Gold Price: ಚಿನ್ನದ ಬೆಲೆ ಶೀಘ್ರದಲ್ಲೇ 1 ಲಕ್ಷ ರೂಪಾಯಿ?
ಚಿನ್ನ ಅನ್ನೋದು ಹೂಡಿಕೆ ಮಾಡುವವರಿಗೆ ಖಜಾನೆ ಎನ್ನುವಂತಾಗಿದೆ. ಯಾಕಂದ್ರೆ ಹಳದಿ ಲೋಹ ಅಂದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಯಾರಿಗೆ ಆದರೂ ಲಾಭ ಗ್ಯಾರಂಟಿ. ಹೀಗೆ ಚಿನ್ನ ಅನ್ನೋದು ಹೂಡಿಕೆದಾರರ ಜೇಬು ತುಂಬಿಸುವ ಅಕ್ಷಯ ಪಾತ್ರೆ ಕೂಡ ಆಗಿದೆ. ಆದರೆ ಚಿನ್ನ ಇಷ್ಟಪಡುವ ಮಹಿಳೆಯರಿಗೆ ಈ ವರ್ಷ ಆಘಾತ ಎದುರಾಗುವುದು ಗ್ಯಾರಂಟಿ, ಅಂತಿದ್ದಾರೆ ತಜ್ಞರು. ಯಾಕಂದ್ರೆ ಚಿನ್ನದ ಬೆಲೆ ಇದೇ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ದಟ್ಟವಾಗಿದೆ.
ಅಂದಹಾಗೆ ಈ ತಿಂಗಳು ಪೂರ್ತಿ ಏರಿಕೆ ಕಾಣುತ್ತಾ ಹೊಸ ದಾಖಲೆ ಬರೆದಿದ್ದ ಚಿನ್ನದ ಬೆಲೆ ಒಂದು ಸ್ವಲ್ಪ ಇಳಿಕೆಯತ್ತ ಜಾರುತ್ತಿದೆ. ಆದರೂ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಈಗ ಇರುವ ಬೆಲೆಗಿಂತ ಇನ್ನೂ ಹೆಚ್ಚಾಗಲಿದೆ. ಅದರಲ್ಲಿಯೂ 1 ಲಕ್ಷ ರೂಪಾಯಿ ಮುಟ್ಟುವುದು ಬಹುತೇಕ ಪಕ್ಕಾ ಅಂತಿದ್ದಾರೆ ತಜ್ಞರು. ಭಾರತದಲ್ಲಿ ಇದೀಗ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 66,850 ರೂಪಾಯಿ ಇದ್ರೆ, 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 72,930 ರೂಪಾಯಿಗೆ ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 8,400 ರೂಪಾಯಿ ಇದ್ದರೆ, ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಬರೋಬ್ಬರಿ 66,850 ರೂಪಾಯಿಗೆ ತಲುಪಿದೆ.

ಚಿನ್ನದ ಬೆಲೆಯಲ್ಲಿ ಏರಿಕೆ ಯಾಕೆ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ರಾಜಕೀಯ ಪರಿಸ್ಥಿತಿ ಸರಿಯಾಗಿ ಇಲ್ಲ. ಮತ್ತೊಂದ್ಕಡೆ ರಷ್ಯಾ & ಉಕ್ರೇನ್ ನಡುವೆ ಯುದ್ಧ ಶುರುವಾದ ನಂತರ ಹೂಡಿಕೆ ಮಾಡುವವರಿಗೆ ಭಯವು ಕೂಡ ಶುರುವಾಗಿದೆ. ಯಾಕಂದ್ರೆ ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೂ ಯುದ್ಧವು ಶುರುವಾದರೆ ಕುಸಿತ ಖಚಿತ. ಇದೇ ಕಾರಣಕ್ಕೆ, ಚಿನ್ನದ ಮೇಲಿನ ಹೂಡಿಕೆಯೇ ಬೆಸ್ಟ್ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.
ಇದರ ಜೊತೆಗೆ ಇನ್ನೂ ಹಲವು ಕಾರಣಗಳಿಂದ ಚಿನ್ನದ ಬೆಲೆ ಇದೀಗ ಹೆಚ್ಚಾಗುತ್ತಿದೆ. ಇತ್ತೀಚೆಗೆ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಶುರುವಾಯ್ತು ಎನ್ನುವಷ್ಟರಲ್ಲಿ, ಚಿನ್ನ ಮತ್ತೆ ಭಾರಿ ಏರಿಕೆ ಕಾಣುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಒತ್ತಡಗಳ ಪರಿಣಾಮ ಇಸ್ರೇಲ್ & ಇರಾನ್ ಯುದ್ಧ ನಡೆದಿಲ್ಲ. ನಂತರ ಚಿನ್ನದ ಬೆಲೆ ಸ್ವಲ್ಪ ಸ್ವಲ್ಪ ಇಳಿಕೆ ಕಾಣುತ್ತಿದ್ದರೂ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಏರಿಕೆ ಗ್ಯಾರಂಟಿ ಅಂತಿದ್ದಾರೆ ತಜ್ಞರು.
ಚಿನ್ನದ ಬೆಲೆ ಯಾವ ನಗರದಲ್ಲಿ ಎಷ್ಟು?
ಇನ್ನು ಭಾರತದ ವಿವಿಧ ನಗರಗಳಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ ಎಷ್ಟು ಬೆಲೆಯಿದೆ? ಅನ್ನೋದನ್ನ ನೋಡೋದಾದ್ರೆ, ಬೆಂಗಳೂರು ನಗರದಲ್ಲಿ 66,850 ರೂಪಾಯಿ, ಚೆನ್ನೈನಲ್ಲಿ 67,700 ರೂಪಾಯಿ, ಮುಂಬೈ ನಗರದಲ್ಲಿ 66,850 ರೂಪಾಯಿ, ದೆಹಲಿಯಲ್ಲಿ 67,000 ರೂಪಾಯಿ, ಕೊಲ್ಕತ್ತಾ ನಗರದಲ್ಲಿ 66,850 ರೂ. ಕೇರಳದಲ್ಲಿ 66,850 ರೂಪಾಯಿ ಇದೆ. ಇನ್ನುಳಿದಂತೆ ಅಹ್ಮದಾಬಾದ್ ನಗರದಲ್ಲಿ 66,900 ರೂಪಾಯಿ, ಜೈಪುರದಲ್ಲಿ 67,000 ರೂ. ಇದ್ದರೆ, ಲಖನೌ ನಗರದಲ್ಲಿ 67,000 ರೂಪಾಯಿ ಹಾಗೂ ಭುವನೇಶ್ವರ್ ನಗರದಲ್ಲಿ ಈಗ 66,850 ರೂಪಾಯಿಗೆ ಚಿನ್ನದ ಬೆಲೆ ತಲುಪಿದೆ.
ಯುದ್ಧದ ಎಫೆಕ್ಟ್ ಇದು?
ಜಾಗತಿಕವಾಗಿ ಯುದ್ಧ ಶುರುವಾದಾಗ ಮೊದಲು ಅದರ ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ & ಡೀಸೆಲ್ ಮೇಲೆ. ಯಾಕೆ ಅಂದ್ರೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ. ಹೀಗಾಗಿ ಯುದ್ಧ ಶುರುವಾದ ತಕ್ಷಣ ಚಿನ್ನದ ರೂಪಕ್ಕೆ ತಮ್ಮ, ತಮ್ಮ ಸಂಪತ್ತು ಅಂದ್ರೆ ಹವಣವನ್ನು ಬದಲಾಯಿಸಿ ಸಂಗ್ರಹ ಮಾಡಲು ಜನರು ಮುಂದೆ ಬರುತ್ತಾರೆ. ಹಾಗೇ ದೇಶಗಳು ಕೂಡ ಅಪಾರ ಪ್ರಮಾಣದ ಚಿನ್ನವನ್ನು ಯುದ್ಧದ ಸಮಯ ಬಂದಾಗ ಖರೀದಿ ಮಾಡುತ್ತವೆ. ಈಗ ಕೂಡ ಅದೇ ಆಗುತ್ತಿದೆ.
ಯಾಕಂದ್ರೆ ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತದೆ, ಹಾಗೆಯೇ ಷೇರು ಮಾರುಕಟ್ಟೆಯ ಇತರ ಹೂಡಿಕೆಗಳು ಕುಸಿದು ಬೀಳುತ್ತವೆ. ಹೀಗಾಗಿ ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಾರೆ. ಇದೇ ಕಾರಣಕ್ಕೆ, ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತೆ. ಹಾಗೇ ಇನ್ನೂ ಹಲವು ಕಾರಣಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಆಗುತ್ತವೆ. ಈಗ ಚಿನ್ನ 75,000 ರೂಪಾಯಿ ಗಡಿ ದಾಟಿದೆ. ಇನ್ನೇನು 1 ಲಕ್ಷ ರೂಪಾಯಿ ಗಡಿಯನ್ನೂ ದಾಟುವ ನಿರೀಕ್ಷೆ ಇದೆ.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು. ಇದು ಆಭರಣ ಪ್ರಿಯರಿಗೆ ಬೇಸರ ತರಿಸಿದರೂ, ಚಿನ್ನದ ಮೇಲೆ ಹೂಡಿಕೆ ಮಾಡಿದ್ದ ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆ ಖುಷಿ ನೀಡುತ್ತಿದೆ.
ಹಳದಿ ಲೋಹ ಎಲ್ಲರಿಗೂ ಇಷ್ಟ!
ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ, ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದರೂ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ, ಮತ್ತು ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಪರಿಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಬೇಡಿಕೆ ಬಂದೇ ಬರುತ್ತದೆ. ಹೀಗಾಗಿಯೇ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರಿಗೂ, ಹಳದಿ ಲೋಹ ಬೆನ್ನೆಲುಬಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಹಳದಿ ಲೋಹ ಅಂದ್ರೆ ಚಿನ್ನ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ದಟ್ಟವಾಗಿದೆ.
ಆಭರಣ ಪ್ರಿಯರಿಗೆ ಚಿನ್ನವೇ ಚನ್ನ!
ಒಂದು ಕಡೆ ಹೂಡಿಕೆ ಮಾಡುವವರಿಗೆ ಚಿನ್ನದ ಬೆಲೆ ಹೆಚ್ಚಾದರೆ ಖುಷಿ ಆಗುತ್ತದೆ, ಆದರೂ ಸಾಮಾನ್ಯವಾಗಿ ಆಭರಣಗಳನ್ನ ಹೆಚ್ಚಾಗಿ ಇಷ್ಟಪಡುವ ಮಹಿಳೆಯರಿಗೆ ಚಿನ್ನದ ಬೆಲೆ ಕುಸಿದರೆ ಮಾತ್ರ ಸಂತಸವಾಗುತ್ತದೆ. ಹೀಗೆ ಚಿನ್ನದ ಬೆಲೆಯು ಕಳೆದ 1 ತಿಂಗಳಿಂದ ಭಾರಿ ಏರಿಳಿತವನ್ನು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಂಡು, ಆ ನಂತರದಲ್ಲಿ ಮತ್ತೆ ಏರಿಕೆಯ ಹಾದಿಗೆ ಮರಳುತ್ತದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಆಭರಣವನ್ನ ಕೊಳ್ಳುವವರಿಗೆ ಈ ತಿಂಗಳು ಮತ್ತಷ್ಟು ಸಿಹಿಸುದ್ದಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಈ ರೀತಿ ಚಿನ್ನದ ಏರುಪೇರು ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕತೆಯನ್ನೇ ಅಲುಗಾಡಿಸುತ್ತಿದೆ.
ಕಡಿಮೆ ಆಗುತ್ತಿದೆ ಚಿನ್ನದ ಬೆಲೆ!
ಚಿನ್ನದ ಬೆಲೆಯು ಇಳಿಕೆ ಕಂಡ ನಂತರ ಖರೀದಿ ಮಾಡೋಣ ಅಂತಾ ಕಾಯುತ್ತಿದ್ದ ಮಹಿಳೆಯರು ಸೇರಿದಂತೆ, ಚಿನ್ನ ಪ್ರಿಯರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆ ಒಂದೇ ಸಮನೆ ಏರಿಕೆ ಆಗುತ್ತಿದೆ ಅಂತಾ ಮಹಿಳೆಯರು & ಚಿನ್ನ ಖರೀದಿ ಮಾಡಬೇಕಿದ್ದವರು ಬೇಸರ ಹೊರಹಾಕಿದ್ದರು. ಆದರೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಕಡಿಮೆ ಆಗಿದೆ. ಮತ್ತೊಂದು ಕಡೆ ಇನ್ನೇನು ಅಕ್ಷಯ ತೃತೀಯ ಹತ್ತಿರ ಬಂದ ಕಾರಣಕ್ಕೆ ಆಭರಣ ಪ್ರಿಯರು ಕೂಡ ಚಿನ್ನವನ್ನು ಖರೀದಿ ಮಾಡೋಕೆ ಮುಗಿಬೀಳುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅಕ್ಷಯ ತೃತೀಯ ಬರಲಿದ್ದು, ಇದಕ್ಕಾಗಿ, ಆಭರಣಗಳ ಅಂಗಡಿ ಮಾಲೀಕರು ಕೂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗೇ ಭಾರಿ ಡಿಸ್ಕೌಂಟ್ ಕೂಡ ಘೋಷಿಸುತ್ತಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಚಿನ್ನದ ಹೂಡಿಕೆ
ಚಿನ್ನದ ಮೇಲೆ ಹಲವು ರೀತಿಯಲ್ಲಿ ಹೂಡಿಕೆ ಮಾಡಬಹುದು, ಒಂದು ಚಿನ್ನವನ್ನ ಖರೀದಿ ಮಾಡಿ ಅದರ ಮೇಲೆ ನೇರ ಹೂಡಿಕೆ ಮಾಡಬಹುದು. ಇದರ ಜೊತೆಗೆ 'ಗೋಲ್ಡ್ ಬಾಂಡ್' ಮೂಲಕ ಕೂಡ ಚಿನ್ನದ ಮೇಲೆ ಹೂಡಿಕೆ ಮಾಡಲು ಸೌಲಭ್ಯ ಇದೆ. ಹಾಗೇ ಈ ಹೂಡಿಕೆ ಮೂಲಕ ಲಾಭ ಕೂಡ ಪಡೆಯಬಹುದು ಅಂತಾರೆ ತಜ್ಞರು. ಹೀಗೆ ಚಿನ್ನವು ಹಲವು ರೀತಿ, ಹೂಡಿಕೆಗೆ ಜನರಿಂದ ಆಹ್ವಾನ ನೀಡುತ್ತದೆ. ಅದರಲ್ಲೂ ಭಾರತದಲ್ಲಿ ಅತ್ಯಂತ ನಂಬಿಕಸ್ಥ ಹೂಡಿಕೆ ವಿಭಾಗವಾಗಿ ಕೂಡ ಚಿನ್ನ ಆಧುನಿಕ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿದೆ. ನಮ್ಮಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಕೂಡ ಚಿನ್ನದ ಮೇಲಿನ ಹೂಡಿಕೆಯನ್ನ ಜನ ಹೆಚ್ಚಾಗಿ ನಂಬುತ್ತಾರೆ.












Click it and Unblock the Notifications