Gold Price: ₹80,000 ದಾಟಿದ ಚಿನ್ನದ ಬೆಲೆ; ಬೆಳ್ಳಿ ಬೆಲೆ ಕುಸಿತ

ಚಿನ್ನದ ಬೆಲೆ ಮತ್ತೊಮ್ಮೆ ಸಾರ್ವಕಾಲಿಕ ಗರಿಷ್ಠ ಬೆಲೆ ಮುಟ್ಟಿದೆ. ಶನಿವಾರ ಒಂದೇ ದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 71 ರೂಪಾಯಿ ಏರಿಕೆಯಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು, ಯುಎಸ್ ಚುನಾವಣೆ ಅನಿಶ್ಚಿತತೆಗಳು, ಉಕ್ರೇನ್ ರಷ್ಯಾ ನಡುವಿನ ಸಂಘರ್ಷ, ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿತದಂತಹ ಅಂಶಗಳು ಚಿನ್ನದ ಬೆಲೆ ಏರಿಕೆಯ ಮೇಲೆ ಪರಿಣಾಮ ಬೀರಿವೆ. ಹೂಡಿಕೆದಾರರು ಚಿನ್ನದ ಬೆಲೆ ಹೆಚ್ಚು ಹೂಡಿಕೆ ಮಾಡಲು ಆಸಕ್ತಿ ತೋರಿದ್ದರಿಂದ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ.

ಅಕ್ಟೋಬರ್ 24 ರಂದು 24 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 60 ರೂಪಾಯಿ ಕುಸಿತ ಕಂಡಿದ್ದರೆ, 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 55 ರೂಪಾಯಿ ಕಡಿಮೆಯಾಗುವ ಮೂಲಕ ಚಿನ್ನಾಭರಣ ಪ್ರಿಯರ ಖುಷಿ ಹೆಚ್ಚಿಸಿತ್ತು. ಆದರೆ ಮರುದಿನ ಶುಕ್ರವಾರವೇ 24 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 11 ರೂಪಾಯಿ, 22 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 10 ರೂಪಾಯಿ ಏರಿಕೆಯಾಗಿತ್ತು. ಶನಿವಾರ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದ್ದು ಸಾರ್ವಕಾಲಿಕ ಗರಿಷ್ಠ ದರ ತಲುಪಿದೆ.

Gold rate surpasses Rs 8000 per gram again here s the silver price

ಅಕ್ಟೋಬರ್ 25ರಂದು 7,295 ರೂಪಾಯಿ ಇದ್ದ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 65 ರೂಪಾರಯಿ ಏರಿಕೆಯಾಗಿ 7,360 ರೂಪಾಯಿ ತಲುಪಿದೆ. ಅಂದರೆ 10 ಗ್ರಾಮ 22 ಕ್ಯಾರಟ್ ಚಿನ್ನದ ಬೆಲೆ 650 ರೂಪಾಯಿ ಏರಿಕೆಯಾಗಿದ್ದರೆ, 100 ಗ್ರಾಂ ಆಭರಣ ಚಿನ್ನದ ಬೆಲೆ 6500 ರೂಪಾಯಿ ಏರಿಕೆಯಾಗಿದೆ.

ಇನ್ನು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 71 ರೂಪಾಯಿ ಏರಿಕೆಯಾಗಿದೆ. ಶುಕ್ರವಾರ 7958 ರೂಪಾಯಿ ಇದ್ದ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ 8,029 ರೂಪಾಯಿಗೆ ತಲುಪಿದ್ದು, ಭಾನುವಾರ ಕೂಡ ಅದೇ ದರದಲ್ಲಿ ಮಾರಾಟವಾಗುತ್ತಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 710 ರೂಪಾಯಿ ಏರಿಕೆಯಾಗಿದ್ದರೆ, 100 ಗ್ರಾಂ ಶುದ್ಧ ಚಿನ್ನದ ಬೆಲೆ 7,100 ರೂಪಾಯಿ ಏರಿಕೆಯಾಗಿದೆ.

18 ಗ್ರಾಮ ಚಿನ್ನದ ಬೆಲೆಯಲ್ಲಿ ಕೂಡ ಏರಿಕೆಯಾಗಿದೆ. ಶನಿವಾರ ಒಂದೇ ದಿನ 18 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 53 ರೂಪಾಯಿ ಏರಿಕೆಯಾಗಿದೆ. ಶುಕ್ರವಾರ 5,969 ರೂಪಾಯಿ ಇದ್ದ ಒಂದು ಗ್ರಾಮ 18 ಕ್ಯಾರಟ್ ಚಿನ್ನ ಶನಿವಾರ 6,022 ರೂಪಾಯಿಗೆ ಏರಿಕೆಯಾಗಿದ್ದು, ಭಾನುವಾರ ಕೂಡ ಅದೇ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಬೆಳ್ಳಿ ಬೆಲೆಯಲ್ಲಿ ಕುಸಿತ

ಚಿನ್ನದ ಬೆಲೆ ಏರಿಕೆಯಾಗುತಲೇ ಇದ್ದರೆ ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಶುಕ್ರವಾರ ಒಂದು ಕೆಜಿ ಬೆಳ್ಳಿ ಬೆಲೆ 3000 ರೂಪಾಯಿ ಕುಸಿತ ಕಂಡಿದ್ದರೆ, ಶನಿವಾರ ಕೂಡ 1,000 ರೂಪಾಯಿ ಕುಸಿದಿದೆ. ಸದ್ಯ ಒಂದು ಕೆಜಿ ಬೆಳ್ಳಿ ಬೆಲೆ 97,000 ರೂಪಾಯಿಯಂತೆ ಮಾರಾಟವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+