Gold Rate Today: ಬಜೆಟ್‌ ಬಳಿಕ ಮೊದಲ ಬಾರಿ ಏರಿಕೆ ಕಂಡ ಚಿನ್ನದ ದರ; ಇಲ್ಲಿದೆ ಇಂದಿನ ದರಪಟ್ಟಿ

ಬೆಂಗಳೂರು, ಜುಲೈ 27: ಕಳೆದ ಒಂದು ವರ್ಷದಿಂದ ಚಿನ್ನ, ಬೆಳ್ಳಿಯ ಬೆಲೆ ಹೆಚ್ಚಾಗುತ್ತಲೇ ಇದೆ. ಬಂಗಾರದ ಬೆಲೆ ಏರಿಕೆಯಿಂದ ಆಭರಣದ ಪ್ರಿಯರಿಗೆ ಬಿಗ್‌ ಶಾಕ್‌ ನೀಡದಂತಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜುಲೈ23 ರಂದು ಬಜೆಟ್‌ ಮಂಡಿಸಿದ್ದು, ಆಭರಣ ಪ್ರಿಯರಿಗೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಶುಭ ಸುದ್ದಿ ನೀಡಿದ್ದರು.

ನಿರ್ಮಲಾ ಸೀತಾರಾಮನ್‌ ಅವರು ಚಿನ್ನ, ಬೆಳ್ಳಿ ಮೇಲೆ ಶೇ. 6% ರಷ್ಟು ಕಸ್ಟಮ್ಸ್ ಡ್ಯೂಟಿ ಕಡಿತ ಮಾಡಲಾಗಿದೆ ಎಂದು ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕೇಂದ್ರ ಬಜೆಟ್‌ ಮಂಡನೆ ಬಳಿಕ ಸತತವಾಗಿ ಇಳಿಕೆಯಾಗಿದ್ದ ಚಿನ್ನದ ಬೆಲೆ ಮೊದಲ ಬಾರಿಗೆ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಜುಲೈ 27) ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 25 ರೂಪಾಯಿ ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 27 ರೂಪಾಯಿಯಷ್ಟುದುಬಾರಿಯಾಗಿದೆ.

Gold Price Rise For The First Time Since Budget

ಇಂದು (ಶನಿವಾರ) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 6,325 ರೂಪಾಯಿ ಇದ್ದು, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 6,900 ರೂ ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 50,600 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು 63,250 ಮತ್ತು 6,32,500 ರೂಪಾಯಿ ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ 55,200 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 69,000 ಮತ್ತು ₹ 6,90,000 ತಲುಪಿದೆ.

ಇನ್ನೂ ಚಿನ್ನದ ಬೆಲೆಯಲ್ಲಿ ಬಜೆಟ್‌ ಬಳಿಕ ಏರಿಕೆ ಕಂಡಿದ್ದು, ಬೆಳ್ಳಿಯ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಒಂದು ಗ್ರಾಂ ಬೆಳ್ಳಿಗೆ 84.25 ರೂ ಹಾಗೂ 8 ಗ್ರಾಂಗೆ 674 ರೂಪಾಯಿ ಇದೆ. 10 ಗ್ರಾಂ 842.50 ಹಾಗೂ 1 ಕಿಲೋ ಗ್ರಾಂ 84,250 ರೂಪಾಯಿ ಬೆಲೆ ಬಾಳುತ್ತದೆ.

ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+