲವೊಂದು ಅನಿಶ್ವಿತತೆ ಸೃಷ್ಟಿಯಾಗಿರುವುದು ಹಾಗೂ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ತೆರಿಗೆ ನೀತಿ, ಎಐ ಭೀತಿ ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಬೆಲೆಯು ಏರಿಕೆಯಾಗುತ್ತಲ್ಲೇ ಇದೆ. ಇಂದಿನ (ಸೆಪ್ಟೆಂಬರ್ 29)ರ ಚಿನ್ನ ಮತ್ತು ಬೆಳ್ಳಿಯ ಬೆಲೆ ವಿವರ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಸರ್ವಕಾಲಿಕ ಇತಿಹಾಸವನ್ನು ಸೃಷ್ಟಿ ಮಾಡಿದೆ. ಕಳೆದ ಕೇವಲ ಮೂರು ವರ್ಷಗಳ ಹಿಂದಷ್ಟೇ ಚಿನ್ನದ ಬೆಲೆಯು 55,000 ಸಾವಿರ ರೂಪಾಯಿಯಿಂದ 60,000 ಸಾವಿರ ರೂಪಾಯಿ ಇತ್ತು. ಆದರೆ ಇದೀಗ ಏಕಾಏಕಿ ಚಿನ್ನದ ಬೆಲೆಯು 1,16,000 ಸಾವಿರ ರೂಪಾಯಿ ತಲುಪಿದೆ. ಕಳೆದ ವಾರ ಚಿನ್ನದ ಬೆಲೆಯು 1,20,000 ಸಾವಿರ ರೂಪಾಯಿ ದಾಟಿದೆ. ಇಂದಿನ 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಸಂಪೂರ್ಣ ವಿವರ ಇಲ್ಲಿದೆ.

Gold Rate Today Sep 29 Prices Hit All-Time Record High Silver Also Surges

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 8,730 ರೂಪಾಯಿ ಆಗಿದೆ. ಇನ್ನು 10 ಗ್ರಾಂಗೆ 87,300 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂ ಚಿನ್ನದ ಬೆಲೆಯು 69 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 690 ರೂಪಾಯಿ ಆಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯು 10,670 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂ ಬೆಲೆಯು 1,06,700 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 85 ರೂಪಾಯಿ ಹಾಗೂ 10 ಗ್ರಾಂಗೆ ಬರೋಬ್ಬರಿ 850 ರೂಪಾಯಿ ಹೆಚ್ಚಳವಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆ ಸಹ ಭಾರೀ ಹೆಚ್ಚಳವಾಗಿದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 11,640 ರೂಪಾಯಿ ಆಗಿದೆ. 10

ಗ್ರಾಂ ಚಿನ್ನದ ಬೆಲೆಯು 1,16,400 ರೂಪಾಯಿ ಆಗಿದೆ. ಭಾನುವಾರಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 92 ರೂಪಾಯಿ ಹಾಗೂ 10 ಗ್ರಾಂಗೆ 920 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ: ಇನ್ನು ಬೆಳ್ಳಿ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 150 ರೂಪಾಯಿ ಆಗಿದೆ. ಕೆ.ಜಿ ಬೆಳ್ಳಿ ಬೆಲೆಯು 1,50,000 ಸಾವಿರ ರೂಪಾಯಿ ಆಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯು 500 ರೂಪಾಯಿ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+