ಆಭರಣ ತಯಾರಕರಿಂದ ಹೆಚ್ಚಿದ ಬೇಡಿಕೆ, ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ
ನವದೆಹಲಿ, ಜೂನ್ 12: ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಚಿನ್ನ, ಬೆಳ್ಳಿ ದರದಲ್ಲಿ ಬುಧವಾರ(ಜೂನ್ 12) ದಂದು ಏರಿಕೆ ಕಂಡು ಬಂದಿದೆ. ರಾಜಧಾನಿ ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 200 ರೂಪಾಯಿ ಏರಿಕೆಯಾಗಿದ್ದರೆ. ಬೆಳ್ಳಿ ಬೆಲೆ 330 ರೂಪಾಯಿ ಏರಿಕೆ ಕಂಡಿದೆ.
ಚಿನ್ನದ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆ, ಯುಎಸ್ ಹಾಗೂ ಚೀನಾ ನಡುವಿನ ತಿಕ್ಕಾಟ ಹಾಗೂ ಸ್ಥಳೀಯ ಆಭರಣ ತಯಾರಕರಲ್ಲಿ ಹೆಚ್ಚಿದ ಖರೀದಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
99.9% ಪರಿಶುದ್ಧ ಚಿನ್ನದ ಬೆಲೆಯಲ್ಲಿ ಬುಧವಾರದಂದು 200 ರೂಪಾಯಿ ಏರಿಕೆ ಕಂಡು ಪ್ರತಿ 10 ಗ್ರಾಂಗೆ 33,570 ರೂಪಾಯಿಯಾಗಿದೆ. 99.5% ಚಿನ್ನದ ಬೆಲೆ ಪ್ರತಿ 10ಗ್ರಾಂಗೆ 33,400 ರು ನಷ್ಟಿದೆ. ಬೆಳ್ಳಿ ಬೆಲೆ 330 ರೂಪಾಯಿ ಏರಿಕೆ ಕಂಡು ಒಂದು ಕೆ.ಜಿಗೆ 37,890 ರೂಪಾಯಿಯಾಗಿದೆ.
ಜಾಗತಿಕವಾಗಿ ಚಿನ್ನದ ಬೆಲೆ ಮೇಲ್ಮುಖವಾಗಿದ್ದು, ನ್ಯೂಯಾರ್ಕ್ ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,337 ಡಾಲರ್ ನಷ್ಟಿದೆ. ಬೆಳ್ಳಿ ಬೆಲೆ 14.89 ಡಾಲರ್ ಪ್ರತಿ ಔನ್ಸ್ ಆಗಿದೆ.
ಸವರನ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ, 8 ಗ್ರಾಂಗೆ 26,700ರು ನಷ್ಟಿದೆ. ಮಂಗಳವಾರದಂದು ಚಿನ್ನದ ಬೆಲೆ 10 ಗ್ರಾಂಗೆ 33370 ರು ನಷ್ಟಿತ್ತು. ಬೆಳ್ಳಿ ನಾಣ್ಯಗಳು 100ಕ್ಕೆ 80000ರು ಖರೀದಿಗೆ ಹಾಗೂ 81000 ರು ಮಾರಾಟಕ್ಕೆ ದರ ಪಡೆದುಕೊಂಡಿವೆ. (ಪಿಟಿಐ)

ಕಳೆದ 3 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ
ಕಳೆದ 3 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 12 : 30,600 (22 ಕ್ಯಾರೆಟ್), 33,330 (24 ಕ್ಯಾರೆಟ್)
ಜೂನ್ 11: 30,500 ಹಾಗೂ 33,230
ಜೂನ್ 10: 30,500 ಹಾಗೂ 33,230
ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 12 : 39,860
ಜೂನ್ 11: 39,850
ಜೂನ್ 10: 39,860
***

ಕಳೆದ 3 ದಿನಗಳಲ್ಲಿ ದೆಹಲಿ ಚಿನ್ನ ಬೆಳ್ಳಿ ದರ
ಕಳೆದ 3 ದಿನಗಳಲ್ಲಿ ದೆಹಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 12 : 31,800 (22 ಕ್ಯಾರೆಟ್), 32,920 (24 ಕ್ಯಾರೆಟ್)
ಜೂನ್ 11: 31,800 ಹಾಗೂ 32,920
ಜೂನ್ 10: 31,800 ಹಾಗೂ 32,920
ಜೂನ್ 8: 32,100 ಹಾಗೂ 33,220
ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 12 : 39,860
ಜೂನ್ 11: 39,850
ಜೂನ್ 10: 39,860
***

ಕಳೆದ 3 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ
ಕಳೆದ 3 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 12 : 31,160 (22 ಕ್ಯಾರೆಟ್), 33,060 (24 ಕ್ಯಾರೆಟ್)
ಜೂನ್ 11: 31,100 ಹಾಗೂ 33,000
ಜೂನ್ 10: 31,110 ಹಾಗೂ 33,930
ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 12 : 39,860
ಜೂನ್ 11: 39,850
ಜೂನ್ 10: 39,860
***

ಕಳೆದ 3 ದಿನಗಳಲ್ಲಿ ಮುಂಬೈನಲ್ಲಿ ಚಿನ್ನ ಬೆಳ್ಳಿ ದರ
ಕಳೆದ 3 ದಿನಗಳಲ್ಲಿ ಮುಂಬೈನಲ್ಲಿ ಚಿನ್ನ ಬೆಳ್ಳಿ ದರ
ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 12 : 32,150 (22 ಕ್ಯಾರೆಟ್), 33,150 (24 ಕ್ಯಾರೆಟ್)
ಜೂನ್ 11: 31,950 ಹಾಗೂ 32,950
ಜೂನ್ 10: 32,150 ಹಾಗೂ 33,150
ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 12 : 39,860
ಜೂನ್ 11: 39,850
ಜೂನ್ 10: 39,860
***












Click it and Unblock the Notifications