ಸತತ ಎರಡು ದಿನಗಳಿಂದ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ

ನವದೆಹಲಿ, ಡಿಸೆಂಬರ್ 27: ಚಿನ್ನ, ಬೆಳ್ಳಿ ಖರೀದಿ ಮಾಡುವವರಿಗೆ ಇದು ಸಕಾಲವಲ್ಲ. ಸತತವಾಗಿ ಎರಡು ದಿನಗಳಿಂದ ಸ್ಥಳೀಯ ಆಭರಣಗಾರರಿಂದ ಬೇಡಿಕೆ ಹೆಚ್ಚುತ್ತಿದೆ.

ಹೀಗಾಗಿ, ಬುಧವಾರ ಕೂಡ ಚಿನ್ನದ ಬೆಲೆ ಹೆಚ್ಚಾಗಿತ್ತು. ಒಟ್ಟಾರೆ, ಮೂರು ದಿನಗಳಲ್ಲಿ ಚಿನ್ನದ ಬೆಲೆ 400 ರೂಪಾಯಿ ಏರಿಕೆ ಕಂಡಿದ್ದು, ಇನ್ನಷ್ಟು ಏರಿಕೆಯ ಸೂಚನೆ ಸಿಕ್ಕಿದೆ.

ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರ ಇಲ್ಲಿ ಪಡೆಯಿರಿ

ದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಬುಧವಾರದಂದು ಚಿನ್ನದ ಬೆಲೆ 100 ರೂಪಾಯಿ ಏರಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ 32,500 ರೂಪಾಯಿಯಾಗಿದೆ. ಮಂಗಳವಾರದಂದು ಬಂಗಾರದ ಬೆಲೆ 125 ರೂಪಾಯಿ ಹೆಚ್ಚಳವಾಗಿತ್ತು. ಇನ್ನು ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ.

Gold prices rise sharply, silver rates jump for consecutive 2nd day

ಬೆಳ್ಳಿ ಬೆಲೆ ಬುಧವಾರದಂದು 125 ರೂಪಾಯಿ ಹೆಚ್ಚಾಗಿದ್ದು, ಕೆ.ಜಿ ಬೆಳ್ಳಿ ಬೆಲೆ 38,125 ರೂಪಾಯಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡಾ 0.31 ರಷ್ಟು ಹೆಚ್ಚಳ ಕಂಡು ಪ್ರತಿ ಔನ್ಸಿಗೆ 1,273.90 ಡಾಲರ್ ಆಗಿದೆ. ಬೆಳ್ಳಿ ಬೆಲೆ ಶೇಕಡಾ 0.68 ಹೆಚ್ಚಳ ಕಂಡು 14.94 ಡಾಲರ್ ಪ್ರತಿ ಔನ್ಸ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 29,500ರು ಹಾಗೂ 24 ಕ್ಯಾರೆಟ್ ನ 10 ಗ್ರಾಂನ ಬೆಲೆ 31,450 ರು ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+