Gold Rate Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ದರವೆಷ್ಟು?

ಬೆಂಗಳೂರು: ಸೆಪ್ಟೆಂಬರ್‌ ಆರಂಭದಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆ ಕಂಡಿದೆ. ನಿನ್ನೆ ಇಳಿಕೆ ಕಂಡದ್ದ ಬಂಗಾರದ ಬೆಲೆ ಶನಿವಾರ ಅಲ್ಪ ಏರಿಕೆ ಕಂಡುಬಂದಿದ್ದರೂ, ಕಳೆದ ಶನಿವಾರ ಹಾಗೂ ಸೋಮವಾರ ಚಿನ್ನದ ದರ ಮತ್ತೆ ಕುಸಿದಿತ್ತು. ಮಂಗಳವಾರ ಮತ್ತು ಗುರುವಾರ ಸ್ವಲ್ಪ ಪ್ರಮಾಣದ ಏರಿಕೆ ದಾಖಲಾಗಿತ್ತು.

ಶುಕ್ರವಾರ (ನಿನ್ನೆ) ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದರಿಂದ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಮುಂದಾಗಿದ್ದ ಗ್ರಾಹಕರಿಗೆ ಕೊಂಚ ನಿರಾಳತೆ ಸಿಕ್ಕಿತ್ತು. ಆದರೆ ಇದೀಗ ಸೆಪ್ಟೆಂಬರ್‌ 12, ಶನಿವಾರದ ಬೆಳಗಿನ ವಹಿವಾಟಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆ ದಾಖಲಾಗಿದೆ.

Gold Rate Today Gold Prices Rise Again 24K Crosses 1 54 Lakh per 10 Grams And Silver Remains Stable

ಬೆಂಗಳೂರಿನಲ್ಲಿ ಬಂಗಾರದ ಬೆಲೆ ಎಷ್ಟು?

ಬೆಂಗಳೂರಿನ ಮಾರುಕಟ್ಟೆಯಲ್ಲಿ ಶನಿವಾರ ಬೆಳಗ್ಗೆ 24 ಕ್ಯಾರೆಟ್‌ ಶುದ್ಧ ಚಿನ್ನದ ಬೆಲೆ ಶುಕ್ರವಾರದ ಸಂಜೆಯ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ ₹16ರಷ್ಟು ಏರಿಕೆಯಾಗಿದೆ. ಇದರೊಂದಿಗೆ ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ₹15,458ಕ್ಕೆ ತಲುಪಿದ್ದು, 10 ಗ್ರಾಂ ಚಿನ್ನದ ಬೆಲೆ ₹1,54,580ಕ್ಕೆ ಬಂದಿದೆ. ಇದೇ ವೇಳೆ ಆಭರಣ ಚಿನ್ನ ಎಂದು ಕರೆಯಲಾಗುವ 22 ಕ್ಯಾರೆಟ್‌ ಚಿನ್ನದ ದರ ಪ್ರತಿ ಗ್ರಾಂಗೆ ₹15ರಷ್ಟು ಹೆಚ್ಚಾಗಿದ್ದು, ಒಂದು ಗ್ರಾಂಗೆ ₹14,170 ಹಾಗೂ 10 ಗ್ರಾಂಗೆ ₹1,41,700 ಆಗಿದೆ.

ಇನ್ನು 18 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಏರಿಕೆ ದಾಖಲಾಗಿದೆ. 18 ಕ್ಯಾರೆಟ್‌ ಚಿನ್ನದ ದರ ಪ್ರತಿ ಗ್ರಾಂಗೆ ₹12ರಷ್ಟು ಹೆಚ್ಚಾಗಿದ್ದು, ಒಂದು ಗ್ರಾಂಗೆ ₹11,594 ಹಾಗೂ 10 ಗ್ರಾಂಗೆ ₹1,15,940ಕ್ಕೆ ತಲುಪಿದೆ. ಹೀಗಾಗಿ ಶನಿವಾರದ ಬೆಳಗಿನ ವಹಿವಾಟಿನಲ್ಲಿ 24, 22 ಮತ್ತು 18 ಕ್ಯಾರೆಟ್‌ ಚಿನ್ನದ ದರದಲ್ಲೂ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.

ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು?

ವಿವಿಧ ನಗರಗಳಲ್ಲಿಯೂ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮುಂಬೈನಲ್ಲಿ ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ₹15,458 ಹಾಗೂ 22 ಕ್ಯಾರೆಟ್‌ ಚಿನ್ನದ ದರ ₹14,170ರಷ್ಟಿದೆ. ಅಹಮದಾಬಾದ್‌ನಲ್ಲಿ 24 ಕ್ಯಾರೆಟ್‌ ಚಿನ್ನದ ದರ ₹15,463 ಹಾಗೂ 22 ಕ್ಯಾರೆಟ್‌ ಚಿನ್ನದ ದರ ₹14,175ಕ್ಕೆ ತಲುಪಿದೆ.

ಚೆನ್ನೈನಲ್ಲಿ ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ₹15,458 ಮತ್ತು 22 ಕ್ಯಾರೆಟ್‌ ಚಿನ್ನದ ದರ ₹14,170 ಆಗಿದೆ. ಕೋಲ್ಕತ್ತಾ ಹಾಗೂ ಹೈದರಾಬಾದ್‌ನಲ್ಲೂ ಇದೇ ದರ ಮುಂದುವರಿದಿದೆ. ಜೈಪುರದಲ್ಲಿ ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ₹15,473 ಹಾಗೂ 22 ಕ್ಯಾರೆಟ್‌ ಚಿನ್ನದ ದರ ₹14,185 ಆಗಿದೆ. ಚಂಡೀಗಢ ಮತ್ತು ಲಖನೌನಲ್ಲೂ 24 ಕ್ಯಾರೆಟ್‌ ಚಿನ್ನ ₹15,473 ಹಾಗೂ 22 ಕ್ಯಾರೆಟ್‌ ಚಿನ್ನ ₹14,185ರಷ್ಟಿದೆ. ಕೊಚ್ಚಿಯಲ್ಲೂ 24 ಕ್ಯಾರೆಟ್‌ ಚಿನ್ನದ ದರ ₹15,458 ಮತ್ತು 22 ಕ್ಯಾರೆಟ್‌ ಚಿನ್ನದ ದರ ₹14,170ರಷ್ಟಿದೆ.

ಹಬ್ಬದ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿನ್ನ ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳಲ್ಲಿ ದರದಲ್ಲಿ ಕಂಡುಬಂದ ಇಳಿಕೆ ಖರೀದಿದಾರರಿಗೆ ಕೊಂಚ ಅನುಕೂಲವಾಗಿದ್ದರೂ, ಶನಿವಾರ ಮತ್ತೆ ಬೆಲೆ ಏರಿಕೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+