ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.22 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?

|
Google Oneindia Kannada News

ನವದೆಹಲಿ, ಅಕ್ಟೋಬರ್ 22: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 22 ರಂದು ಶುಕ್ರವಾರ ಚಿನ್ನದ ಬೆಲೆ ಏರಿಳಿತ ಕಂಡಿದೆ. ಕೆಲವು ನಗರದಲ್ಲಿ ಇಳಿಕೆ ಕಂಡು ಬಂದರೆ ಮತ್ತು ಕೆಲವು ನಗರಗಳಲ್ಲಿ ಏರಿಕೆ ಕಂಡು ಬಂದಿದೆ.

22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,460 ರೂ ಇದೆ, 24 ಕ್ಯಾರೆಟ್ ಅಪರಂಜಿ ಚಿನ್ನಕ್ಕೆ 47,460 ರೂ. ಆಗಿದ್ದು, 10 ರೂ ಇಳಿಕೆ ಕಂಡಿದೆ.

ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 44,550 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,700 ರೂ. ಇದ್ದು, 24 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನಕ್ಕೆ 50,950ರೂ. ಇದೆ.

ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹65,300 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹65,300 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹69,500 ರೂ ನಿಗದಿಯಾಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ವಿಶ್ವ ಚಿನ್ನ ಪರಿಷತ್ತು, ಭಾರತೀಯ ಚಿನ್ನ ಮಾರುಕಟ್ಟೆಯ ಆಳ - ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ 'ಭಾರತೀಯ ಚಿನ್ನ ಬೇಡಿಕೆಯ ಚಾಲಕರು' ಎಂಬ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಎಕನೋಮೆಟ್ರಿಕ್‌ ಮಾದರಿಯನ್ನು ಬಳಸಿ ತಯಾರಾಗಿರುವ ಈ ವರದಿ, 1990 ರಿಂದ 2020 ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಭಾರತದ ಚಿನ್ನದ ಬೇಡಿಕೆಯ ಮೇಲಿನ ಕೆಲ ಪ್ರಮುಖ ಪ್ರಭಾವಗಳ ಕುರಿತು ವಿಶ್ಲೇಷಿಸಿದೆ.

ಈ ವರದಿಯು ಪ್ರಮಾಣ ಹಾಗೂ ಗುಣಮಟ್ಟ ಎರಡೂ ದೃಷ್ಟಿಕೋನದಿಂದ ಚಿನ್ನದ ಬೇಡಿಕೆಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿಯ ಚಿನ್ನದ ಬೇಡಿಕೆಯ ಸಮಗ್ರ ವಿಶ್ಲೇಷಣೆಯ ಜೊತೆಗೆ, ಈ ಬೇಡಿಕೆಯನ್ನು ರೂಪಿಸುವ ಜನಸಂಖ್ಯಾ ಶಾಸ್ತ್ರ, ಸಾಮಾಜಿಕ - ಆರ್ಥಿಕ ಮತ್ತು ಸಂಬಂಧಿಸಿದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಇದು ಭವಿಷ್ಯದ ಬೇಡಿಕೆಯ ಏರುಪೇರಿನ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.

 ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ

ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 22: 44, 550 ರೂ, 48,6000 ರೂ(-)
ಅಕ್ಟೋಬರ್ 21: 44, 550 ರೂ, 48,6000 ರೂ
ಅಕ್ಟೋಬರ್ 20:44, 300 ರೂ, 48,330 ರೂ(-)
ಅಕ್ಟೋಬರ್ 19:44, 300 ರೂ, 48,330 ರೂ
ಅಕ್ಟೋಬರ್ 18:44, 300 ರೂ, 48,330 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,300ರೂಪಾಯಿ

 ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ

ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 22: 46,700ರೂ,(90ರೂ ಏರಿಕೆ, 50,950ರೂ( 100 ರೂ ಏರಿಕೆ)
ಅಕ್ಟೋಬರ್ 21: 46,610 ರೂ, 50,850ರೂ
ಅಕ್ಟೋಬರ್ 20: 46,450( 10ರೂ ಇಳಿಕೆ), 50,670 ರೂ(10ರೂ ಇಳಿಕೆ)
ಅಕ್ಟೋಬರ್ 19:46,460 ರೂ,( 130ರೂ. ಏರಿಕೆ) 50,680 ರೂ( 140 ರೂ. ಏರಿಕೆ)
ಅಕ್ಟೋಬರ್ 18:46,330 ರೂ, 50,540 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,300 ರೂಪಾಯಿ

 ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 22: 46,460ರೂ, (20 ರೂ ಇಳಿಕೆ) 47,460 ರೂ (20 ರೂ ಇಳಿಕೆ)
ಅಕ್ಟೋಬರ್ 21: 46,480ರೂ, 47,480 ರೂ
ಅಕ್ಟೋಬರ್ 20: 46,500 ರೂ, 47,500 ರೂ
ಅಕ್ಟೋಬರ್ 19: 47,070 ರೂ, 48,070 ರೂ
ಅಕ್ಟೋಬರ್ 18: 47,070 ರೂ, 48,070 ರೂ

ಬೆಳ್ಳಿ ಬೆಲೆ ಕೆ.ಜಿಗೆ 65,300ರೂಪಾಯಿ

 ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 22: 44,550 ರೂ, 48,600ರೂ(-)
ಅಕ್ಟೋಬರ್ 21: 44,550 ರೂ, 48,600ರೂ
ಅಕ್ಟೋಬರ್ 20: 44,300 ರೂ, 48330 ರೂ
ಅಕ್ಟೋಬರ್ 19: 44,300 ರೂ, 48330 ರೂ
ಅಕ್ಟೋಬರ್ 18: 44,300 ರೂ, 48330 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,500 ರೂಪಾಯಿ

 ಕೋಲ್ಕತ್ತಾದಲ್ಲಿ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾದಲ್ಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 22: 46,950 ರೂ,(50 ರೂ ಏರಿಕೆ) 49,650 ರೂ 50 ರೂ ಏರಿಕೆ
ಅಕ್ಟೋಬರ್ 21: 46,900 ರೂ, 49,600 ರೂ
ಅಕ್ಟೋಬರ್ 20: 46,840 ರೂ, 48,300 ರೂ
ಅಕ್ಟೋಬರ್ 19: 46,760ರೂ(30ರೂ. ಏರಿಕೆ) , 49,460ರೂ(30ರೂ. ಏರಿಕೆ)
ಅಕ್ಟೋಬರ್ 18: 46,730ರೂ , 49,430ರೂ

ಬೆಳ್ಳಿ: 1 ಕೆ.ಜಿಗೆ 65,300 ರೂಪಾಯಿ

English summary
Gold Rate Today; Gold Rate Today, Gold Prices decreased On October 22 . Here is price list...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X