Gold Price: ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ? ಮುಂದಿನ ವಾರ ಚಿನ್ನ ಬೆಲೆಯಲ್ಲಿ ಭಾರಿ ಇಳಿಕೆ?
ಚಿನ್ನದ ಬೆಲೆ ಗಗನಕ್ಕೆ ಏರಿದ್ದು, ಬಡವರು & ಮಧ್ಯಮ ವರ್ಗದ ಜನರು ಚಿನ್ನ ಖರೀದಿಗಾಗಿ ಪರದಾಡುತ್ತಿದ್ದಾರೆ. ಚಿನ್ನ, ಚಿನ್ನ ಅಂತಾ ಆಭರಣ ಪ್ರಿಯ ಮಹಿಳೆಯರು & ಹುಡುಗಿಯರು ಸದಾ ಚಿನ್ನದ ಧ್ಯಾನ ಮಾಡ್ತಾ ಇರುತ್ತಾರೆ. ಹೀಗೆ ಬಂಗಾರಕ್ಕೆ ಭರ್ಜರಿ ಬೆಲೆ ಬಂದಿರುವ ಹಿನ್ನೆಲೆ ಚಿನ್ನ ಖರೀದಿಗೆ ಸಾಕಷ್ಟು ಜನ ಮುಗಿಬಿದ್ದು ಬರುತ್ತಿದ್ದಾರೆ. ಆದರೆ, ನಿನ್ನೆ ದಿಢೀರ್ ಚಿನ್ನದ ಬೆಲೆ ಕುಸಿತ ಕಂಡಿದೆ. ಹಾಗಾದ್ರೆ, ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ?
ಭಾರತ ಚಿನ್ನ ಖರೀದಿ ಮಾಡುವ ದೇಶಗಳಲ್ಲಿ ಮುಂಚೂಣಿಯಲ್ಲಿ ಇದೆ. ಯಾಕಂದ್ರೆ ನಮ್ಮ ದೇಶದಲ್ಲಿ ಚಿನ್ನ ಖರೀದಿಗೆ ಪ್ರಜೆಗಳೇ ಆದ್ಯತೆ ನೀಡುತ್ತಾರೆ. ವಿದೇಶಗಳಲ್ಲಿ ಚಿನ್ನ ಖರೀದಿಗಾಗಿ ಸರ್ಕಾರಗಳು ಮುಂದೆ ಬಂದರೆ, ಭಾರತ ದೇಶದಲ್ಲಿ ಈ ಮೊದಲಿನಿಂದ ಕೂಡ ಸರ್ಕಾರವನ್ನು ಮೀರಿಸಿ ಜನರೇ ಚಿನ್ನ ಖರೀದಿಗೆ ಮುಂದೆ ಬರುತ್ತಿದ್ದಾರೆ.

ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ?
ಈಗಲೂ ಅಷ್ಟೇ ಭಾರತ ಸರ್ಕಾರ ಸಂಗ್ರಹ ಮಾಡಿರುವ ಚಿನ್ನಕ್ಕಿಂತ ಹತ್ತಾರು ಪಟ್ಟು ಹೆಚ್ಚು ಚಿನ್ನ ಭಾರತೀಯ ಪ್ರಜೆಗಳ ಮನೆ ತಿಜೋರಿಯಲ್ಲಿ ಇದೆ. ಇಂತಹ ಸಮಯದಲ್ಲೇ, ಚಿನ್ನದ ಬೆಲೆಯು ಕುಸಿತ ಕಂಡಿದ್ದು, ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ? ಮುಂದಿನ ವಾರ ಚಿನ್ನ ಬೆಲೆಯಲ್ಲಿ ಭಾರಿ ಇಳಿಕೆ? ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಹೌದು, ಈಗಿನ ಲೆಕ್ಕಾಚಾರ ನೋಡುವುದಾದರೆ ಚಿನ್ನ ಬೆಲೆ ಜನವರಿ ತಿಂಗಳ 2ನೇ ವಾರದಲ್ಲಿ ಭರ್ಜರಿ ಇಳಿಕೆ ಕಾಣುವ ನಿರೀಕ್ಷೆ ಇದೆ. ಹಾಗೇ ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ ಕಾಣುತ್ತಾ? ಎಂಬ ನಿರೀಕ್ಷೆಯಲ್ಲಿ ಆಭರಣ ಪ್ರಿಯರು ಇದ್ದಾರೆ. ಆದರೆ ಈಗ ಚಿನ್ನಕ್ಕೆ ಇರುವ ಡಿಮ್ಯಾಂಡ್ ನೋಡಿದರೆ ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ ಕಾಣುವುದು ಅನುಮಾನ. ಆದ್ರೆ ಚಿನ್ನದ ಬೆಲೆ ದೊಡ್ಡ ಪ್ರಮಾಣದಲ್ಲೇ ಇಳಿಕೆ ಕಾಣುವ ನಿರೀಕ್ಷೆ ದಟ್ಟವಾಗಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?
22 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆ!
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡು, ಪ್ರತಿ 100 ಗ್ರಾಂ ಆಭರಣ ಚಿನ್ನ ಬೆಲೆ ನಿನ್ನೆ 4,500 ರೂಪಾಯಿ ಕುಸಿತ ಕಂಡಿತ್ತು. ಹೀಗೆ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ 450 ರೂಪಾಯಿ ಕಡಿತವಾಗಿತ್ತು. ಆಭರಣ ಚಿನ್ನದ ಬೆಲೆಯು ಕುಸಿತದ ನಂತರ ಪ್ರತಿ 10 ಗ್ರಾಂಗೆ 72,150 ರೂಪಾಯಿ ಬೆಲೆ ಅಗಿದ್ದು 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿತ್ತು. 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 10 ಗ್ರಾಂಗೆ 490 ರೂಪಾಯಿ ಕುಸಿತ ಕಂಡು 78,710 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲಿ ನಿನ್ನೆ 1,000 ರೂಪಾಯಿ ಕುಸಿತ ಕಂಡಿದ್ದು, ಈಗ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 91,500 ರೂಪಾಯಿ ಆಗಿದೆ.
ಭಾರತಕ್ಕೂ ಇದೆ ದೊಡ್ಡ ಇತಿಹಾಸ!
ಜಾಗತಿಕ ಮಟ್ಟದಲ್ಲಿ ಚಿನ್ನ ಬಳಕೆಯ ವಿಚಾರದಲ್ಲಿ ಭಾರತೀಯರೇ ಮುಂದೆ ಇದ್ದಾರೆ. ಈ ಹೆಮ್ಮೆ ಇಂದು ಅಥವಾ ನಿನ್ನೆಯದ್ದಲ್ಲ. ಸಾವಿರಾರು ವರ್ಷಗಳಿಂದ ಕೂಡ ಭಾರತದಲ್ಲಿ ಹೀಗೆ ಚಿನ್ನವನ್ನು ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಚಿನ್ನವನ್ನ ವ್ಯಾಪಾರದ ಉದ್ದೇಶಕ್ಕಾಗಿ, ಭಾರತದಲ್ಲಿ ಈ ಹಿಂದಿನಿಂದ ಕೂಡ ಬಳಕೆ ಮಾಡಿಕೊಂಡು ಬರಲಾಗುತ್ತಿತ್ತು. ಸಾವಿರ ಸಾವಿರ ವರ್ಷಗಳ ಹಿಂದೆಯೇ ಅತ್ಯುತ್ತಮ ಚಿನ್ನವನ್ನು ಭಾರತದಲ್ಲಿ ತಯಾರು ಮಾಡಲಾಗುತ್ತಿತ್ತು.
ಆಗಿನ ಕರೆನ್ಸಿ ಅಂದ್ರೆ ನಾಣ್ಯಗಳ ಮುದ್ರಣಕ್ಕೆ ಕೂಡ ಚಿನ್ನವನ್ನು ಬಳಕೆ ಮಾಡಲಾಗುತ್ತಿತ್ತು. ಹೀಗೆ ನಮ್ಮ ನೆಲದ ಜೊತೆಯಲ್ಲೇ ಚಿನ್ನವು ಕೂಡ ಬೆರೆತು ಹೋಗಿದೆ. ಹೀಗಾಗಿಯೇ ಇಂದಿಗು ಕೂಡ ಈ ವಿಚಾರದಲ್ಲಿ ಭಾರತ ಮುಂದೆ ಇದ್ದು, ಅಪಾರ ಪ್ರಮಾಣದ ಚಿನ್ನವನ್ನು ಭಾರತ ಪ್ರತಿವರ್ಷ ಆಮದು ಮಾಡಿಕೊಳ್ಳುತ್ತದೆ. ಇದು ಚಿನ್ನದ ಬೆಲೆಯನ್ನ ಹೆಚ್ಚು ಮಾಡುತ್ತಿದೆ.












Click it and Unblock the Notifications