70,000 ರೂಪಾಯಿಗೆ ಚಿನ್ನ ಬೆಲೆ ಶೀಘ್ರದಲ್ಲೇ ಕುಸಿದು ಬೀಳುವ ಸಾಧ್ಯತೆ... Gold Price

ಚಿನ್ನ ಬೆಲೆ ಭಾರಿ ಕುಸಿತ... ಅಂದಹಾಗೆ ಈ ಸುದ್ದಿ ಕೇಳಲು ಎಷ್ಟು ಖುಷಿ ಆಗುತ್ತದೆ ಅಲ್ಲವೇ. ಹೌದು, ಹೀಗೆ ಚಿನ್ನದ ಬೆಲೆ ಅಥವಾ ಬಂಗಾರದ ಬೆಲೆ ಕುಸಿತ ಕಾಣಲಿ ಅಂತಾನೇ ಕಾಯುತ್ತಾ ಕೂತಿದ್ದಾರೆ ಕೋಟಿ ಕೋಟಿ ಜನ. ಆದರೆ ಚಿನ್ನದ ಬೆಲೆ ಕುಸಿತ ಕಾಣುವ ಬದಲು ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡು ಆತಂಕ ಮೂಡಿಸಿ, ಆಭರಣ ಪ್ರಿಯರು ಚಿಂತೆ ಮಾಡುವಂತೆ ಆಗಿತ್ತು. ಅದರಲ್ಲೂ ಇದೇ ರೀತಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದ್ದರೆ ಮದುವೆ ಆಗುವುದು ಹೇಗೆ? ಅನ್ನೋ ಚರ್ಚೆ ಶುರುವಾಗಿತ್ತು. ಹೀಗಿದ್ದಾಗಲೇ, 70,000 ರೂಪಾಯಿಗೆ ಚಿನ್ನ ಬೆಲೆ ಶೀಘ್ರದಲ್ಲೇ ಕುಸಿದು ಬೀಳುವ ಸಾಧ್ಯತೆ...

ಚಿನ್ನ.. ಚಿನ್ನ.. ಚಿನ್ನ.. ಹಬ್ಬಗಳು ಬಂದರೆ ಸಾಕು ಆಭರಣ ಪ್ರಿಯ ಮಹಿಳೆಯರಿಗೆ ಇದೊಂದೇ ಧ್ಯಾನ. ಭಾರತವು ಚಿನ್ನ ಖರೀದಿ ಮಾಡುವ ದೇಶಗಳಲ್ಲಿ ಮುಂಚೂಣಿಯಲ್ಲಿ ಇರುವ ದೇಶವಾಗಿದೆ. ಯಾಕಂದ್ರೆ ನಮ್ಮ ದೇಶದಲ್ಲಿ ಚಿನ್ನ ಖರೀದಿಗೆ ಪ್ರಜೆಗಳೇ ಆದ್ಯತೆಯನ್ನ ನೀಡ್ತಾರೆ. ವಿದೇಶಗಳಲ್ಲಿ ಚಿನ್ನ ಖರೀದಿಗಾಗಿ ಸರ್ಕಾರಗಳು ಮುಂದೆ ಬಂದರೆ, ಭಾರತದಲ್ಲಿ ಈ ಮೊದಲಿನಿಂದಲು ಕೂಡ ಸರ್ಕಾರವನ್ನು ಮೀರಿಸಿ ಜನರೇ ಚಿನ್ನ ಖರೀದಿಗೆ ಮುಂದೆ ಬರುತ್ತಿದ್ದಾರೆ. ಭಾರತೀಯರಿಗೆ ಈ ಗುಣ ಸಾವಿರಾರು ವರ್ಷಗಳಿಂದ ಒಲಿದು ಬಂದಿದ್ದು, ಆರ್ಥಿಕ ದೃಷ್ಟಿಯಿಂದ ಇದು ಉತ್ತಮವಾಗಿದೆ ಅಂತಾರೆ ತಜ್ಞರು. ಹಾಗಾದ್ರೆ ಚಿನ್ನದ ಬೆಲೆ 70,000 ರೂಪಾಯಿಗೆ ಕುಸಿತ ಯಾವಾಗ?

Gold Price May Decrease To 70 000 Rupees Before Few Months In India

70,000 ರೂಪಾಯಿಗೆ ಚಿನ್ನದ ಬೆಲೆ...

ಹೌದು, ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಾಣುವುದು ಗ್ಯಾರಂಟಿ ಆಗಿದೆ. ಇದೀಗ ಚಿನ್ನ ಬೆಲೆ ಆಕಾಶ ಮುಟ್ಟಿದ್ದು ಬಡವರು & ಮಧ್ಯಮ ವರ್ಗದ ಜನರು ಚಿನ್ನ ಖರೀದಿ ಮಾಡಲು ಸಾವಿರ ಸಾರಿ ಯೋಚನೆ ಮಾಡುವಂತೆ ಆಗಿದೆ. ಯಾಕಂದ್ರೆ ಲಕ್ಷ ಲಕ್ಷ ಖರ್ಚು ಮಾಡಿ ಚಿನ್ನ ಖರೀದಿ ಮಾಡುವುದೇ ಕಷ್ಟ. ಬೆಂಗಳೂರಲ್ಲಿ ಇದೀಗ ಪ್ರತಿ 10 ಗ್ರಾಂ ಶುದ್ಧ ಚಿನ್ನ ಅಂದ್ರೆ 24 ಕ್ಯಾರೆಟ್ ಚಿನ್ನದ ಬೆಲೆ 1,02,330 ರೂಪಾಯಿ ಆಗಿದೆ. ಹಾಗೇ ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 93,800 ರೂಪಾಯಿ ಇದೆ. ಇಂತಹ ಸಮಯದಲ್ಲೇ, 70,000 ರೂಪಾಯಿಗೆ ಚಿನ್ನ ಬೆಲೆ ಶೀಘ್ರದಲ್ಲೇ ಕುಸಿದು ಬೀಳುವ ಸಾಧ್ಯತೆ...

ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ನಿರೀಕ್ಷೆ

ಜಾಗತಿಕ ಆರ್ಥಿಕತೆ ಇದೀಗ ಸಂಕಷ್ಟದಲ್ಲಿ ಸಿಲುಕಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋ ಪರಿಸ್ಥಿತಿ ಇದೆ. ಅದರಲ್ಲೂ ಇರಾನ್ & ಇಸ್ರೇಲ್ ಯುದ್ಧ, ಗಾಜಾ ಪಟ್ಟಿ & ಇಸ್ರೇಲ್ ನಡುವಿನ ಯುದ್ಧ ಸೇರಿದಂತೆ ಉಕ್ರೇನ್ & ರಷ್ಯಾ ಯುದ್ಧಗಳ ಪರಿಣಾಮ ಕಳೆದ ಕೆಲವು ವರ್ಷಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿತ್ತು ಅನ್ನೋದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಇನ್ನು ಚಿನ್ನ ಖರೀದಿಗೆ ಈ ಸಮಯದಲ್ಲಿ ಅಂದರೆ ಯುದ್ಧದ ಸಮಯದಲ್ಲಿ ಡಿಮ್ಯಾಂಡ್ ಹೆಚ್ಚಾಗಿದ್ದ ಪರಿಣಾಮ ಚಿನ್ನದ ಬೆಲೆ ಕೂಡ ಆಕಾಶ ಮುಟ್ಟಿತ್ತು. ಆದರೆ ಇದೀಗ ಯುದ್ಧಗಳಿಗೆ ಬ್ರೇಕ್ ಬೀಳುತ್ತಿದ್ದು, ಉಕ್ರೇನ್ & ರಷ್ಯಾ ಯುದ್ಧ ಕೂಡ ನಿಂತು ಹೋಗುವ ನಿರೀಕ್ಷೆ ಇದೀಗ ಮೂಡಿದೆ. ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಅಮೆರಿಕ ಅಧ್ಯಕ್ಷರು ಒತ್ತಡ ಹೇರುತ್ತಿದ್ದಾರೆ.

ಹೀಗಾಗಿ ಚಿನ್ನದ ಬೆಲೆ ಇನ್ನು ಕೆಲವೇ ತಿಂಗಳಲ್ಲಿ ಭಾರಿ ಕುಸಿತ ಕಾಣುವ ನಿರೀಕ್ಷೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ತಜ್ಞರು. ಚಿನ್ನದ ಬೆಲೆಯು 2025 ಡಿಸೆಂಬರ್ ತಿಂಗಳ ಒಳಗೆ ಸಾಕಷ್ಟು ದೊಡ್ಡ ಪ್ರಮಾಣ ಕುಸಿತವನ್ನ ಕಾಣುವ ನಿರೀಕ್ಷೆ ಮೂಡಿದೆ. 10 ಗ್ರಾಂ ಶುದ್ಧ ಚಿನ್ನ ಅಂದ್ರೆ 24 ಕ್ಯಾರೆಟ್ ಚಿನ್ನದ ಬೆಲೆ 1,02,330 ರೂಪಾಯಿ ಈಗ ಇದ್ದರೆ ಆ ಬೆಲೆ ಸುಮಾರು 80,000 ರೂಪಾಯಿಗೆ ಹಾಗೂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 70,000 ರೂಪಾಯಿಗೆ ಕುಸಿತ ಕಾಣುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಅಕಸ್ಮಾತ್ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಯುದ್ಧಗಳು ಶುರುವಾದರೆ ಅಥವಾ ಆರ್ಥಿಕತೆ ಅಲ್ಲೋಲ ಕಲ್ಲೋಲವಾದರೆ ಪರಿಸ್ಥಿತಿ ಉಲ್ಟಾ ಆಗಲಿದ್ದು, ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+