Gold Rate: ಚಿನ್ನದ ಬೆಲೆ ಈ ವಾರ ಪೂರ್ತಿ ಇಳಿಕೆ: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್!
Gold Rate: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್ ಬಂದಿದೆ. ಕಳೆದ ಒಂದು ವಾರದಿಂದಲೂ ಬಹುತೇಕ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಜೂನ್ ಕೊನೆಯ ವಾರದಲ್ಲೂ ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಚಿನ್ನದ ಬೆಲೆ ಇಂದೂ ಸಹ ಕಡಿಮೆಯಾಗಿದೆ. ಮೇ ತಿಂಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಇದೀಗ ಜೂನ್ ಅಂತ್ಯದ ವೇಳೆಗೆ ಚಿನ್ನದ ಬೆಲೆ ಕಡಿಮೆಯಾಗಿದೆ. ಬೆಳ್ಳಿ ಬೆಲೆ ಸಹ ಇಳಿಕೆ ಆಗಿದೆ. ದೇಶದಲ್ಲಿ ವಿವಿಧ ಕಾರಣಗಳಿಗೆ ಚಿನ್ನದ ಬೆಲೆಯು ಇಳಿಕೆಯಾಗುತ್ತಿದೆ. ಅದರಲ್ಲಿ ವಿಶ್ವದಾದ್ಯಂತ ಶಾಂತ ಪರಿಸ್ಥಿತಿ ಇರುವುದು ಹಾಗೂ ಚಿನ್ನದ ನಿಕ್ಷೇಪಗಳು ಪತ್ತೆ ಆಗುತ್ತಿರುವುದು ಸೇರಿದಂತೆ ಹಲವು ಕಾರಣಗಳು ಇವೆ.
ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ಗಡಿದಾಟಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಚಿನ್ನದ ಬೆಲೆಯು ಇಳಿಕೆಯ ಹಾದಿಯಲ್ಲಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಭಾರೀ ಇಳಿಕೆ ಆಗಬಹುದು ಎಂದೇ ಹೇಳಲಾಗುತ್ತಿದೆ. ಜೂನ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ನೋಡೋಣ.

ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದರಿಂದ 18, 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇಂದಿನ ಚಿನ್ನದ ಬೆಲೆಯು 24 ಕ್ಯಾರೆಟ್ 10 ಗ್ರಾಂಗೆ 97,420 ರೂಪಾಯಿ ಆಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 7,307 ರೂಪಾಯಿ ಆಗಿದೆ. ಇನ್ನು 10 ಗ್ರಾಂಗೆ 73,070 ರೂಪಾಯಿ ಆಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯು ಯಥಾಸ್ಥಿತಿ ಮುಂದುವರಿದಿದೆ. ಆದರೆ ಒಟ್ಟಾರೆ ವಾರದಲ್ಲಿ ಚಿನ್ನದ ಬೆಲೆಯು ಇಳಿಕೆ ಕಂಡಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಆಗುತ್ತಿದೆ. ಒಂದು ಗ್ರಾಂ ಚಿನ್ನದ ಬೆಲೆಯು 8,930 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 89,300 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಈ ವಾರ ಭಾರೀ ಇಳಿಕೆ ಕಂಡು ಬಂದಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಜೂನ್ 29ರಂದು 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 9,742 ರೂಪಾಯಿ ಆಗಿದೆ. 10 ಗ್ರಾಂಗೆ 97,420 ರೂಪಾಯಿ ಆಗಿದೆ.
ಬೆಳ್ಳಿ ಬೆಲೆ: ಇನ್ನು ಬೆಳ್ಳಿ ಬೆಲೆ ಸಹ ಇಳಿಕೆ ಆಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 107.80 ರೂಪಾಯಿ ಆಗಿದೆ. 10 ಗ್ರಾಂನ ಬೆಲೆಯು 1,07,800 ರೂಪಾಯಿ ತಲುಪಿದೆ.












Click it and Unblock the Notifications