Gold Price Today:ಚಿನ್ನದ ಬೆಲೆ ಇಂದು ಮತ್ತೆ ಕುಸಿತ! ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ಇಲ್ಲಿದೆ

Gold Price: ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ನೆನ್ನೆ ಕೊಂಚ ಏರಿಕೆ ಆಗಿದ್ದ ಬಂಗಾರದ ದರ ಇಂದು ಗುರುವಾರ (ಸೆಪ್ಟೆಂಬರ್ 17) ಮತ್ತೆ ಇಳಿಕೆ ಆಗಿದೆ. ಬೆಳ್ಳಿ ಬೆಲೆಯು ಯಥಾಸ್ಥಿತಿಯಲ್ಲಿ ಮುಂದುವರಿದಿದೆ. 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನದ ನಗರವಾರು ಮಾಹಿತಿ ಮುಂದಿದೆ.

ಜಾಗತಿಕ ಬದಲಾವಣೆ, ಬೆಲೆ ಏರಿಕೆ, ಹಣದುಬ್ಬರದ ಇಂದಿನ ಸನ್ನಿವೇಶದಲ್ಲಿ ಬಂಗಾರ ಬೆಳ್ಳಿ ದರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದ್ದು, ಹಾವು ಏಣಿ ಆಟ ಮುಂದುವರಿದಿದೆ. ನಿರಂತರವಾಗಿ ಇಳಿಕೆಯತ್ತ ಸಾಗಿದ್ದ ಬಂಗಾರವು ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತಿದೆ. ನೆನ್ನೆ ಒಂದು ಗ್ರಾಂ ಚಿನ್ನಕ್ಕೆ 25 ರೂಪಾಯಿ ಏರಿಕೆ ಆಗಿತ್ತು, ಇವತ್ತಿಗೆ ಅದರ ಬೆಲೆ 55 ರೂಪಾಯಿ ಕುಸಿತ ಕಂಡಿದೆ.

Gold Price Today

ಬಂಗಾರದ ಇಂದಿನ ಬೆಲೆ?

* 22 ಕ್ಯಾರಟ್ ಚಿನ್ನದ ಒಂದು ಗ್ರಾಂ ದರ 55 ರೂಪಾಯಿ ಇಳಿಕೆ ಆಗಿದ್ದು, 10 ಗ್ರಾಂ ಬೆಲೆಯು 550 ರೂಪಾಯಿ ಇಳಿಕೆಯಾಗುವ ಮೂಲಕ ಒಟ್ಟು ದರ 1,40,500 ರೂಪಾಯಿ ತಲುಪಿದೆ.

* 24 ಕ್ಯಾರಟ್ ಬಂಗಾರದ ಒಂದು ಗ್ರಾಂ ಬೆಲೆಯು 60 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ 600 ರೂಪಾಯಿ ಕುಸಿದಿದ್ದು, ಒಟ್ಟು ಬೆಲೆ 1,52,840 ರೂಪಾಯಿ ಮುಟ್ಟಿದೆ.

* ಇನ್ನೂ 18 ಕ್ಯಾರಟ್ ಒಂದು ಗ್ರಾಂಗೆ 45 ರೂಪಾಯಿ ಇಳಿಕೆ ಆಗಿದ್ದು, ಹತ್ತು ಗ್ರಾಂಗೆ 450 ರೂ. ಇಳಿಕೆ ಆಗಿ ಒಟ್ಟು ದರ 1,14,630 ರೂಪಾಯಿ ತಲುಪಿದೆ.

ಒಂದು ಕೆಜಿ ಬೆಳ್ಳಿ ದರ ಸ್ಥಿರ

ಒಂದು ಕೆಜಿ ಬೆಳ್ಳಿ ದರದಲ್ಲಿ ಬದಲಾವಣೆ ಆಗದೇ ಸ್ಥಿರವಾಗಿದೆ. ಸೆಪ್ಟೆಂಬರ್ 11ರಂದು 10,000 ರೂಪಾಯಿ ಇಳಿಕೆ ಆಗಿತ್ತು. ಅಲ್ಲಿಂದ ನಿರಂತರವಾಗಿ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತಿದೆ. ಸದ್ಯ ಒಂದು ಕೆಜಿ ಬೆಳ್ಳಿ ದರವು 2,45,000 ರೂಪಾಯಿ ಇದೆ. ಕೈಗಾರಿಕೆ, ಆಭರಣ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಹೆಚ್ಚು ಬೇಡಿಕೆಯಲ್ಲಿರುವ ಬೆಳ್ಳಿಯು ಇದೇ ವರ್ಷ ಫೆಬ್ರವರಿವರೆಗೂ ಗರಿಷ್ಠ 4.25 ಲಕ್ಷವರೆಗೆ ಹೆಚ್ಚಾಗಿತ್ತು. ನಂತರ ನಿರಂತರವಾಗಿ ಇಳಿಕೆಯತ್ತ ಸಾಗಿತು.

ನಗರವಾರು 22k ಚಿನ್ನದ ಬೆಲೆ ವಿವರ

ಚೆನ್ನೈ: 14,010 ರೂಪಾಯಿ

ಮುಂಬೈ: 14,010 ರೂಪಾಯಿ

ದೆಹಲಿ: 14,025 ರೂಪಾಯಿ

ಕೊಲ್ಕತ್ತಾ: 14,010 ರೂಪಾಯಿ

ಬೆಂಗಳೂರು: 14,010 ರೂಪಾಯಿ

ಹೈದರಾಬಾದ್: 14,010 ರೂಪಾಯಿ

ಕೇರಳ: 14,010 ರೂಪಾಯಿ

ಪುಣೆ: 14,010 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+