ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ, ಒಂದೇ ದಿನ 930 ರು ಹೆಚ್ಚಳ

ನವದೆಹಲಿ, ಜುಲೈ 11: ಕೆಲ ದಿನಗಳ ಹಿಂದೆ ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ ಮತ್ತೆ ಮೇಲ್ಮುಖವಾಗಿ ಚಲಿಸುತ್ತಿದೆ. ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾಗಿದ್ದು, ಜಾಗತಿಕ ಟ್ರೆಂಡ್ ಗೆ ತಕ್ಕಂತೆ ಚಿನ್ನದ ದರದಲ್ಲಿ ಗುರುವಾರ(ಜುಲೈ 11)ದಂದು ದಿಢೀರ್ ಏರಿಕೆ ಕಂಡಿದೆ.

ಬಂಗಾರದ ಬೆಲೆಯಲ್ಲಿ 930 ರು ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ 300ರು ಹೆಚ್ಚಳವಾಗಿದೆ. ಯುಎಸ್ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೊಮಿ ಪೊವೆಲ್ ಅವರು ಬೆಲೆ ಕಡಿತದ ಸುಳುವು ನೀಡಿದ್ದರಿಂದ ಹೂಡಿಕೆದಾರರು ಹಳದಿ ಲೋಹದತ್ತ ಮುಖ ಮಾಡಿದ್ದಾರೆ.

ಯುಎಸ್ ಹಾಗೂ ಚೀನಾ ನಡುವಿನ ಕಿತ್ತಾಟ ಈಗ ತಣ್ಣಗಾಗಿದ್ದು, ಜಾಗತಿಕ ಆರ್ಥಿಕ ಪರಿಸ್ಥಿತಿ ಸುಧಾರಿಸಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜಿಯೋಜಿತ್ ಸರ್ವೀಸಸ್ ನ ಮುಖ್ಯಸ್ಥ ಹರೀಶ್ ಹೇಳಿದ್ದಾರೆ.

Gold Prices Jump By 930 Rupees On Strong Global Cues

ಜಾಗತಿಕವಾಗಿ ನ್ಯೂಯಾರ್ಕಿನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,420.80 ಯುಎಸ್ ಡಾಲರ್ ನಂತೆ ಹಾಗೂ ಬೆಳ್ಳಿ ಬೆಲೆ ಪ್ರತಿ ಔನ್ಸಿಗೆ 15.24 ಯುಎಸ್ ಡಾಲರ್ ನಂತೆ ವ್ಯವಹಾರ ಕಂಡಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿಯಂತೆ ಶೇ99.9 ಪರಿಶುದ್ಧ ಚಿನ್ನ ಹಾಗೂ ಶೇ 99.5 ಪರಿಶುದ್ಧ ಚಿನ್ನದ ಬೆಲೆ 930 ರು ಏರಿಕೆ ಕಂಡು, ಕ್ರಮವಾಗಿ 35,800 ಪ್ರತಿ 10 ಗ್ರಾಂ ಹಾಗೂ 35,630 ರು ಪ್ರತಿ 10 ಗ್ರಾಂನಂತೆ ದೆಹಲಿ ಚಿನಿವಾರ ಪೇಟೆಯಲ್ಲಿ ವ್ಯಾಪಾರ ಕಂಡಿದೆ. ಸ್ಥಳೀಯ ಆಭರಣಗಾರರಿಂದಲೂ ಬೇಡಿಕೆ ಹೆಚ್ಚಳವಾಗಿದ್ದರಿಂದ ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ.

ಸವರನ್ ಚಿನ್ನ 100 ರು ಏರಿಕೆ ಕಂಡು 8ಗ್ರಾಂಗೆ 27,400 ರು ನಂತೆ ಮಾರಾಟವಾಗುತ್ತಿದೆ. ಬೆಳ್ಳಿ ಬೆಲೆ 300 ರು ಏರಿಕೆ ಕಂಡು ಪ್ರತಿ 1 ಕೆಜಿಗೆ 39,200 ರುಗೇರಿದೆ. ಆದರೆ, ಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಕಂಡು ಬಂದಿಲ್ಲವಾದ್ದರಿಂದ 100 ಕ್ಕೆ 81,000 ರು ಖರೀದಿಗೆ ಹಾಗೂ 82,000ರು ಮಾರಾಟದ ಬೆಲೆ ಪಡೆದುಕೊಂಡಿದೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+