Gold Prices: ಚಿನ್ನದ ದರ ಸತತ ಕುಸಿತ, ಬೆಂಗಳೂರಿನಲ್ಲಿ ಇಂದು 10ಗ್ರಾಂ ಚಿನ್ನದ ಬೆಲೆ ಸ್ವಲ್ಪ ಅಗ್ಗ
Gold Price Today: ಚಿನ್ನಾಭರಣ ಪ್ರಿಯರಿಗೆ ಶನಿವಾರವು ಶುಭ ಸುದ್ದಿ ಸಿಕ್ಕಂತಾಗಿದೆ. ಚಿನ್ನದ ಬೆಲೆಯಲ್ಲಿ ಸತತವಾಗಿ ಎರಡನೇ ದಿನವು ಇಳಿಕೆ ಆಗಿದೆ. ಬೆಳ್ಳಿ ದರವು ಸ್ಥಿರವಾಗಿದೆ. ಕಳೆದ ಎರಡು ವಾರಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಳಿತ ಮುಂದುವರಿದಿದೆ. ಇಂದು ಶನಿವಾರ (ಮೇ 23) 22 ಕ್ಯಾರಟ್ ಚಿನ್ನದ ದರ 14,580 ಮತ್ತು 24 ಕ್ಯಾರಟ್ ಚಿನ್ನದ ಬೆಲೆ 15,906 ರೂ. ಇದೆ. ಹಾಗಾದರೆ ಇಂದು ಇಳಿಕೆ ಆಗಿದ್ದೆಷ್ಟು, ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರಕ್ಕೆ ಎಷ್ಟಿದೆ ಬೆಲೆ?
ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಒಂದು ಗ್ರಾಂ ಚಿನ್ನವು 40 ರೂ ಕುಸಿತ ಕಂಡಿದ್ದು, 10 ಗ್ರಾಂಗೆ 400 ರೂಪಾಯಿ ಇಳಿಕೆ ಆಗುವ ಮೂಲಕ ಅದರ ಒಟ್ಟು ದರ 1,45,800 ರೂಪಾಯಿ ತಲುಪಿದೆ.

ಅದೇ ರೀತಿ 24ಕ್ಯಾರಟ್ ಒಂದು ಗ್ರಾಂ ಚಿನ್ನವು 43 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂಗೆ 430 ರೂಪಾಯಿ ಇಳಿಕೆ ಆಗುವ ಮೂಲಕ ಒಟ್ಟು ದರ 1,45,800 ರೂಪಾಯಿ ತಲುಪಿದೆ. 1,59,060 ರೂಪಾಯಿ ಮುಟ್ಟಿದೆ.
ಇನ್ನೂ 18 ಕ್ಯಾರಟ್ ಒಂದು ಗ್ರಾಂಗೆ 33 ರೂಪಾಯಿ, ಹತ್ತು ಗ್ರಾಂಗೆ 11929 ರೂ. ನಂತೆ ಇಳಿಕೆ ಆಗಿ ಹತ್ತು ಗ್ರಾಂ ಬೆಲೆ 1,19,290 ರೂಪಾಯಿಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಈ ಚಿನ್ನಾಭರಣದಲ್ಲಿ ಮತ್ತಷ್ಟು ಏರಿಳಿತ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ಇಂದು ಕೆಜಿ ಬೆಳ್ಳಿಗೆ ಎಷ್ಟಿದೆ?
ಬೆಳ್ಳಿ ದರವು ಮೇ 21ರಂದು 5000 ರೂಪಾಯಿ ಏರಿಕೆ ಆಗಿತ್ತು. ಬಿಟ್ಟರೆ ಕಳೆದ ಎರಡು ದಿನಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂದು ಒಂದು ಕೆಜಿ ಬೆಳ್ಳಿ ದರ 2,85,000 ರೂಪಾಯಿ ಇದೆ. ಜಾಗತಿಕ ಅನಿಶ್ಚಿತತೆ, ಡಾಲರ್ ಮೌಲ್ಯ ಕುಸಿತ, ಕೊಲ್ಲಿ ರಾಷ್ಟ್ರಗಳ ನಡುವಿನ ಯುದ್ಧ ಹೀಗೆ ಅನೇಕ ಕಾರಣಗಳಿಂದ ಚಿನ್ನ, ಬೆಳ್ಳಿ, ಇಂಧನ ಬೆಲೆಗಳಲ್ಲಿ ಹಾವು ಏಣಿ ಆಟ ಮುಂದುವರಿದಿದೆ.
ನಗರವಾರು ಇಂದಿನ ಬೆಲೆ ಮಾಹಿತಿ ಇಲ್ಲಿದೆ
22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆಯು ಬೆಂಗಳೂರಿನಲ್ಲಿ- 14,580 ರೂಪಾಯಿ, ಚೆನ್ನೈ-14,730 ರೂಪಾಯಿ, ಮುಂಬೈ- 14,580 ರೂಪಾಯಿ, ದೆಹಲಿ- 14,595 ರೂಪಾಯಿ, ಕೊಲ್ಕತ್ತಾ-14,580 ರೂಪಾಯಿ, ಹೈದರಾಬಾದ್-14,580 ರೂಪಾಯಿ, ಕೇರಳ -14,580 ರೂಪಾಯಿ ಮತ್ತು ಪುಣೆ- 14,580 ರೂಪಾಯಿ ಇದೆ.













Click it and Unblock the Notifications