Gold Rate: ಒಂದೇ ದಿನ 9,800 ರೂಪಾಯಿ ಕುಸಿದ ಚಿನ್ನದ ಬೆಲೆ; ಬೆಳ್ಳಿ ಬೆಲೆ ಎಷ್ಟಿದೆ?

ಸತತವಾಗಿ ಏರಿಕೆ ಕಾಣುವ ಮೂಲಕ ಚಿನ್ನಾಭರಣ ಪ್ರಿಯರ ಜೇಬು ಭಾರವಾಗಿಸಿದ್ದ ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಕುಸಿತ ಕಂಡಿದೆ. ಶನಿವಾರ ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ ಕಂಡಿದ್ದು ಚಿನ್ನಾಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಕಳೆದ ಕೆಲವು ದಿನದಿಂದ ಏರಿಕೆಯಾಗುತ್ತಲೇ ಇದ್ದ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಸನಿಹಕ್ಕೆ ಹೋಗುತ್ತಿದೆ. ಶುಕ್ರವಾರ ಮತ್ತು ಶನಿವಾರ ಎರಡೂ ದಿನ ಚಿನ್ನದ ಬೆಲೆ ಇಳಿಕೆಯಾಗಿದ್ದು ಹೂಡಿಕೆದಾರರು, ಚಿನ್ನಾಭರಣ ಪ್ರಿಯರಲ್ಲಿ ಸ್ವಲ್ಪ ನೆಮ್ಮದಿ ತಂದಿದೆ. ಶನಿವಾರ ಒಂದೇ ದಿನ 100 ಗ್ರಾಂ ಶುದ್ಧ ಚಿನ್ನದ ಬೆಲೆ 9800 ರೂಪಾಯಿ ಇಳಿಕೆಯಾಗಿದೆ.

Gold rate down 9800 rs on april 5th here the silver price details

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ನೀತಿಯಿಂದಾಗಿ ವಿಶ್ವದ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಆಭರಣ ವ್ಯಾಪಾರಿಗಳು ಮತ್ತು ಹೂಡಿಕೆದಾರರ ಖರೀದಿ ಹೆಚ್ಚಳ ಮತ್ತು ಜಾಗತಿಕವಾಗಿ ಚಿನ್ನದ ಮೇಲೆ ಹೂಡಿಕೆ ಹೆಚ್ಚಳದಿಂದ ಬೆಲೆ ಹೆಚ್ಚಳವಾಗುತ್ತಲೇ ಇದೆ.

24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 980 ರೂಪಾಯಿ ಇಳಿಕೆಯಾಗಿದ್ದು 90,660 ರೂಪಾಯಿಗೆ ತಲುಪಿದೆ. ಏಪ್ರಿಲ್ 4ರಂದು ಶುಕ್ರವಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1740 ರೂಪಾಯಿ ಇಳಿಕೆಯಾಗಿತ್ತು. ಎರಡೇ ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 2720 ರೂಪಾಯಿ ಇಳಿಕೆ ಕಂಡಿದೆ. ಷೇರು ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದ್ದರೂ ಚಿನ್ನದ ದರ ಮಾತ್ರ ಹೆಚ್ಚುತ್ತಲೇ ಇದೆ.

ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ ಶುಕ್ರವಾರ 9,164 ರೂಪಾಯಿ ಇದ್ದ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಶನಿವಾರ9,066 ರೂಪಾಯಿ ಆಗಿತ್ತು. ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 98 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂ ಶುದ್ಧ ಚಿನ್ನದ ಬೆಲೆ 980 ರೂಪಾಯಿ ಇಳಿಕೆಯಾಗಿ ₹90,660 ರಲ್ಲಿ ವಹಿವಾಟು ನಡೆಸಿದೆ.

ಶುಕ್ರವಾರ ₹8,400 ಇದ್ದ 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 90 ರೂಪಾಯಿ ಇಳಿಕೆ ಕಂಡು ಶನಿವಾರ 8,310 ರೂಪಾಯಿಗೆ ಮಾರಾಟವಾಗಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 900 ರೂಪಾಯಿ ಇಳಿಕೆಯಾಗಿದ್ದು 83,100 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ ಎಷ್ಟಿದೆ?

ಒಂದು ಕಡೆ ಚಿನ್ನದ ಬೆಲೆ ಇಳಿಕೆಯಾಗಿದ್ದರೆ ಮತ್ತೊಂದು ಕಡೆ ಬೆಳ್ಳಿ ಬೆಲೆ ಕೂಡ ಕುಸಿಯುತ್ತಿದೆ. ಶುಕ್ರವಾರ 99,000 ರೂಪಾಯಿ ಇದ್ದ ಒಂದು ಕೆ.ಜಿ ಬೆಳ್ಳಿ ಬೆಲೆ ಶನಿವಾರ 94,000 ರೂಪಾಯಿಗೆ ಕುಸಿತ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+