ಚಿನ್ನದ ಬೆಲೆಯ ದಾಖಲೆಯ ಓಟ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ

ನವದೆಹಲಿ, ಆಗಸ್ಟ್ 04: ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನವು ತನ್ನ ದಾಖಲೆಯ ಓಟವನ್ನು ಮುಂದುವರೆಸಿದೆ, ಇಂದು ಬೆಲೆಗಳು ಮತ್ತೊಂದು ಗರಿಷ್ಠ ಮಟ್ಟವನ್ನು ಮುಟ್ಟಿದೆ. ಎಂಸಿಎಕ್ಸ್‌ನಲ್ಲಿ ಅಕ್ಟೋಬರ್ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇ. 0.2ರಷ್ಟು ಏರಿಕೆಯಾಗಿ, 53,865 ರೂಪಾಯಿಗೆ ತಲುಪಿದೆ.

Recommended Video

      DK Shivakumar : ಫೀಲ್ಡಿಗಿಳಿದು ಗೆದ್ದರಷ್ಟೇ ಪದಾಧಿಕಾರಿ ಹುದ್ದೆ | Oneindia Kannada

      ಎಂಸಿಎಕ್ಸ್‌ನಲ್ಲಿನ ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 0.18ರಷ್ಟು ಹೆಚ್ಚಾಗಿ 65,865 ರೂಪಾಯಿಗೆ ತಲುಪಿದೆ. ಹಿಂದಿನ ಅಧಿವೇಶನದಲ್ಲಿ, ಚಿನ್ನದ ಬೆಲೆಗಳು 10 ಗ್ರಾಂಗೆ ಶೇ. 0.5 ಅಥವಾ 267 ರೂಪಾಯಿ ಏರಿಕೆಯಾಗಿದ್ದರೆ, ಬೆಳ್ಳಿ ಪ್ರತಿ ಕೆ.ಜಿ.ಗೆ ಶೇ. 1.2ರಷ್ಟು ಅಥವಾ 800 ರೂಪಾಯಿ ಏರಿಕೆಯಾಗಿದೆ. ಹಿಂದಿನ ಅಧಿವೇಶನದಲ್ಲಿ ಚಿನ್ನವು ಪ್ರತಿ 10 ಗ್ರಾಂಗೆ 53,845 ರೂಪಾಯಿಗೆ ತಲುಪಿದೆ.

      ಜಾಗತಿಕ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನವು ಔನ್ಸ್‌ಗೆ 1,976.36 ಡಾಲರ್‌ನಂತೆ ಸ್ಥಿರವಾಗಿದೆ, ಹಿಂದಿನ ಅಧಿವೇಶನದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಂದ ಜಾಗತಿಕ ಆರ್ಥಿಕತೆಗೆ ಉಂಟಾಗುವ ಪರಿಣಾಮಗಳು ಅಮೆರಿಕಾ ಡಾಲರ್‌ನ ಮರುಕಳಿಸುವಿಕೆಯ ಒತ್ತಡವನ್ನು ಸರಿದೂಗಿಸುತ್ತವೆ.

      Gold Prices Hit Another High In Indian Markets

      ಜಾಗತಿಕ ಮಟ್ಟದಲ್ಲಿ, ಭಾರತದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮೊರೆ ಹೋಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+