Gold Price: ಶ್ರಾವಣಕ್ಕೂ ಮುನ್ನವೇ ಗ್ರಾಹಕರಿಗೆ ಸಿಹಿಸುದ್ದಿ: ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ
Gold Price Today: ಚಿನ್ನ-ಬೆಳ್ಳಿ ಪ್ರಿಯರಿಗೆ ಇಂದು ಗುಡ್ನ್ಯೂಸ್ ಸಿಕ್ಕಿದೆ. ಬೆಂಗಳೂರು ಸೇರಿದಂತೆ ದೇಶದ ಮಾರುಕಟ್ಟೆಯಲ್ಲಿ ಬಂಗಾರ ಹಾಗೂ ಬೆಳ್ಳಿಯ ದರ ಗರಿಷ್ಠ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಮೂಲಕ ಶ್ರಾವಣಕ್ಕೂ ಮುನ್ನ ಚಿನ್ನ ಖರೀದಿಗೆ ಮನಸ್ಸು ಮಾಡಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಬೆಂಗಳೂರು ಸೇರಿದಂತೆ ನಗರವಾರು ಚಿನ್ನದ ಮಾಹಿತಿ ಇಲ್ಲಿದೆ.
ಜಾಗತಿಕ ಅನಿಶ್ಚಿತತೆ, ಕೊಲ್ಲಿ ರಾಷ್ಟ್ರಗಳ ಯುದ್ಧದ ಭೀತಿ ನಡುವೆ ಈ ಎರಡು ಲೋಹಗಳ ಬೆಲೆಯಲ್ಲಿ ನಿರಂತರ ಬದಲಾವಣೆಗಳು ಆಗುತ್ತಿವೆ. ಚಿನ್ನದ ಬೆಲೆ ನೆನ್ನೆ ಕೊಂಚ ಏರಿಕೆ ಆಗಿತ್ತು. ಇಂದು ಒಂದೇ ದಿನ ಗರಿಷ್ಠ ಪ್ರಮಾಣದಲ್ಲಿ ಇಳಿಕೆ ಆಗಿದೆ. 22 ಕ್ಯಾರಟ್ ಚಿನ್ನದ 01 ಗ್ರಾಂ 155 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂಗೆ ಬರೋಬ್ಬರಿ 1240 ರೂಪಾಯಿ ಇಳಿಕೆ ಆಗಿದ್ದು, ಒಟ್ಟು ದರ 01,05,720 ರೂಪಾಯಿ ತಲುಪಿದೆ.

24 ಕ್ಯಾರಟ್ ಚಿನ್ನದ 01 ಗ್ರಾಂ 172 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂಗೆ ಬರೋಬ್ಬರಿ 1240 ರೂಪಾಯಿ ಕುಸಿತವಾಗಿದ್ದು, ಅದರ ಒಟ್ಟು ಬೆಲೆ 1,44,170 ರೂಪಾಯಿ ಮುಟ್ಟಿದೆ. ಅದೇ ರೀತಿ 18 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 126 ರೂ. ಇಳಿಕೆಯಾಗಿದ್ದು, 10 ಗ್ರಾಂ ದರ 1260ಕಡಿಮೆ ಆಗುವ ಮೂಲಕ 1,08,130 ರೂಪಾಯಿ ಇದೆ.
ಬೆಳ್ಳಿ ದರದಲ್ಲಿ ಮತ್ತೆ ಕುಸಿತ
ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದೆ. ನಿರಂತವಾಗಿ 5000 ರೂಪಾಯಿ ಮಟ್ಟದಲ್ಲಿ ಏರಿಳಿಕೆ ಆಗುತ್ತಿದೆ. ಇಂದು ಜುಲೈ 28ರಂದು ಒಂದೇ ದಿನಕ್ಕೆ ಮತ್ತೆ 5000 ರೂಪಾಯಿ ಇಳಿಕೆ ಆಗಿದೆ. ಇದರಿಂದ ಒಂದು ಕೆಜಿ ಬೆಳ್ಳಿ ದರ 1,35,000 ರೂಪಾಯಿ ಇಳಿಕೆ ಆಗಿದೆ.
22ಕ್ಯಾರಟ್ 1 ಚಿನ್ನದ ನಗರವಾರು ಬೆಲೆ
ಚೆನ್ನೈ: 13,215 ರೂಪಾಯಿ
ಮುಂಬೈ: 13,215 ರೂಪಾಯಿ
ದೆಹಲಿ: 13,230 ರೂಪಾಯಿ
ಕೊಲ್ಕತ್ತಾ: 13,215 ರೂಪಾಯಿ
ಬೆಂಗಳೂರು: 13,215 ರೂಪಾಯಿ
ಹೈದರಾಬಾದ್: 13,215 ರೂಪಾಯಿ
ಕೇರಳ: 13,215 ರೂಪಾಯಿ
ಕೊಲ್ಕತ್ತಾ; 13,215 ರೂಪಾಯಿ
ಪುಣೆ: 13,215 ರೂಪಾಯಿ
ಬೆಳ್ಳಿ 1ಕೆಜಿ ನಗರವಾರು ದರ ಪಟ್ಟಿ ಹೀಗಿದೆ
ಚೆನ್ನೈ: 2,35,000 ರೂಪಾಯಿ
ಮುಂಬೈ: 2,35,000 ರೂಪಾಯಿ
ದೆಹಲಿ: 2,35,000 ರೂಪಾಯಿ
ಕೊಲ್ಕತ್ತಾ: 2,35,000 ರೂಪಾಯಿ
ಬೆಂಗಳೂರು: 2,35,000 ರೂಪಾಯಿ
ಹೈದರಾಬಾದ್: 2,35,000 ರೂಪಾಯಿ
ಕೇರಳ: 2,35,000 ರೂಪಾಯಿ
ಕೊಲ್ಕತ್ತಾ; 2,35,000 ರೂಪಾಯಿ
ಪುಣೆ: 2,35,000 ರೂಪಾಯಿ


Click it and Unblock the Notifications
