Gold Price: ಚಿನ್ನ ಖರೀದಿ ಮಾಡಲು ಇದು ಸುವರ್ಣ ಅವಕಾಶ, 20,000 ಸಾವಿರ ಕುಸಿದ ಚಿನ್ನದ ಬೆಲೆ!
ಚಿನ್ನದ ಬೆಲೆ ಭಾರಿ ಏರಿಕೆ ಕಾಣ್ತಾ ಇದೆ ಅಂತಾ ಚಿಂತೆ ಮಾಡುತ್ತಿದ್ದ ಜನರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಿದೆ. ಅದು ಏನೆಂದರೆ ಚಿನ್ನದ ಬೆಲೆ ಇದೀಗ ಭಾರಿ ಇಳಿಕೆ ಕಂಡಿದೆ. ಅದು ಎಷ್ಟು ಅಂದ್ರೆ ಒಂದೇ ದಿನ ಬರೋಬ್ಬರಿ 20,000 ರೂಪಾಯಿ ಚಿನ್ನದ ಬೆಲೆ ಕುಸಿತ ಕಂಡಿದೆ. ಅರೆ ಹಾಗಾದ್ರೆ ಈಗ ಎಷ್ಟಿದೆ ಚಿನ್ನದ ಬೆಲೆ? ಬನ್ನಿ ತಿಳಿಯೋಣ.
ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಬಂದು ಪರದಾಟ ಶುರುವಾದಗ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಸ್ಥಿತಿಯಲ್ಲಿ ಎಲ್ಲೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೆ ಬರುತ್ತೆ. ಹೀಗಾಗಿ, ಬಹುತೇಕ ಭಾರತೀಯರು ಚಿನ್ನದ ಮೇಲೆಯೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಚಿನ್ನದ ಬೆಲೆ ಭಾರಿ ಏರಿಕೆ ಕಾಣ್ತಿದೆ ಎಂಬ ಕಾರಣ ಆಭರಣ ಅಂದ್ರೆ ಒಡವೆ ಪ್ರಿಯರು ಬೇಸರ ಹೊರಹಾಕಿದ್ದರು. ಆದರೆ ಈಗ ದಿಢೀರ್ ಚಿನ್ನದ ಬೆಲೆ 20,000 ರೂಪಾಯಿ ಕುಸಿತ ಕಂಡಿದೆ.

ಚಿನ್ನ 20,800 ರೂಪಾಯಿ ಕುಸಿತ!
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 19,000 ರೂಪಾಯಿ ಕುಸಿತ ಕಂಡಿದೆ. ಇನ್ನುಳಿದಂತೆ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 1,900 ರೂ ಕಡಿತವಾಗಿದ್ದು. ಆಭರಣ ಚಿನ್ನದ ಬೆಲೆಯು ಕುಸಿತದ ನಂತರ 10 ಗ್ರಾಂಗೆ 66,600 ರೂಪಾಯಿ ಬೆಲೆ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 20,800 ರೂಪಾಯಿ ಕುಸಿತ ಕಂಡಿದೆ.
ಬೆಳ್ಳಿ ಬೆಲೆ ಈಗ ಎಷ್ಟು?
ಈ ಮೂಲಕ ಈಗ 24 ಕ್ಯಾರೆಟ್ ಚಿನ್ನದ ಬೆಲೆ ಕೂಡ 72,650 ರೂಪಾಯಿ ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿತ ಕಂಡು ಹಳದಿ ಲೋಹದ ಬೆಲೆ ಕುಸಿತದ ಹಾದಿಯ ಹಿಡಿದಿದೆ. ಇದರ ಜೊತೆ ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆ ಕಂಡಬರುತ್ತಿದ್ದು ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ. ಬೆಳ್ಳಿ ಬೆಲೆ ಈಗ, ಸುಮಾರು 4500 ರೂಪಾಯಿ ಪ್ರತಿ ಕೆಜಿ ಲೆಕ್ಕದಲ್ಲಿ ಕುಸಿತ ಕಂಡು 91,500 ರೂಪಾಯಿಗೆ ಬೆಳ್ಳಿ ಪ್ರತಿ ಕೆಜಿಗೆ ಮಾರಾಟ ಆಗ್ತಿದೆ.
ಅಮೆರಿಕದ ಬಳಿ ಇದೆ ಅತಿಹೆಚ್ಚು ಚಿನ್ನ!
ಚಿನ್ನ ಜಗತ್ತಿನ ಪ್ರತಿಯೊಂದು ದೇಶಕ್ಕೂ ಬೇಕು, ಹೀಗಾಗಿ ಚಿನ್ನ ಸಂಗ್ರಹಣೆ ಬಗ್ಗೆ ಪ್ರಪಂಚ ಒತ್ತು ನೀಡುತ್ತದೆ. ಅದರಲ್ಲೂ ಜಗತ್ತಿನ ಅತ್ಯಂತ ಶ್ರೀಮಂತ ದೇಶ ಎಂಬ ಬಿರುದು ಪಡೆದ, ಅಮೆರಿಕ ಬಳಿ ಅತಿಹೆಚ್ಚು ಚಿನ್ನ ಇದೆ. ಅಮೆರಿಕ ಬಳಿ ಸುಮಾರು 8,133 ಟನ್ ಚಿನ್ನವಿದೆ. ಹಾಗಾದ್ರೆ ಭಾರತ ಈಗ ಎಷ್ಟನೇ ಸ್ಥಾನದಲ್ಲಿ ಇದೆ ಗೊತ್ತಾ? ಅತಿಹೆಚ್ಚು ಚಿನ್ನ ಹೊಂದಿರುವ ಸಂಪೂರ್ಣ ಟಾಪ್-10 ದೇಶಗಳ ಪಟ್ಟಿಗೆ ಮುಂದೆ ಓದಿ.
ಅಮೆರಿಕದ ನಂತರದ ಸ್ಥಾನದಲ್ಲಿ ಜರ್ಮನಿ ಇದ್ದು, 3,352 ಟನ್ ಚಿನ್ನವನ್ನು ಜರ್ಮನಿಯು ಹೊಂದಿದೆ. ಇಟಲಿ ಬಳಿ 2,451 ಟನ್, ಫ್ರಾನ್ಸ್ ಬಳಿ 2,436 ಟನ್, ರಷ್ಯಾ ಬಳಿ 2,332 ಟನ್, ಚೀನಾ ಬಳಿ 2,262 ಟನ್, ಸ್ವಿಜರ್ಲ್ಯಾಂಡ್ ಬಳಿ 1,040, ಜಪಾನ್ ಬಳಿ 845.97 ಟನ್ ಇದ್ದರೆ, ಭಾರತದ ಬಳಿ 822.09 ಟನ್ ಚಿನ್ನದ ಸಂಗ್ರಹ ಇದೆ. ಈ ಮೂಲಕ ಇಡೀ ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಇರುವ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು. ಇದು ಆಭರಣ ಪ್ರಿಯರಿಗೆ ಬೇಸರ ತರಿಸಿದರೂ, ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆ ಖುಷಿ ನೀಡುತ್ತಿದೆ.
ಚಿನ್ನದ ಬೆಲೆ 2 ಲಕ್ಷ ರೂಪಾಯಿ?
ಹೀಗಾಗಿಯೇ ಕಳೆದ ಕೆಲವು ತಿಂಗಳಿಂದಲು ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿದೆ. ಆದರೆ ಜೂನ್ ಆರಂಭದಲ್ಲೇ ಚಿನ್ನದ ಬೆಲೆ ಒಂದಷ್ಟು ಕಡಿಮೆ ಆಗಿತ್ತು. ಈಗ ಮತ್ತೆ ಭಾರಿ ಏರಿಕೆ ಕಾಣುತ್ತಿದೆ. ಅದರಲ್ಲೂ ಇರಾನ್ & ಇಸ್ರೇಲ್ ನಡುವೆ ಯುದ್ಧದ ಸ್ಥಿತಿ ನಿರ್ಮಾಣವಾಗಿ ಭಯ ಹುಟ್ಟಿಸಿತ್ತು. ಈ ಕಾರಣಕ್ಕೆ, ಚಿನ್ನದ ಬೆಲೆ ಮುಂದಿನ ಕೆಲವೇ ವರ್ಷದಲ್ಲಿ 2 ಲಕ್ಷ ರೂಪಾಯಿಗೆ ತಲುಪುವ ಸಾಧ್ಯತೆ ಕೂಡ ದಟ್ಟವಾಗಿದೆ.
ಚಿನ್ನದ ಬೆಲೆ ಕುಸಿದಿದ್ದು ಏಕೆ?
ಚರಿತ್ರೆಯಲ್ಲಿ ಯುದ್ಧಗಳು ನಡೆದಿರುವುದು ಚಿನ್ನಕ್ಕಾಗಿ ಹಾಗೂ ಅಮೂಲ್ಯ ವಸ್ತುಗಳಿಗೆ ಮಾತ್ರ. ಚಿನ್ನ ಒಂದು ಕಾಲದಲ್ಲಿ ನಾಣ್ಯ ಕೂಡ ಆಗಿತ್ತು. ಇದೀಗ ಚಿನ್ನ ಅನ್ನೋದು ಆಭರಣವಾಗಿ & ಬ್ಯಾಂಕ್ ಲಾಕರ್ ಒಳಗೆ ಮಾತ್ರ ಕಾಣಲು ಸಾಧ್ಯ. ಈ ಕಾರಣಕ್ಕೆ, ಚಿನ್ನ ಅನ್ನೋ ಹಳದಿ ಲೋಹದ ಬೆಲೆ ಆಕಾಶ ಮುಟ್ಟುತ್ತಿತ್ತು. ಆದರೆ ಈಗ ದಿಢೀರ್ ಅಂತಾ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಆಗಿದೆ. ಅದರಲ್ಲೂ ಒಂದೇ ದಿನ ಚಿನ್ನದ ಬೆಲೆ ಭರ್ಜರಿ 20,000 ರೂಪಾಯಿ ಕುಸಿತವನ್ನು ಕಂಡು ಆಭರಣ ಪ್ರಿಯರಿಗೆ ಭರ್ಜರಿ ಸುದ್ದಿ ನೀಡಿದೆ. ಮುಂದಿನ ದಿನಗಳಲ್ಲಿ, ಚಿನ್ನದ ಬೆಲೆಯ ಬಗ್ಗೆ ಚಿಂತೆ ಶುರುವಾಗಿದೆ.
ಯುದ್ಧದ ಕಾರಣಕ್ಕೆ ಬೆಲೆ ಏರಿಕೆ?
ಜಾಗತಿಕವಾಗಿ ಯುದ್ಧಗಳು ಶುರುವಾದಾಗ, ಮೊದಲು ಆ ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್, ಡಿಸೆಲ್ ಮೇಲೆ. ಯಾಕಂದ್ರೆ ಜಾಗತಿಕ ಆರ್ಥ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ. ಹೀಗಾಗಿಯೇ ಯುದ್ಧ ಶುರುವಾದ ತಕ್ಷಣ ಚಿನ್ನದ ರೂಪಕ್ಕೆ ತಮ್ಮ ಸಂಪತ್ತು ಅಂದರೆ ಹಣ ಬದಲಾಯಿಸಿ, ಸಂಗ್ರಹ ಮಾಡಲು ಜನಗಳು ಮುಂದಾಗುತ್ತಾರೆ. ಹಾಗೆ ದೇಶಗಳು ಕೂಡ ಅಪಾರ ಪ್ರಮಾಣದ ಚಿನ್ನ ಯುದ್ಧದ ವೇಳೆ ಬಂದಾಗ ಖರೀದಿ ಮಾಡುತ್ತವೆ. ಹೀಗಾಗಿಯೆ ಕಳೆದ ಕೆಲವು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಿದ್ದು, ಇದೀಗ ಚಿನ್ನ ಕುಸಿತವನ್ನು ಕಾಣುತ್ತಿದೆ.
ಬೆಳ್ಳಿ ಬೆಲೆಯಲ್ಲಿ ದಿಢೀರ್ ಇಳಿಕೆ!
ಚಿನ್ನ ಬಹು ಬೇಡಿಕೆಯ ವಸ್ತು, ಹೀಗಾಗಿಯೇ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಹೀಗೆ ಚಿನ್ನ ಕೊಳ್ಳಲು ಜನಗಳು ಕೂಡ ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಹೀಗಿದ್ದಾಗ ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು. ನೋಡ ನೋಡುತ್ತಲೇ ಬೆಳ್ಳಿ ಬೆಲೆ ಹತ್ತಿರ ಹತ್ತಿರ 1 ಲಕ್ಷ ರೂಪಾಯಿಗೆ ತಲುಪಿತ್ತು ಇಂತಹ ಸ್ಥಿತಿಯಲ್ಲಿ ಈಗ ದಿಢೀರ್ ಬೆಳ್ಳಿ ಬೆಲೆಯಲ್ಲಿ 1200 ರೂಪಾಯಿ ಕುಸಿತ ಕಂಡಿದೆ! ಮುಂದಿನ ದಿನಗಳಲ್ಲಿ ಬೆಳ್ಳಿಯ ಬೆಲೆ ಮತ್ತಷ್ಟು ಏರಿಕೆ ಕಾಣುವ ನಿರೀಕ್ಷೆಯು ಇದೆ. ಈ ನಡುವೆ ಬೆಳ್ಳಿ ಬೆಲೆ ಒಂದಷ್ಟು ಇಳಿಕೆ ಕಂಡಿರುವುದು, ಬೆಳ್ಳಿ ಇಷ್ಟಪಡುವವರಿಗೆ ಒಂದಷ್ಟು ಖುಷಿ ಕೊಟ್ಟಿದೆ.
ಹಳದಿ ಲೋಹ ಎಲ್ಲರಿಗೂ ಇಷ್ಟ!
ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. ಹೀಗಾಗಿಯೇ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ, ಹಳದಿ ಲೋಹ ಬೆನ್ನೆಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹ ಅಂದ್ರೆ ಚಿನ್ನ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ದಟ್ಟವಾಗಿದೆ.












Click it and Unblock the Notifications