Gold Rate On Aug 28: ಡೊನಾಲ್ಡ್‌ ಟ್ರಂಪ್ ಹುಚ್ಚಾಟ: ಚಿನ್ನದ ಬೆಲೆ ದಿಢೀರ್ ಹೆಚ್ಚಳ! ಇಂದಿನ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ?

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹುಚ್ಚಾಟದಿಂದ ದೇಶದಾದ್ಯಂತ ವಿವಿಧ ವಸ್ತುಗಳ ಬೆಲೆ ದಿಢೀರ್ ಹೆಚ್ಚಳವಾಗಿದೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ನಡುವೆ ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಬರೋಬ್ಬರಿ ಶೇ. 25ರಷ್ಟು ಹಾಗೂ ಒಟ್ಟಾರೆ ಶೇ 50ರಷ್ಟು ಹೆಚ್ಚಳ ಮಾಡಿರುವುದು ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಜವಳಿ ಉದ್ಯಮಕ್ಕೆ ಶಾಕ್ ಕೊಟ್ಟಿದೆ. ಆಗಸ್ಟ್‌ 28ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯು ಭಾರೀ ಹೆಚ್ಚಳವಾಗಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆಯು ನಿರಂತರವಾಗಿ ಏರಿಕೆ ಆಗುತ್ತಿದ್ದು. ಆಭರಣ ಪ್ರಿಯರಿಗೆ ಶಾಕ್ ಎದುರಾಗಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಯಾಗಿತ್ತು. ಇದೀಗ ಮತ್ತೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಳವಾಗಿದೆ. ಕಳೆದ ಒಂದು ವಾರದಿಂದಲೂ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಳವಾಗುತ್ತಿದ್ದು. ಇದೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಚಿನ್ನ & ಬೆಳ್ಳಿಯ ಇನ್ನಷ್ಟು ಹೆಚ್ಚಳವಾಗುವ ಆತಂಕ ಶುರುವಾಗಿದೆ.

Gold Rate On Aug 28 Donald Trump s Shock Move Triggers Sudden Gold Price Hike Check Today s Gold amp amp Silver Rates

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 7,695 ರೂಪಾಯಿ ಇದೆ. 10 ಗ್ರಾಂಗೆ 76,950 ರೂಪಾಯಿ ಆಗಿದೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಆಗಸ್ಟ್‌ 28ರಂದು ಒಂದು ಗ್ರಾಂಗೆ 12 ರೂಪಾಯಿ ಹಾಗೂ 10 ಗ್ರಾಂಗೆ 120 ರೂಪಾಯಿ ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂ 9,405 ರೂಪಾಯಿ ಹಾಗೂ 10 ಗ್ರಾಂಗೆ 94,050 ರೂಪಾಯಿ ಆಗಿದೆ. ಆಗಸ್ಟ್‌ 27ಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 15 ರೂಪಾಯಿ ಹಾಗೂ 10 ಗ್ರಾಂಗೆ 150 ರೂಪಾಯಿ ಹೆಚ್ಚಳವಾದಂತೆ ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 10,260 ರೂಪಾಯಿ ಹಾಗೂ 10 ಗ್ರಾಂಗೆ 1,02,600 ರೂಪಾಯಿ ಆಗಿದೆ. ಪ್ರತಿ ಗ್ರಾಂಗೆ 16 ರೂಪಾಯಿ ಹಾಗೂ 10 ಗ್ರಾಂಗೆ 160 ರೂಪಾಯಿ ಹೆಚ್ಚಳವಾಗಿದೆ.

ಬೆಳ್ಳಿ ಬೆಲೆ: ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೆಳ್ಳಿ ಬೆಲೆಯು ಬುಧವಾರಕ್ಕೆ ಹೋಲಿಕೆ ಮಾಡಿದರೆ ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 120 ರೂಪಾಯಿ ಹಾಗೂ ಒಂದು ಕೆ.ಜಿ 1,20,000 ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+