Gold Price: ₹80,000 ತಲುಪುತ್ತಾ ಚಿನ್ನ? ₹1 ಲಕ್ಷದ ಸನಿಹದಲ್ಲಿ ಬೆಳ್ಳಿ ಬೆಲೆ
ಜೂನ್ 4ರಿಂದ ಚಿನ್ನದ ಬೆಲೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಜೂನ್ 4ರಂದು 100 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 7000 ರೂಪಾಯಿ ಹೆಚ್ಚಿದ್ದರೆ, ಜೂನ್ 5ರಂದು 3000 ರೂಪಾಯಿಗಳ ಅಲ್ಪ ಕುಸಿತ ಕಂಡಿತ್ತು.
ಚಿನ್ನದ ಬೆಲೆ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆ ಇರುವಾಗಲೇ ಜೂನ್ 6ರಂದು ಮತ್ತೆ 100 ಗ್ರಾಂ ಚಿನ್ನದ ಬೆಲೆ 7000 ರೂಪಾಯಿ ಹೆಚ್ಚಾಗಿತ್ತು, ಜೂನ್ 7ರಂದು ಶುಕ್ರವಾರ ಕೂಡ ಚಿನ್ನದ ಬೆಲೆ 3300 ರೂಪಾಯಿ ಏರಿಕೆ ಕಂಡಿದೆ.

ಶುಕ್ರವಾರ 22 ಕ್ಯಾರೆಟ್ ಚಿನ್ನ ಅಂದರೆ ಆಭರಣ ಚಿನ್ನದ ಬೆಲೆ 100 ಗ್ರಾಂಗೆ 3000 ರೂಪಾಯಿ ಹೆಚ್ಚಾಗಿದೆ. ಗುರುವಾರ ₹ 6,73,000 ಇದ್ದ ದರ ಶುಕ್ರವಾರ ₹ 6,76,000 ಗಳಿಗೆ ಏರಿಕೆಯಾಗಿದೆ.
ಗುರುವಾರ ₹ 7,34,200 ಇದ್ದ 100 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಶುಕ್ರವಾರ 3300 ರೂಪಾಯಿ ಏರಿಕೆಯಾಗಿದ್ದು ₹ 7,37,500 ರಂತೆ ಮಾರಾಟವಾಗಿದೆ. ಅಂದರೆ ಪ್ರತಿ ಗ್ರಾಂ ಚಿನ್ನದ ಬೆಲೆ 33 ರೂಪಾಯಿ ಹೆಚ್ಚಾಗಿದೆ.
ಎರಡು ದಿನದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 110 ರೂಪಾಯಿ ಏರಿಕೆಯಾಗಿದ್ದರೆ. 22 ಕ್ಯಾರೆಟ್ ಚಿನ್ನದ ಬೆಲೆ 100 ರೂಪಾಯಿ ಹೆಚ್ಚಾಗಿದೆ. ಇದು ಆಭರಣ ಪ್ರಿಯರು, ಹೂಡಿಕೆದಾರರ ತಲೆಬಿಸಿ ಹೆಚ್ಚಿಸಿದೆ.
ಇನ್ನೊಂದು ತಿಂಗಳಿನಲ್ಲಿ ₹80,000?
ಸದ್ಯ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹ 73,750 ಇದೆ, ಕಳೆದ ಮೂರು ದಿನದಂತೆ ಏನಾದರೂ ಬೆಲೆ ಹೆಚ್ಚಳವಾದರೆ ಇನ್ನೊಂದು ತಿಂಗಳಿನಲ್ಲಿ ₹80,000 ತಲುಪಿದರೂ ಅಚ್ಚರಿ ಪಡಬೇಕಿಲ್ಲ.
ಆಭರಣ ಚಿನ್ನ (22 ಕ್ಯಾರೆಟ್) 10 ಗ್ರಾಂಗೆ ₹ 67,600 ಇದ್ದು, ಇದು ಕೂಡ ಶೀಘ್ರದಲ್ಲೇ ₹70,000 ತಲುಪಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
1 ಲಕ್ಷದತ್ತ ಬೆಳ್ಳಿ ದರ
ಇನ್ನು ಬೆಳ್ಳಿ ಬೆಲೆ ಕೂಡ ಹೆಚ್ಚಳವಾಗುತ್ತಿದ್ದು ₹1 ಲಕ್ಷದತ್ತ ದಾಪುಗಾಲು ಇಟ್ಟಿದೆ. ಬೆಂಗಳೂರಿನಲ್ಲಿ ಶುಕ್ರವಾರ ಚಿನ್ನದ ದರ ಕೆಜಿಗೆ 2500 ರೂಪಾಯಿ ಹೆಚ್ಚಳವಾಗಿದ್ದು, 96,000 ರೂಪಾಯಿ ತಲುಪಿದೆ. ಇದೇ ರೀತಿ ದರ ಹೆಚ್ಚಳ ಮುಂದುವರೆದರೆ ಕೆಲವೇ ದಿನಗಳಲ್ಲಿ ಬೆಳ್ಳಿ ಬೆಲೆ 1 ಲಕ್ಷ ರೂಪಾಯಿ ದಾಟುವ ಮೂಲಕ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.












Click it and Unblock the Notifications