Gold Rate: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಇಳಿಕೆ
Gold Rate: ಕೇಂದ್ರ ಬಜೆಟ್ 2026ರ ಮಂಡನೆ ಮಾಡುವುದಕ್ಕೆ ಕ್ಷಣಗಣನೆ ಇರುವಾಗಲೇ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ರೀತಿ ಇರುವಾಗಲೇ ಚಿನ್ನ ಮತ್ತು ಬೆಳ್ಳಿ ಬೆಲೆಯು ವಿಪರೀತವಾದ ಏರಿಳಿತವನ್ನು ಕಂಡಿದೆ. ಫೆಬ್ರವರಿ 1ರ 2026ರಂದು ಬೆಳಿಗ್ಗೆ 9.30ರ ವೇಳೆಗೆ ಶೇ. 12 ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಇದಾದ ಕೇವಲ 15 ನಿಮಿಷಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ8 ಇಳಿಕೆಯಾಗಿದ್ದು, ಸ್ಥಿರತೆ ಇದೆ. ಇನ್ನು ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ.

ಚಿನ್ನದ ಬೆಲೆಯು ಬಜೆಟ್ ದಿನವಾದ ಫೆಬ್ರವರಿ 1ರಂದು ಭರ್ಜರಿ ಇಳಿಕೆ ಕಂಡಿದೆ. ಬಜೆಟ್‌ಗೆ ಇನ್ನು ಕೆಲವೇ ಕ್ಷಣಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಚಿನ್ನದ ಬೆಲೆಯು 24 ಕ್ಯಾರೆಟ್‌ನ ಚಿನ್ನದ ಮೇಲೆ 10 ಗ್ರಾಂಗೆ 9,000 ಸಾವಿರ ರೂಪಾಯಿ ಇಳಿಕೆಯಾಗಿದೆ.
ಕಳೆದ 15 ದಿನಗಳಿಂದಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ವಿಪರೀತವಾದ ಏರಿಳಿತವಾಗುತ್ತಿದೆ. ಅದರಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಯು ಏಕಾಏಕಿ 8,000 ರೂ.ನಿಂದ 11,000 ರೂ. ವರೆಗೆ ಹೆಚ್ಚಳವಾಗಿರುವುದು ಹಾಗೂ ಅದೇ ರೀತಿ 8,000 ರೂ., 7000 ರೂ. ಇಳಿಕೆಯನ್ನೂ ಕಂಡಿದೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುವುದಕ್ಕೂ ಇನ್ನೊಂದು ಗಂಟೆ ಇರುವಾಗಲೇ ಭಾರೀ ಇಳಿಕೆ ಕಂಡಿದೆ.
ಬೆಳ್ಳಿ ಬೆಲೆ ಭರ್ಜರಿ ಇಳಿಕೆ
ಇನ್ನು ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು ಬಜೆಟ್ ಮಂಡನೆಗೆ ಕೆಲವೇ ಕ್ಷಣಗಳ ಮುಂಚಿತವಾಗಿ ಬರೋಬ್ಬರಿ 27,000 ರೂ. ಇಳಿಕೆ ಕಂಡಿದೆ. ಇದು ಬೆಳ್ಳಿ ಪ್ರಿಯರಿಗೆ ಸಂತೋಷನ್ನುಂಟು ಮಾಡಿದೆ.
ಜನವರಿ 31 - 30ರಂದು ಚಿನ್ನದ ಬೆಲೆ ಹೇಗಿತ್ತು
24 ಕ್ಯಾರಟ್ ಚಿನ್ನ: 1,60,580 (ಜನವರಿ 30ರ ಅಂದಾಜು 1,70,620 ರೂ. ರಿಂದ ಕಡಿಮೆಯಾಗಿತ್ತು).
22-ಕ್ಯಾರಟ್ ಚಿನ್ನ: ₹1,47,200 (ಜನವರಿ 30ರ ಅಂದಾಜು 1,56,400 ರೂ. ರಿಂದ ಕಡಿಮೆಯಾಗಿತ್ತು).
18-ಕ್ಯಾರಟ್ ಚಿನ್ನ: ₹1,20,440 (ಜನವರಿ 30ರ ಅಂದಾಜು 1,27,970 ರೂ. ರಿಂದ ಕಡಿಮೆಯಾಗಿತ್ತು).ಚಿನ್ನ
ಪ್ರಿಯರಲ್ಲಿ ಮುಂದುವರಿದ ಗೊಂದಲ
ಇನ್ನು ಚಿನ್ನದ ಬೆಲೆಯು ಏಕಾಏಕಿ ಇಳಿಕೆಯಾಗುತ್ತಿರುವುದು ಹಾಗೂ ಏಕಾಏಕಿ ಹೆಚ್ಚಳವಾಗುತ್ತಿರುವುದು ಚಿನ್ನ ಪ್ರಿಯರಲ್ಲಿ ಗೊಂದಲ ಮೂಡಿಸಿದೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಈಗ ಖರೀದಿ ಮಾಡದೆ ಇರಬೇಕು ಎನ್ನುವುದು ತಿಳಿಯದಂತೆ ಆಗಿದೆ. ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಭಾರೀ ಹೆಚ್ಚಳವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಇನ್ನೇನು ಚಿನ್ನದ ಬೆಲೆಯು 2 ಲಕ್ಷ ರೂಪಾಯಿ ಮುಟ್ಟಲಿದೆ ಎನ್ನುವುದರ ಒಳಗಾಗಿ ಚಿನ್ನದ ಬೆಲೆಯು ಸತತ ಮೂರು ದಿನಗಳ ಕಾಲ ಕುಸಿತ ಕಂಡಿದ್ದು, ಇದು ಚಿನ್ನ ಪ್ರಿಯರಿಗೆ ಗೊಂದಲ ಸೃಷ್ಟಿಸಿದೆ. ಗೊಂದಲವಾಗಿದ್ದರೂ ಚಿನ್ನದ ಬೆಲೆ ಇಳಿಕೆ ಸಂತೋಷವನ್ನುಂಟು ಮಾಡಿದೆ. ಆದರೆ ಇದೇ ಸಂದರ್ಭದಲ್ಲಿ ಮುಂದೆ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದು ಎನ್ನುವ ಆತಂಕದಲ್ಲಿ ಚಿನ್ನ ಖರೀದಿ ಮಾಡಿಟ್ಟುಕೊಂಡವರು ಕಣ್ಣೀರು ಹಾಕುವಂತೆ ಆಗಿದೆ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications