Gold Price on May 23: ಚಿನ್ನ ಪ್ರಿಯರಿಗೆ ಶುಭ ಶುಕ್ರವಾರ: ಎಷ್ಟಿದೆ ಇಂದಿನ ಚಿನ್ನ & ಬೆಳ್ಳಿ ಬೆಲೆ ?

Gold Rate May 23: ಚಿನ್ನ ಪ್ರಿಯರಿಗೆ ಇಂದಿನ ಚಿನ್ನದ ಬೆಲೆಯು ಭರ್ಜರಿ ಗುಡ್‌ನ್ಯೂಸ್‌ ತಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆಯು ಭಾರೀ ಏರಿಕೆ ಕಂಡು ಬರುತ್ತಿದೆ. ಆದರೆ ಚಿನ್ನ ಪ್ರಿಯರಿಗೆ ಶುಕ್ರವಾರ ಮೇ 23 ಶುಭ ಶುಕ್ರವಾರವಾಗಿದ್ದು. ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡು ಬಂದಿದೆ. ಕಳೆದ ಒಂದು ವಾರದಿಂದಲೂ ಚಿನ್ನದ ಬೆಲೆಯು ಏರಿಕೆಯ ಹಾದಿಯಲ್ಲೇ ಇತ್ತು. ಇದೀಗ ಭರ್ಜರಿ ಇಳಿಕೆ ಕಂಡಿದ್ದು ಚಿನ್ನದ ಪ್ರಿಯರು ಸಂತೋಷಪಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗಿದ್ದನ್ನು ನೋಡಿದರೆ ಜೂನ್‌ ಮೊದಲ ವಾರದಲ್ಲಿ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಮುಟ್ಟಲಿದೆ ಎನ್ನುವಂತಿತ್ತು. ಆದರೆ, ಆ ಆತಂಕ ಸದ್ಯದ ಮಟ್ಟಿಗೆ ದೂರವಾಗಿದೆ. ಶುಕ್ರವಾರ ಮೇ 23ರಂದು ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ನಿಖರವಾದ ಮಾಹಿತಿ ಇಲ್ಲಿದೆ.

ಬಂಗಾರ ಪ್ರಿಯರಿಗೆ ಇಂದು ಲಕ್ಕಿ ಫ್ರೈಡೆ ಅಂತಲೇ ಹೇಳಬಹುದು. ಯಾಕೆಂದರೆ ಮೇ ಮೂರನೇ ವಾರ ಪೂರ್ತಿ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲೇ ಇತ್ತು. ಚಿನ್ನವಷ್ಟೇ ಅಲ್ಲ, ಚಿನ್ನದೊಂದಿಗೆ ಬೆಳ್ಳಿಯ ಬೆಲೆಯು ಏರಿಕೆ ಕಂಡಿತ್ತು. ಬರೋಬ್ಬರಿ ಮೂರು ಸಾವಿರ ರೂಪಾಯಿ (ಕೆಜಿಗೆ) ಬೆಳ್ಳಿ ಬೆಲೆ ಹೆಚ್ಚಳವಾಗಿತ್ತು. ಚಿನ್ನದ ಬೆಲೆ 18 ಕ್ಯಾರೆಟ್‌, 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆಯು ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲೂ ಅಷ್ಟೊಂದು ವ್ಯತ್ಯಾಸವಾಗಿಲ್ಲ. ಹಾಗಾದರೆ ಮೇ 23ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಅಂತ ನೋಡೋಣ.

Gold rate in Bengaluru on May 23 great good news for gold lovers

18 ಕ್ಯಾರೆಟ್‌ ಚಿನ್ನದ ಬೆಲೆ: ಮೇ 23ರಂದು 18 ಕ್ಯಾರೆಟ್‌ ಚಿನ್ನದ 1 ಗ್ರಾಂನ ಬೆಲೆಯು 7,315 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 73,150 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ, ಚಿನ್ನದ ಬೆಲೆಯು 100 ಗ್ರಾಂಗೆ ಬರೋಬ್ಬರಿ 2,900 ರೂಪಾಯಿ ಕಡಿಮೆಯಾಗಿದೆ.

22 ಕ್ಯಾರೆಟ್‌ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಶುಕ್ರವಾರ / ಮೇ 23ಕ್ಕೆ ಭರ್ಜರಿ ಇಳಿಕೆ ಕಂಡಿದೆ. ಇಂದು 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 8,940 ರೂಪಾಯಿ ಆಗಿದೆ. 10 ಗ್ರಾಂಗೆ 89,400 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ, 10 ಗ್ರಾಂಗೆ 350 ರೂಪಾಯಿ ಇಳಿಕೆ ಕಂಡಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟಿದೆ: 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ. 1 ಗ್ರಾಂನ ಚಿನ್ನದ ಬೆಲೆಯು 9,753 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 97,530 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ ಎಷ್ಟಿದೆ ?
ಇನ್ನು ಬೆಳ್ಳಿ ಬೆಲೆಯಲ್ಲೂ ಅಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸ ಕಂಡು ಬಂದಿಲ್ಲ. ಬೆಳ್ಳಿ ಬೆಲೆಯು ಮೇ 23ರಂದು ಪ್ರತಿ ಗ್ರಾಂಗೆ 100 ರೂಪಾಯಿ ಆಗಿದ್ದರೆ, ನೆನ್ನೆಗಿಂತ 1 ರೂಪಾಯಿ ಇಳಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 1 ಲಕ್ಷ ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+