Gold Price Today: ಒಂದೇ ದಿನಕ್ಕೆ ಚಿನ್ನದ ದರ ₹8,200 ಹೆಚ್ಚಳ, ಚಿನ್ನಾಭರಣ ಪ್ರಿಯರಿಗೆ ಶಾಕ್, ಬೆಲೆಪಟ್ಟಿ
ಬೆಂಗಳೂರು, ಜೂನ್ 11: ಮದುವೆ, ಇನ್ನಿತರ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವ ಗ್ರಾಹಕರಿಗೆ ಇಂದಿನ ಬಂಗಾರದ ದರ ಬಿಗ್ ಶಾಕ್ ನೀಡಿದೆ. ಹಬ್ಬದ ಹರಿದಿನ ಇಲ್ಲದಿದ್ದರೂ ಸಹಿತ ಚಿನ್ನ ಬೆಲೆ ಗಗನಕ್ಕೇರಿದೆ. ಒಂದು ಲಕ್ಷ ರೂಪಾಯಿ ತಲುಪಿದ ನಂತರ ಇವತ್ತು ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿದೆ. ಅದರಲ್ಲೂ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಸ್ವಲ್ಪ ಸ್ವಲ್ಪವೇ ಇಳಿಕೆ ಆಗಿತ್ತು. ಇದೀಗ ಇಳಿಕೆ ಆಗಿದ್ದಕ್ಕಿಂತಲೂ ದುಪ್ಪಟ್ಟು ದರಕ್ಕೆ ಚಿನ್ನ ಹೆಚ್ಚಾಗಿದೆ.
ಜೂನ್ 11ರಂದು ಮಾರುಕಟ್ಟೆ ಅಂಕಿ ಸಂಖ್ಯೆ ಪ್ರಕಾರ, 22 ಕ್ಯಾರಟ್ ಚಿನ್ನಕ್ಕೆ7500 ರೂಪಾಯಿ ಏರಿಕೆ ಆಗಿದೆ. 24 ಕ್ಯಾರಟ್ ಚಿನ್ನಕ್ಕೆ 8200 ರೂಪಾಯಿ ಹೆಚ್ಚಾಗಿದೆ. ನೆನ್ನೆ ಹೆಚ್ಚಾಗಿದ್ದ ಬೆಳ್ಳಿ ಬೆಲೆ ಬೆಲೆಯು ಇಂದು ಸ್ಥಿರವಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಬಂಗಾರದ ದರ 90,200 ರೂಪಾಯಿ, 24 ಕ್ಯಾರಟ್ ಚಿನ್ನಕ್ಕೆ 98,400 ರೂಪಾಯಿಗೆ ಏರಿಕೆ ಆಗಿದೆ. ಬೆಳ್ಳಿದರ ಇಂದು 100 ಗ್ರಾಂಗೆ 10900 ರೂಪಾಯಿ ಇದೆ.

ಚಿನ್ನದ ಬೆಲೆ ಒಂದು ಲಕ್ಷ ರೂಪಾಯಿ ತಲುಪಿದ ಮೇಲೆ ದರದಲ್ಲಿ ಏರಿಳಿತ ಮುಂದುವರಿದಿದೆ. ದರ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಬಂಗಾರ ಷೇರು ಹೂಡಿಕೆ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ. ಇತ್ತ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಚಿನ್ನ ದರವು ಗಗನಕ್ಕೇರಿದೆ. ವೇಸ್ಟೇಜ್, ಜಿಎಸ್‌ಟಿ, ಮೇಕಿಂಗ್ ಚಾರ್ಜ್ ಸೇರಿದಂತೆ ಹತ್ತು ಗ್ರಾಂ ಬಂಗಾರಕ್ಕೆ ಒಂದು ಲಕ್ಷ ರೂಪಾಯಿ ತಗಲುತ್ತದೆ. ಚಿನ್ನದ ಬೆಲೆ ಹೆಚ್ಚಳವಾಗಿ ಗ್ರಾಹಕರಿಗೆ ಶಾಕ್ ಆಗಿದೆ.
ದೇಶದಲ್ಲಿ ಇಂದು 24 ಕ್ಯಾರಟ್ ಚಿನ್ನದ 10 ಗ್ರಾಂಗೆ 98,400 ರೂಪಾಯಿಗೆ ಹೆಚ್ಚಾಗಿದೆ, ನೆನ್ನೆ ಅದರ ಬೆಲೆ 97,580 ರೂಪಾಯಿ ಇತ್ತು. ಒಟ್ಟು 820 ರೂ. ಹೆಚ್ಚಾಗಿದೆ. ಇದೇ ಚಿನ್ನದ 100 ಗ್ರಾಂ ಬೆಲೆ 8200 ರೂಪಾಯಿಗೆ ಏರಿಕೆ ಆಗಿದೆ. ಈ ವಾರದ ಇದರ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
22 ಕ್ಯಾರಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ ನೆನ್ನೆ 89,450 ರೂಪಾಯಿ ಇದ್ದದ್ದು, ಇಂದಿಗೆ 90,200 ರೂಪಾಯಿಗೆ ಏರಿಕೆ ಕಂಡಿದೆ. ಮೂಲಕ ಒಟ್ಟು 750 ರೂ. ಹೆಚ್ಚಿಸಿಕೊಂಡಿದೆ. ಇದೇ ಚಿನ್ನದ 100 ಗ್ರಾಂ ಬೆಲೆ ಇಂದು 9,02,000 ರೂಪಾಯಿ ಇದ್ದು, ಒಟ್ಟು 7,500 ರೂಪಾಯಿ ಏರಿಕೆ ಕಂಡಂತಾಗಿದೆ. ಈ ಮೂಲಕ ಗ್ರಾಹಕರ ಜೇಬಿಗೆ ಬಂಗಾರವು ಕತ್ತರಿ ಹಾಕಿದೆ. ಒಂದು ಲಕ್ಷ ರೂಪಾಯಿ ತಲುಪಿದರೆ ಚಿನ್ನಕ್ಕೆ ಬೇಡಿಕೆ ಯಥಾಸ್ಥಿತಿಯಲ್ಲಿದೆ. ಖರೀದಿ ಪ್ರಮಾಣದಲ್ಲಿ ಇಳಿಕೆ ಆಗದಿರುವುದು ವಿಶೇಷ.
22 ಕ್ಯಾರಟ್ ಚಿನ್ನದ ನಗರವಾರು ಪಟ್ಟಿ: 10 ಗ್ರಾಂ ದರ ವಿವರ
ಬೆಂಗಳೂರು: 90,200 ರೂಪಾಯಿ
ದೆಹಲಿ: 90,350 ರೂಪಾಯಿ
ಚೆನ್ನೈ: 90,200 ರೂಪಾಯಿ
ಪಾಟ್ನಾ: 92,095 ರೂಪಾಯಿ
ಮುಂಬೈ: 90,200 ರೂಪಾಯಿ
ಕೋಲ್ಕತಾ: 90,200 ರೂಪಾಯಿ
ಹೈದರಾಬಾದ್: 89,450 ರೂಪಾಯಿ
ಕೇರಳ: 90,200 ರೂಪಾಯಿ
ಅಹ್ಮದಾಬಾದ್: 90,250 ರೂಪಾಯಿ
ಭುವನೇಶ್ವರ್: 90,200 ರೂಪಾಯಿ
ಜೈಪುರ್: 90,350 ರೂಪಾಯಿ
ವಿಶೇಷ ಸೂಚನೆ ಏನೆಂದರೆ, ನೀವು ಚಿನ್ನಾಭರಣ ಖರೀದಿಸುವಾಗ ಜಿಎಸ್‌ಟಿ, ವೇಸ್ಟೇಜ್, ಇತರ ಶುಲ್ಕ ಸೇರಿ ನಗರದಿಂದ ನಗರಕ್ಕೆ ಚಿನ್ನದ ದರದಲ್ಲಿ ವ್ಯತ್ಯಾಸವಾಗುತ್ತದೆ. ನೋಡಿಕೊಂಡು ಖರೀದಿಸಬೇಕು.












Click it and Unblock the Notifications