ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ತಲುಪಿದ ಚಿನ್ನದ ಬೆಲೆ
ನವದೆಹಲಿ, ಸೆಪ್ಟೆಂಬರ್ 01: ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಡಾಲರ್ ವರ್ಷದ ಕನಿಷ್ಠ ಮಟ್ಟಕ್ಕೆ ಇಳಿದಿದ್ದರಿಂದ ಚಿನ್ನದ ಬೆಲೆ ಎರಡು ವಾರಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ.
Recommended Video
ಅಮೆರಿಕಾದ ಫೆಡರಲ್ ರಿಸರ್ವ್ ಹೊಸ ನೀತಿ ಚೌಕಟ್ಟಿನ ನಂತರ ಅಮೆರಿಕಾ ಬಡ್ಡಿದರಗಳು ದೀರ್ಘಾವಧಿಯವರೆಗೆ ಕಡಿಮೆ ಇರುತ್ತವೆ ಎಂಬ ಆಧಾರದ ಮೇಲೆ ಡಾಲರ್ ಕನಿಷ್ಠ ಮಟ್ಟಕ್ಕೆ ಇಳಿದ ಬಳಿಕ ಹಳದಿ ಲೋಹದ ಬೆಲೆ ಏರಿಕೆಗೊಂಡಿದೆ.
ಸ್ಪಾಟ್ ಚಿನ್ನವು ಔನ್ಸ್‌ಗೆ ಶೇಕಡಾ 0.7ರಷ್ಟು ಏರಿಕೆಯಾಗಿ 1,983.77 ಕ್ಕೆ ತಲುಪಿದೆ. ಆಗಸ್ಟ್ 19 ರಿಂದ ಗರಿಷ್ಠ ಅವಧಿಯಲ್ಲಿ 1,984.97 ಡಾಲರ್‌ಗೆ ತಲುಪಿದೆ. ಅಮೆರಿಕಾ ಚಿನ್ನದ ಭವಿಷ್ಯವು ಶೇಕಡಾ 0.6ರಷ್ಟು ಏರಿಕೆಯಾಗಿ 1,990 ಡಾಲರ್‌ಗೆ ತಲುಪಿದೆ.

ಡಾಲರ್ ಸೂಚ್ಯಂಕವು ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಎರಡು ವರ್ಷಗಳಿಗಿಂತಲೂ ಕಡಿಮೆಯಾಗಿದೆ, ಇದು ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನವನ್ನು ಅಗ್ಗವಾಗಿಸುತ್ತದೆ.
ಫೆಡರಲ್ ರಿಸರ್ವ್ ಹೊಸ ವಿತ್ತೀಯ ನೀತಿ ಕಾರ್ಯತಂತ್ರವು ಹಣದುಬ್ಬರವು ಸ್ವಲ್ಪ ಹೆಚ್ಚಾಗಲು ಮತ್ತು ಬಡ್ಡಿದರಗಳು ಹೆಚ್ಚು ಕಾಲ ಕಡಿಮೆಯಾಗಲು ಕಾರಣವಾಗಬಹುದು. ಇದು ಡಾಲರ್‌ನಲ್ಲಿ ಮಾರಾಟವನ್ನು ಪ್ರಚೋದಿಸುತ್ತದೆ.












Click it and Unblock the Notifications