ದೇಶದ ಈ ನಗರದಲ್ಲಿ ಮಾತ್ರ ಚಿನ್ನದ ಬೆಲೆ ಏರಿಕೆ; ಮೇ 24ರ ಬೆಲೆ ಎಷ್ಟೆಷ್ಟಿದೆ?
ನವದೆಹಲಿ, ಮೇ 24: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ವಹಿವಾಟು ಕುಸಿದಿರುವುದಾಗಿ ತಿಳಿದುಬಂದಿದೆ. ಚೆನ್ನೈ ನಗರದಲ್ಲಿ ಮಾತ್ರ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ.
ಏಪ್ರಿಲ್ ತಿಂಗಳಿನಲ್ಲಿ ಸತತ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಮೇ ತಿಂಗಳ ಮೊದಲ ವಾರಗಳಲ್ಲಿಯೂ ಏರಿಕೆ ಹಾದಿ ಹಿಡಿದಿತ್ತು. ಮೇ ಮಧ್ಯದ ನಂತರ ಏರಿಕೆ ಕಾಣದೇ ಸ್ಥಿರತೆ ಕಾಯ್ದುಕೊಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.03%ರಷ್ಟು ಏರಿಕೆಯಾಗಿ 1,881.12 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.36ಷ್ಟು ಆಗಿ 27.66 ಯುಎಸ್ ಡಾಲರ್ ಆಗಿದೆ.
ಸದ್ಯಕ್ಕೆ ನವದೆಹಲಿಯಲ್ಲಿ 22 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 46,930 ರೂ ಇದ್ದು, 24 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 50,830 ರೂ ಆಗಿದೆ. ಬೆಂಗಳೂರು, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಮೇ 24ರಂದು ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 24: 45,600 ರೂ 49,750
ಮೇ 23: 45,600 ರೂ 49,750
ಮೇ 22: 45,600 ರೂ 49,750
ಮೇ 21: 45,600 ರೂ 49,750 ರೂ
ಮೇ 20: 45,600 ರೂ (150 ರೂ ಏರಿಕೆ) 49,750 ರೂ (160 ರೂ ಏರಿಕೆ)
ಮೇ 19: 45,450 ರೂ 49,590 ರೂ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 24: 46,930 ರೂ 50,830 ರೂ
ಮೇ 23: 46,930 ರೂ 50,830 ರೂ
ಮೇ 22: 46,930 ರೂ 50,830 ರೂ
ಮೇ 21: 46,930 ರೂ 50,830 ರೂ
ಮೇ 20: 46,930 ರೂ (110 ರೂ ಏರಿಕೆ) 50,830 ರೂ (110 ರೂ ಏರಿಕೆ)
ಮೇ 19: 46,820 ರೂ (10 ರೂ ಏರಿಕೆ) 50,720 ರೂ (10 ರೂ ಏರಿಕೆ)

ಚೆನ್ನೈನಲ್ಲಿ ಮಾತ್ರ ಚಿನ್ನದ ಬೆಲೆ ಏರಿಕೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 24: 45,940 ರೂ (30 ರೂ ಏರಿಕೆ) 50,090 ರೂ (30 ರೂ ಏರಿಕೆ)
ಮೇ 23: 45,910 ರೂ (10 ರೂ ಏರಿಕೆ) 50,060 ರೂ (10 ರೂ ಏರಿಕೆ)
ಮೇ 22: 45,900 ರೂ (50 ರೂ ಏರಿಕೆ) 50,050 ರೂ (30 ರೂ ಏರಿಕೆ)
ಮೇ 21: 45,850 ರೂ (130 ರೂ ಇಳಿಕೆ) 50,020 ರೂ (140 ರೂ ಇಳಿಕೆ)
ಮೇ 20: 45,980 ರೂ (210 ರೂ ಏರಿಕೆ) 50,160 ರೂ (240 ರೂ ಏರಿಕೆ)
ಮೇ 19: 45,770 ರೂ (20 ರೂ ಏರಿಕೆ) 49,920 ರೂ (20 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 24: 46,000 ರೂ 47,000 ರೂ
ಮೇ 23: 46,000 ರೂ 47,000 ರೂ
ಮೇ 22: 46,000 ರೂ 47,000 ರೂ
ಮೇ 21: 46,000 ರೂ 47,000 ರೂ
ಮೇ 20: 46,000 ರೂ (350 ರೂ ಏರಿಕೆ) 47,000 ರೂ (350 ರೂ ಏರಿಕೆ)
ಮೇ 19: 45,650 ರೂ (10 ರೂ ಏರಿಕೆ) 46,650 ರೂ (10 ರೂ ಏರಿಕೆ)












Click it and Unblock the Notifications