Gold Price: ಬೆಂಗಳೂರು ಸೇರಿ ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಸತತ 2ನೇ ದಿನವು ಕುಸಿತ
Gold Silver Rate Today: ಬೆಂಗಳೂರು ಸೇರಿದಂತೆ ದೇಶದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಇಳಿಮುಖವಾಗಿದೆ. ಇಂದು ಬುಧವಾರ (ಜುಲೈ 29) ಸತತ ಎರಡನೇ ದಿನವು ಚಿನ್ನದ ಮೌಲ್ಯದ ಕುಸಿತ ಕಂಡಿದೆ. ಗ್ರಾಹಕರಿಗೆ ಶ್ರಾವಣಕ್ಕೂ ಮುನ್ನವೇ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಬಂಗಾರದ ಜೊತೆಗೆ ಬೆಳ್ಳಿಯ ದರದ ಬದಲಾವಣೆ, ಇಂದಿನ ನಗರವಾರು ಚಿನ್ನದ ಬೆಲೆ ಮಾಹಿತಿ ಇಲ್ಲಿದೆ.
ಎಂಸಿಎಕ್ಸ್ ಮಾರುಕಟ್ಟೆ ಸೇರಿದಂತೆ ಜಾಗತಿಕವಾಗಿ ಚಿನ್ನಕ್ಕೆ ಬೇಡಿಕೆ ಮೊದಲಿನಷ್ಟಿಲ್ಲ ಎನ್ನಲಾಗಿದೆ. ಹೂಡಿಕೆ ಮಾಡಿದರೆ ನಷ್ಟ ಎಂಬ ಭಾವನೆ ಹೂಡಿಕೆದಾರರಲ್ಲಿ ಮೂಡಿದೆ. ಗ್ರಾಹಕರು ಖರೀದಿಸಲು ಬಂಗಾರದ ದರವು ಕೈಗೆಟುಕುವ ಮಟ್ಟ ಮೀರಿ ಹೆಚ್ಚಾಗಿದೆ. ಈ ಹಿಂದೆ ಒಂದು ಲಕ್ಷ ರೂಪಾಯಿ ಒಳಗಿದ್ದ ಚಿನ್ನವು ಇದೇ 2026ರ ಫೆಬ್ರವರಿ ಹೊತ್ತಿಗೆ ಅತ್ಯಧಿಕ ಗರಿಷ್ಠ ಮಟ್ಟ ತಲುಪಿತು. ಅಲ್ಲಿಂದ ನಿರಂತರವಾಗಿ ಇಳಿಕೆಯಾಗಲು ಶುರುವಾಯಿತು.

ಕುಸಿದ ಬಂಗಾರದ ಬೆಲೆ ಇಂದು ಎಷ್ಟಿದೆ?
ಇಂದು 22ಕ್ಯಾರಟ್ ಚಿನ್ನದ 1 ಗ್ರಾಂ ದರವು 60 ರೂಪಾಯಿಯಂತೆ 10 ಗ್ರಾಂಗೆ 600 ರೂಪಾಯಿ ಕುಸಿದಿದ್ದು, ಒಟ್ಟು ಬೆಲೆ 1,31,550 ರೂಪಾಯಿ ತಲುಪಿದೆ.
24 ಕ್ಯಾರಟ್ ಬಂಗಾರದ ಬೆಲೆ 1 ಗ್ರಾಂ ಬೆಲೆಯು 66 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನಕ್ಕೆ 660 ರೂಪಾಯಿ ಇಳಿಕೆಯಾಗಿ, ಅದರ ಒಟ್ಟು ದರವು 1,43, 510 ರೂಪಾಯಿ ಮುಟ್ಟಿದೆ.
ಅದೇ ರೀತಿ 18 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 50 ರೂ.ನಂತೆ 10 ಗ್ರಾಂಗೆ 500 ರೂಪಾಯಿ ಇಳಿಕೆಯಾಗುವ ಮೂಲಕ ಅದರ ಒಟ್ಟು ಬೆಲೆ 1,07,630 ರೂಪಾಯಿ ಮುಟ್ಟಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ನೆನ್ನೆ ಮಂಗಳವಾರ 22 ಕ್ಯಾರಟ್ 10 ಗ್ರಾಮ ಚಿನ್ನಕ್ಕೆ 1550 ರೂ. ಹಾಗೂ 24 ಕ್ಯಾರಟ್ ಚಿನ್ನಕ್ಕೆ 1720 ರೂಪಾಯಿ ಕುಸಿತ ಕಂಡಿತ್ತು.
ಒಂದು ಕೆಜಿ ಬೆಳ್ಳಿಗೆ 2,35,000 ರೂಪಾಯಿ
ಇನ್ನೂ ಬೆಳ್ಳಿದರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಆಗಿಲ್ಲ. ಜುಲೈ 25ರಂದು ಒಂದು ಕೆ.ಜಿ.ಬೆಳ್ಳಿಗೆ 5000 ರೂಪಾಯಿ ಏರಿಕೆ ಆಗಿತ್ತು. ನಂತರ ಎರಡು ದಿನ 2,40,000 ರೂಪಾಯಿ ಮುಂದುವರಿದಿತ್ತು. ನೆನ್ನೆ ಜುಲೈ 28ರಂದು ಮಂಗಳವಾರ ಒಂದೇ ದಿನಕ್ಕೆ 5000 ರೂಪಾಯಿ ಕುಸಿತ ಕಂಡಿದ್ದು, 2,35,000 ರೂಪಾಯಿ ಇದೆ. ಅದೇ ಬೆಲೆಗೆ ಬೆಳ್ಳಿ ಬುಧವಾರವೂ ಸ್ಥಿರವಾಗಿದ್ದು, ಯಥಾಸ್ಥಿತಿ ಕಾಯ್ದುಕೊಂಡಿದೆ.
22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ
ಬೆಂಗಳೂರು: 13,155 ರೂಪಾಯಿ
ಚೆನ್ನೈ: 13,155 ರೂಪಾಯಿ
ಮುಂಬೈ: 13,155 ರೂಪಾಯಿ
ಕೊಲ್ಕತ್ತಾ: 13,155 ರೂಪಾಯಿ
ದೆಹಲಿ: 13,170 ರೂಪಾಯಿ
ಹೈದರಾಬಾದ್: 13,155 ರೂಪಾಯಿ
ಕೇರಳ: 13,155 ರೂಪಾಯಿ
ಪುಣೆ: 13,155 ರೂಪಾಯಿ


Click it and Unblock the Notifications
