Gold Rate: 2700 ರೂಪಾಯಿ ಕಡಿಮೆಯಾದ ಚಿನ್ನದ ಬೆಲೆ: ಬೆಳ್ಳಿ ಬೆಲೆ ಕೂಡ ಕುಸಿತ
ಚಿನ್ನದ ಬೆಲೆ ಸತತವಾಗಿ ಇಳಿಕೆಯಾಗುತ್ತಲೇ ಇದೆ. ಗುರುವಾರ ಕೂಡ ಚಿನ್ನದ ಬೆಲೆ ಕುಸಿತ ಕಂಡಿದ್ದು, ಆಭರಣ ಪ್ರಿಯರ ಸಂತಸ ಹೆಚ್ಚಿಸಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಕೂಡ ಕಡಿಮೆಯಾಗಿದೆ.
ಗುರುವಾರ ಒಂದೇ ದಿನ 100 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 2700 ರೂಪಾಯಿ ಕಡಿಮೆಯಾಗಿದೆ. ಬುಧವಾರ 7,20,000 ರೂಪಾಯಿ ಇದ್ದ 100 ಗ್ರಾಂ ಶುದ್ಧ ಚಿನ್ನದ ಬೆಲೆ 2,700 ರೂಪಾಯಿ ಕುಸಿತ ಕಂಡಿದ್ದು, 7,17,300 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರತಿ ಗ್ರಾಂ ಚಿನ್ನದ ದರ 27 ರೂಪಾಯಿ ಕಡಿಮೆಯಾಗಿದೆ.

ಬುಧವಾರ 6,60,000 ಇದ್ದ 100 ಗ್ರಾಂ ಆಭರಣ ಚಿನ್ನದ (22 ಕ್ಯಾರೆಟ್)
ಬೆಲೆ 2,500 ರೂಪಾಯಿ ಕುಸಿತ ಕಂಡಿದ್ದು, 6,57,500 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 25 ರೂಪಾಯಿ ಕಡಿಮೆಯಾಗಿದೆ.
ಬೆಳ್ಳಿ ಬೆಲೆ ಕೂಡ ಕುಸಿತ
ಇನ್ನು ಗುರುವಾರ ಬೆಳ್ಳಿ ಬೆಲೆಯಲ್ಲಿ ಕೂಡ ಭರ್ಜರಿ ಕುಸಿತ ಕಂಡಿದೆ. ಅಂತೂ ಇಂತೂ ಬೆಳ್ಳಿ ಬೆಲೆ ಮತ್ತೆ 90,000 ರೂಪಾಯಿ ಒಳಗಡೆ ಮಾರಾಟವಾಗುತ್ತಿದೆ. ಬುಧವಾರ 90,950 ಇದ್ದ ಪ್ರತಿ ಕೆ.ಜಿ. ಬೆಳ್ಳಿ ಧಾರಣೆ 1,450 ರೂಪಾಯಿ ಕುಸಿದಿದ್ದು, 89,500 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಚಿನ್ನದ ಬೆಲೆ ಮತ್ತಷ್ಟು ಕುಸಿತ ಸಾಧ್ಯತೆ
ಬಂಗಾರದ ಬೆಲೆ ಕಳೆದ ಕೆಲವು ದಿನಗಳಿಂದ ಕುಸಿಯುತ್ತಲೇ ಇದೆ. ಆಭರಣ ಪ್ರಿಯರಿಗೆ ಇದು ಸಂತೋಷದ ವಿಷಯವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಚಿನ್ನದ ದರ ನಿರ್ಧಾರವಾಗುತ್ತದೆ. ಗುರುವಾರ ಚಿನ್ನದ ಬೆಲೆ ಕುಸಿದಿದ್ದು, ಶುಕ್ರವಾರ ಕೂಡ ಚಿನ್ನದ ಬೆಲೆ ಮತ್ತಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications