ಚಿನ್ನದ ಬೆಲೆ ಸತತ 3ನೇ ದಿನ ಇಳಿಕೆ: ಬೆಳ್ಳಿ ಬೆಲೆ ಕುಸಿತ
ನವದೆಹಲಿ, ನವೆಂಬರ್ 18: ಆಭರಣ ಪ್ರಿಯರಿಗೆ ಮುಂದಿನ ದಿನಗಳಲ್ಲಿ ಶುಭ ಸುದ್ದಿ ಹತ್ತಿರವಾದಂತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಕುಸಿಯಲಾರಂಭಿಸಿದ್ದು, ಸತತ ಮೂರನೇ ದಿನ ಇಳಿಕೆಗೊಂಡಿದೆ. ಇಂದು ಕೂಡ ಚಿನ್ನ-ಬೆಳ್ಳಿ ಬೆಲೆ ಕೆಳಮಟ್ಟದಲ್ಲಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು ಇಂದು 10 ಗ್ರಾಂಗೆ ಶೇ. 0.43ರಷ್ಟು ಕುಸಿದು 50,546 ರೂಪಾಯಿಗೆ ತಲುಪಿದೆ. ಈ ಮೂಲಕ ಮೂರನೇ ದಿನ ಇಳಿಕೆಯತ್ತ ಮುಖ ಮಾಡಿದೆ.
ಎಂಸಿಎಕ್ಸ್‌ನಲ್ಲಿನ ಬೆಳ್ಳಿ ಭವಿಷ್ಯವೂ ಪ್ರತಿ ಕೆಜಿಗೆ ಶೇ. 0.6ರಷ್ಟು ಇಳಿದು, 62,875 ರೂಪಾಯಿಗೆ ತಲುಪಿದೆ. ಕಳೆದ ವಾರ ಭಾರತದಲ್ಲಿ ಚಿನ್ನದ ಬೆಲೆಗಳು 10 ಗ್ರಾಂಗೆ 1200 ಕುಸಿತ ಕಂಡಿತು. ಏಕೆಂದರೆ ಕೋವಿಡ್ ಲಸಿಕೆ ಬಗ್ಗೆ ಆಶಾವಾದವು ಜಾಗತಿಕವಾಗಿ ಅಪಾಯದ ಭಾವನೆಯನ್ನು ತೆಗೆದುಹಾಕಿತು ಮತ್ತು ಹಳದಿ ಲೋಹದ ಮೇಲೆ ಒತ್ತಡ ಹೇರಿತು. ಆಗಸ್ಟ್‌ನ ಗರಿಷ್ಠ, 56,200 ಕ್ಕೆ ಹೋಲಿಸಿದರೆ, ಚಿನ್ನದ ಬೆಲೆ ಈಗ ಸುಮಾರು 6,000 ರೂಪಾಯಿ ಕಡಿಮೆಯಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಕೊರೊನಾವೈರಸ್ ಪ್ರಕರಣಗಳು ವಿಶ್ವದ ಅನೇಕ ಭಾಗಗಳಲ್ಲಿ ಹೆಚ್ಚುತ್ತಿರುವಾಗಲೂ ಚಿನ್ನದ ದರಗಳು ಇಂದು ಕಡಿಮೆಯಾಗಿದೆ. ಚಿನ್ನ ಒಂದು ಔನ್ಸ್‌ಗೆ ಶೇ. 0.2ರಷ್ಟು ಕುಸಿದು 1,876.85 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿ ಔನ್ಸ್‌ಗೆ 24.47 ಡಾಲರ್‌ರಷ್ಟಿದ್ದರೆ, ಪ್ಲಾಟಿನಂ ಸ್ಥಿರವಾಗಿ 925.60 ಡಾಲರ್‌ನಷ್ಟಿತ್ತು.












Click it and Unblock the Notifications