ದಿಢೀರ್ ಏರಿಕೆಯಾದ ಚಿನ್ನ, ಬೆಳ್ಳಿ ಬೆಲೆ; ಮೇ 26ರಂದು ಎಷ್ಟು ಏರಿಕೆಯಾಗಿದೆ?
ನವದೆಹಲಿ, ಮೇ 26: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಆರು ದಿನಗಳಿಂದಲೂ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಮೇ 26ರಂದು ಮತ್ತೆ ಏರಿಕೆ ಕಂಡಿದೆ. ಚೆನ್ನೈ ಹೊರತುಪಡಿಸಿ ಉಳಿದ ನಗರಗಳಲ್ಲಿ ಆರು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಇದೀಗ ಬುಧವಾರ ಮತ್ತೆ ಬೆಲೆ ಏರುಗತಿಯಲ್ಲಿದೆ.
ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಆಗಿರುವ ಕಾರಣ ಹಳದಿ ಲೋಹದ ವಹಿವಾಟು ಕಡಿಮೆಯಾಗಿರುವುದು ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಾರಣ ಎನ್ನಲಾಗಿತ್ತು. ಬೆಳ್ಳಿ ಬೆಲೆಯೂ ಕೆಲವು ದಿನಗಳಿಂದ ತಗ್ಗಿದ್ದು, ಇದೀಗ ಮತ್ತೆ ಏರಿಕೆಯಾಗಿದೆ. ಕೆ.ಜಿಗೆ ಒಂದೂವರೆ ಸಾವಿರ ರೂಪಾಯಿ ಬೆಲೆ ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.42%ರಷ್ಟು ಏರಿಕೆಯಾಗಿ 1,906.26 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಬೆಲೆ ಶೇ 0.64% ನಷ್ಟು ಏರಿಕೆಯಾಗಿ ಕೆ.ಜಿಗೆ 72,700 ರೂ ಆಗಿದೆ. ಬೆಂಗಳೂರು, ನವದೆಹಲಿ, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಮೇ 26ರಂದು ಹತ್ತು ಗ್ರಾಂ ಚಿನ್ನದ ಬೆಲೆ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 26: 46,100 ರೂ (500 ರೂ ಏರಿಕೆ) 50,300 ರೂ (540 ರೂ ಏರಿಕೆ)
ಮೇ 25: 45,600 ರೂ 49,760 ರೂ (10 ರೂ ಏರಿಕೆ)
ಮೇ 24: 45,600 ರೂ 49,750
ಮೇ 23: 45,600 ರೂ 49,750
ಮೇ 22: 45,600 ರೂ 49,750
ಮೇ 21: 45,600 ರೂ 49,750 ರೂ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 26: 47,100 ರೂ (170 ರೂ ಏರಿಕೆ) 51,000 ರೂ (170 ರೂ ಏರಿಕೆ)
ಮೇ 25: 46,930 ರೂ 50,830 ರೂ
ಮೇ 24: 46,930 ರೂ 50,830 ರೂ
ಮೇ 23: 46,930 ರೂ 50,830 ರೂ
ಮೇ 22: 46,930 ರೂ 50,830 ರೂ
ಮೇ 21: 46,930 ರೂ 50,830 ರೂ

ಚೆನ್ನೈನಲ್ಲಿ ಚಿನ್ನದ ಬೆಲೆ 500 ರೂ ಏರಿಕೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 26: 46,500 ರೂ (550 ರೂ ಏರಿಕೆ) 50,700 ರೂ (600 ರೂ ಏರಿಕೆ)
ಮೇ 25: 45,950 ರೂ (10 ರೂ ಏರಿಕೆ) 50,100 ರೂ (10 ರೂ ಏರಿಕೆ)
ಮೇ 24: 45,940 ರೂ (30 ರೂ ಏರಿಕೆ) 50,090 ರೂ (30 ರೂ ಏರಿಕೆ)
ಮೇ 23: 45,910 ರೂ (10 ರೂ ಏರಿಕೆ) 50,060 ರೂ (10 ರೂ ಏರಿಕೆ)
ಮೇ 22: 45,900 ರೂ (50 ರೂ ಏರಿಕೆ) 50,050 ರೂ (30 ರೂ ಏರಿಕೆ)
ಮೇ 21: 45,850 ರೂ (130 ರೂ ಇಳಿಕೆ) 50,020 ರೂ (140 ರೂ ಇಳಿಕೆ)

ಮುಂಬೈ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 26: 46,800 ರೂ (800 ರೂ ಏರಿಕೆ) ರೂ 47,800 ರೂ (800 ರೂ ಏರಿಕೆ)
ಮೇ 25: 46,000 ರೂ 47,000 ರೂ
ಮೇ 24: 46,000 ರೂ 47,000 ರೂ
ಮೇ 23: 46,000 ರೂ 47,000 ರೂ
ಮೇ 22: 46,000 ರೂ 47,000 ರೂ
ಮೇ 21: 46,000 ರೂ 47,000 ರೂ












Click it and Unblock the Notifications