Gold Price Today: ಇಂದು ಚಿನ್ನ ಖರೀದಿದಾರಿಗೆ ಸಿಹಿ ಸುದ್ದಿ, ದರದಲ್ಲಿ ಭಾರೀ ಕುಸಿತ
ಬೆಂಗಳೂರು, ಸೆಪ್ಟಂಬರ್ 24: ಅಂತಾರಾಷ್ಟ್ರೀಯ ಯುದ್ಧಗಳು, ಸುಂಕ ನೀತಿಯ ಕಾರಣದಿಂದಾಗಿ ಚಿನ್ನ-ಬೆಳ್ಳಿ ದರದಲ್ಲಿ ನಿರಂತರ ಬದಲಾವಣೆ ಆಗುತ್ತಲೇ ಇವೆ. ಕಳೆದ ಎರಡು ದಿನದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಕುಸಿತವಾಗಿದೆ. ಇಂದು ಚಿನ್ನಾಭರಣ ಖರೀದಿ ಮಾಡುವವರಿಗೆ ಇದೊಂದು ಖುಷಿ ಸುದ್ದಿ ಅಂತಲೇ ಹೇಳಬಹುದು. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ ದರವೆಷ್ಟಿದೆ? ಇಲ್ಲಿದೆ ಮಾಹಿತಿ, ದರಪಟ್ಟಿ.
ಚಿನ್ನಕ್ಕೆ ಬೆಲೆ ಎಷ್ಟೇ ಹೆಚ್ಚಾದರೂ ಸಹಿತ ಬೇಡಿಕೆ ಮಾತ್ರ ಕುಗ್ಗುತ್ತಿಲ್ಲ. ಇತ್ತೀಚೆಗೆ ಷೇರುಪೇಟೆಯಲ್ಲಿ ಎಲ್ಲ ಷೇರುಗಳ ಬೆಲೆ ಇಳಿಕೆಯಾದ ಕಾಲದಲ್ಲೂ ಸಹ ಚಿನ್ನ ಮತ್ತು ಬೆಳ್ಳಿ ಷೇರುಗಳು ಹೂಡಿಕೆದಾರರಿಗೆ ಉತ್ತಮ ಲಾಭಾಂಶ ತಂದುಕೊಟ್ಟಿವೆ. ಹೀಗಾಗಿ ಜನರು ಚಿನ್ನ ಖರೀದಿಗಿಂತ ಅದರ ಮೇಲಿನ ಹೂಡಿಕೆಯತ್ತ ಹೆಚ್ಚಿನ ಮನಸ್ಸು ಮಾಡುತ್ತಿದ್ದಾರೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.

ಎರಡು ದಿನಗಳಿಂದಲೇ ಹೆಚ್ಚಾಗಿದ್ದ 24 ಕ್ಯಾರಟ್ 10ಗ್ರಾಂ ಚಿನ್ನ ಬೆಲೆಯು ಇಂದು ಒಂದೇ ದಿನಕ್ಕೆ 320 ಇಳಿಕೆ ಕಂಡಿದೆ. ಇದರಿಂದಾಗಿ ಮಂಗಳವಾರ 1,15,690 ರೂಪಾಯಿ ಇದ್ದ ಬೆಲೆ ಬುಧವಾರಕ್ಕೆ 1,15,370 ರೂ. ನಷ್ಟವಾಗಿದೆ. ಇದೇ ರೀತಿ 22 ಕ್ಯಾರಟ್ ದರವು 300 ರೂಪಾಯಿ ಇಳಿಕೆ ಯಾಗಿದ್ದು, 1,06,050 ರೂಪಾಯಿಯಿಂದ ₹1,05,750ಕ್ಕೆ ಇಳಿಕೆ ಕಂಡಿದೆ. ಹೀಗಾಗಿ ಇವತ್ತು ಚಿನ್ನ ಕೊಳ್ಳುವವರಿಗೆ ಈ ಬೆಳವಣಿಗೆ ಕೊಂಚ ನೆಮ್ಮದಿ ತಂದಿದೆ.
ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. 100 ಗ್ರಾಂ ಬೆಳ್ಳಿ ದರವು 14,000 ರೂಪಾಯಿ ಯಥಾ ಸ್ಥಿತಿಯಲ್ಲಿ ಮುಂದುವರಿದಿದೆ. ಬೆಂಗಳೂರಲ್ಲೇ ಇದೇ ದರ ₹14,000 ಇದೆ. ನಗರವಾರು ಚಿನ್ನದ ಮಾಹಿತಿ ಇಲ್ಲಿದೆ.
ವಿವಿಧೆಡೆ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೇ?
ಬೆಂಗಳೂರು: 1,05,750 ರೂಪಾಯಿ
ಮುಂಬೈ: 1,05,750 ರೂಪಾಯಿ
ಚೆನ್ನೈ: 1,05,700 ರೂಪಾಯಿ
ಕೋಲ್ಕತ್ತಾ: 106,050 ರೂಪಾಯಿ
ಬೆಳಗಾವಿ: 1,05,750 ರೂಪಾಯಿ
ಹೈದರಾಬಾದ್: 1,05,750 ರೂಪಾಯಿ
ದೆಹಲಿ: 1,03,833 ರೂಪಾಯಿ












Click it and Unblock the Notifications